ಖಲಿಸ್ತಾನಿಗಳ ಪರ ನಿಂತ ಕೆನಡಾ ಪ್ರಧಾನಿಗೆ ಮಂಗಳಾರತಿ, ದ್ವಿಪಕ್ಷೀಯ ಸಭೆಯಲ್ಲಿ ಮೋದಿ ವಾರ್ನಿಂಗ್!

ಜಿ20 ಶೃಂಗಸಭೆಗೆ ಬಂದ ಕೆನಡಾ ಪ್ರಧಾನಿಗೆ ಮುಖಭಂಗವಾಗಿದೆ. ಬರೋಬ್ಬರಿ 36 ಗಂಟೆಗಳ ವಿಳಂಬದ ಬಳಿಕ ಕೆನಡಾ ಪ್ರಧಾನಿ ಜಸ್ಟೀನ್‌ ಟ್ರೂಡೋ ದೇಶಕ್ಕೆ ವಾಪಾಸ್‌ ತೆರಳಿದ್ದಾರೆ. ಆದರೆ, ಕೆನಡಾದಲ್ಲಿ ಅವರಿಗೆ ಸಾಕಷ್ಟು ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇದೆ. 
 

Canada Prime minister Justin trudeau in G20 Earful from Modi govt criticism back in home san

ನವದೆಹಲಿ (ಸೆ.12): ಜಿ20 ಶೃಂಗಸಭೆಗೆ ಬಂದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋಗೆ ಮುಖಭಂಗವಾಗಿದೆ. ಅದಕ್ಕೆ ಕಾರಣ ಅವರ ಖಲಿಸ್ತಾಲಿ ಪರ ಒಲವು. ತಮ್ಮ ಪ್ರಧಾನಿಗೆ ಭಾರತದಲ್ಲಿ ಅವಮಾನವಾಗಿದೆ ಎಂದು ಕೆನಡಾ ವಿಪಕ್ಷಗಳು ಕಿಡಿಕಾರಿವೆ. ಜಿ20 ಶೃಂಗಸಭೆಯಲ್ಲಿ ಟ್ರೂಡೋ ಅವರನ್ನು ಭಾರತ ಸರ್ಕಾರ ಸಂಪೂರ್ಣವಾಗಿ ಮೂಲೆಗುಂಪು ಮಾಡಿತ್ತು. ಇದಕ್ಕೂ ಮುನ್ನ 2018ರ ಪ್ರವಾಸದ ವೇಳೆಯಲ್ಲೂ ಕೆನಡಾ ಪ್ರಧಾನಿ ಮುಖಭಂಗಕ್ಕೆ ಒಳಗಾಗಿದ್ದರು ಎಂದು ಹೇಳಿವೆ. ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವ ಜಸ್ಟೀನ್‌ ಟ್ರೂಡೋಗೆ ಪ್ರಧಾನಿ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಖಲಿಸ್ತಾನಿಗಳನ್ನು ಯಾವ ಕಾರಣಕ್ಕಾಗಿ ಬೆಂಬಲಿಸುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಸಿಟ್ಟಿನಿಂದಲೇ ಕೇಳಿದ್ದಾರೆ ಎಂದು ವರದಿಯಾಗಿದೆ. ಹೀಗೆ ಖಲಿಸ್ತಾನಿಗಳಿಗೆ ಬೆಂಬಲ ಮುಂದುವರಿಸಿದರೆ ದೇಶಗಳ ಸಂಬಂಧಕ್ಕೆ ಅಡ್ಡಿಯಾಗಲಿ ಎನ್ನುವ ಎಚ್ಚರಿಕೆಯನ್ನೂ ನೀಡಿರುವ ಪ್ರಧಾನಿ,  ಭಾರತದೊಂದಿಗೆ ಉತ್ತಮ ಸಂಬಂಧ ಬೇಕಿದ್ರೆ ಖಲಿಸ್ತಾನಿಗಳ ಮಟ್ಟಹಾಕಿ ಎಂದು ತಾಕೀತು ಮಾಡಿದ್ದಾರೆ.

ಜಿ20 ಶೃಂಗದಲ್ಲಿಯೇ ಮಾತನಾಡಿದ ಪ್ರಧಾನಿ ಮೋದಿ, ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಚಟುವಟಿಕೆಗಳು ಹೆಚ್ಚುತ್ತಿವೆ. ಡ್ರಗ್ ಡೀಲರ್ಗಳು, ಮಾನವ ಕಳ್ಳಸಾಗಾಣಿಕೆ ಅಪರಾಧಿಗಳ ಜತೆ ಖಲಿಸ್ತಾನಿಗಳಿಗೆ ಲಿಂಕ್ ಇದೆ.ಭಾರತದ ರಾಜತಾಂತ್ರಿಕರ ವಿರುದ್ಧ ದಾಳಿಗೆ ಪ್ರಚೋದಿಸಲಾಗುತ್ತಿದೆ. ಕೆನಡಾದಲ್ಲಿ ಹಿಂದೂ ದೇಗುಲಗಳ ಮೇಲೆ ನಿರಂತರ ದಾಳಿಗಳಾಗುತ್ತಿವೆ. ಭಾರತ ವಿರೋಧಿ ಪ್ರತಿಭಟನೆಗಳಿಗೆ ಕೆನಡಾದಲ್ಲಿ ಅವಕಾಶ ನೀಡುತ್ತಿದ್ದೀರಿ. ಎರಡು ದೇಶಗಳ ಸಂಬಂಧ ವೃದ್ಧಿಯಾಗಬೇಕು ಎಂದರೆ ಇದು ನಿಲ್ಲಬೇಕು. ಭಾರತ-ಕೆನಡಾ ಸಂಬಂಧ ಪರಸ್ಪರ ನಂಬಿಕೆ, ಗೌರವದಿಂದ ಇರಬೇಕು' ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ, ಕೆನಡಾ ಪ್ರಧಾನಿಯ ಎದುರು ಹೇಳಿದ್ದಾರೆ.



ಮೋದಿ ತರಾಟೆ ತೆಗೆದುಕೊಂಡ ಬಳಿಕ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟೀನ್‌ ಟ್ರೂಡೋ,ಕೆನಡಾ ಅಭಿವ್ಯಕ್ತಿ ಸ್ವಾತಂತ್ರ್ಯ, ಆತ್ಮಸಾಕ್ಷಿಯ ಸ್ವಾತಂತ್ರ್ಯ ಬೆಂಬಲಿಸುತ್ತದೆ. ಕೆನಡಾ ಶಾಂತಿಯುತ ಪ್ರತಿಭಟನೆಯ ಸ್ವಾತಂತ್ರ್ಯವನ್ನ ರಕ್ಷಿಸುತ್ತದೆ. ದ್ವೇಷ, ಹಿಂಸಾಚಾರ ತಡೆಗಟ್ಟಲು ನಾವು ಸದಾ ಸಿದ್ದರಾಗಿರುತ್ತೇವೆ. ದೇಶದ ಘನತೆಗೆ ಧಕ್ಕೆ ತರುವ ಕೆಲಸಕ್ಕೆ ಕೆನಡಾ ಆಸ್ಪದ ನೀಡಲ್ಲ' ಎಂದು ಹೇಳಿದ್ದಾರೆ. ಇದಲ್ಲದೆ, 2018ರಲ್ಲಿ ಭಾರತದ ಪ್ರವಾಸದ ವೇಳೆ ಮಾಜಿ ಖಾಲಿಸ್ತಾನಿ ಉಗ್ರನನ್ನು ಕೆನಡಾ ಪ್ರಧಾನಿ ಭೇಟಿಯಾಗಿದ್ದರು. 2018ರಲ್ಲಿ ಮಾಜಿ ಖಾಲಿಸ್ತಾನಿ ಉಗ್ರ ಜಸ್ಪಾಲ್ ಅಥ್ವಾಲ್‌ರನ್ನು ಟ್ರೂಡೋ ಭೇಟಿಯಾಗಿದ್ದರು. ಪಂಜಾಬ್ ಮಂತ್ರಿಯ ಕೊಲೆ ಕೇಸ್‌ನಲ್ಲಿ ಅಥ್ವಾಲ್ ಅಪರಾಧಿಯಾಗಿದ್ದಾನೆ.

ಖಲಿಸ್ತಾನಿಗಳ ಸ್ವರ್ಗ ಕೆನಡಾ: ಹಲವು ಖಲಿಸ್ತಾನಿ ಉಗ್ರರಿಗೆ ಕೆನಡಾ ಆಶ್ರಯ ನೀಡಿದೆ. ಪ್ರತ್ಯೇಕ ಖಲಿಸ್ತಾನ್ ದೇಶಕ್ಕಾಗಿ ಖಲಿಸ್ತಾನಿ ಉಗ್ರರು ಹೋರಾಟ ನಡೆಸುತ್ತಿದ್ದಾರೆ. ಜರ್ನೈಲ್ ಸಿಂಗ್ ಬಿಂದ್ರನ್ ವಾಲೆ ಬೆಂಬಲಿಗರಿಗೆ ಕೆನಡಾದಲ್ಲಿ ಆಶ್ರಯ ನೀಡಲಾಗುತ್ತಿದೆ. ಕೆನಡಾದಲ್ಲಿ ರಾಜಕೀಯವಾಗಿ ಸಿಖ್‌ ಸಮುದಾಯ ಪ್ರಬಲವಾಗಿದೆ. ಕೆನಡಾದ ಸಿಖ್ ಸಮುದಾಯದಿಂದ ಪ್ರತ್ಯೇಕ ಖಲಿಸ್ತಾನಕ್ಕೆ ಬೆಂಬಲ ನೀಡಲಾಗುತ್ತಿದೆ. 1985ರಲ್ಲಿ ಏರ್ ಇಂಡಿಯಾ ವಿಮಾನ ಸ್ಫೋಟಿಸಿದ್ದ ಉಗ್ರರಿಗೂ ಕೆನಡಾ ಆಶ್ರಯ ನೀಡಿದೆ. 1985ರಲ್ಲಿ ಏರ್ ಇಂಡಿಯಾ- ಐಸಿ-182 ವಿಮಾನವನ್ನು ಕೆನಡಾ ಉಗ್ರರು ಸ್ಪೋಟಿಸಿದ್ದರು. ವಿಮಾನ ಸ್ಪೋಟದಲ್ಲಿ 329 ಜನರು ಸಾವು ಕಂಡಿದ್ದರು. ಕೆನಡಾದ ಇಂದ್ರಜಿತ್ ಸಿಂಗ್ ಈ ವಿಮಾನ ಸ್ಫೋಟದ ರೂವಾರಿಯಾಗಿದ್ದ.

ಖಲಿಸ್ತಾನಿ ಹೋರಾಟಕ್ಕೆ ತಡೆ ಇಲ್ಲ: ಭಾರತ ವಿರೋಧಿ ಖಲಿಸ್ತಾನಿಗಳ ಬಗ್ಗೆ ಕೆನಡಾ ಪ್ರಧಾನಿ ಮತ್ತದೇ ಮೃದು ನಿಲುವು

ಈ ನಡುವೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ನೇರವಾಗಿ ಪ್ರಧಾನಿಗೆ ಎಚ್ಚರಿಕೆ ನೀಡಿದ್ದಾರೆ. ನಿಜ್ಜರ್ ಹತ್ಯೆ ಮಾಡಿದವರಿಗೆ ನೇರ ಸಂದೇಶ. ನಾವು ನಿಮ್ಮ ರಾಜಕೀಯ ಹತ್ಯೆಗೆ ಕರೆ ನೀಡುತ್ತಿದ್ದೇವೆ. ಮೋದಿ, ಜೈಶಂಕರ್, ದೋವಲ್, ಶಾ  ನಿಮ್ಮನ್ನು ಮುಗಿಸಲು ನಾವು ಬರ್ತಿದ್ದೇವೆ. ಅಂತಾರಾಷ್ಟ್ರೀಯ ಕಾನೂನು ಬಳಸಿ ನಾವು ಬರ್ತಿದ್ದೇವೆ. ಹೌದು... ನಾವು ನಿಮ್ಮ ದೇಶದ ಸಮಗ್ರತೆಗೆ ಸವಾಲೆಸೆಯುತ್ತೇವೆ. ನಿಮ್ಮ ಸಾರ್ವಭೌಮತ್ವಕ್ಕೆ ನಾವು ಸವಾಲೆಸೆಯುತ್ತೇವೆ. ನಾವು ಭಾರತವನ್ನು ಬಾಲ್ಕನೈಸ್ ಮಾಡುತ್ತೇವೆ. ಭಾರತ ದೇಶವನ್ನ ತುಂಡು ತುಂಡು ಮಾಡುತ್ತೇವೆ ಎಂದು ಎಚ್ಚರಿಸಿದ್ದಾನೆ.

ವಿಮಾನದಲ್ಲಿ ದೋಷ: ಭಾರತದಲ್ಲೇ ಉಳಿದ ಕೆನಡಾ ಪ್ರಧಾನಿ

ಏನಿದು ಖಲಿಸ್ತಾನ: ಖಲಿಸ್ತಾನ ಅಂದರೆ ಸಿಖ್ಖರಿಗೆ ಪ್ರತ್ಯೇಕ ರಾಷ್ಟ್ರದ ಸಶಸ್ತ್ರ ಹೋರಾಟ. ಅವಿಭಜಿತ ಪಂಜಾಬ್, ಚಂಡೀಗಢ, ಹರಿಯಾಣ, ಹಿಮಾಚಲ ಒಳಗೊಂಡ ದೇಶ ಎನ್ನುವುದು ಅವರ ವಾದ. ಲಾಹೋರ್ ಅನ್ನು ರಾಜಧಾನಿಯಾಗಿಸಿಕೊಂಡು ಖಲಿಸ್ತಾನ ದೇಶದ ಕನಸು ಕಾಣುತ್ತಿದೆ. ಭಾರತ-ಪಾಕಿಸ್ತಾನ ಇಬ್ಬಾಗವಾದ ನಂತರ ಬಲವಾದ ಖಲಿಸ್ತಾನ್ ಚಿಂತನೆ ಮೊದಲಿಗೆ ಬಂದಿತ್ತು. ಸಿಖ್ ಧರ್ಮದವರಿಗೂ ಪ್ರತ್ಯೇಕ ದೇಶ ಬೇಕೆಂದು ಈ ಸಿದ್ಧಾಂತ ಹುಟ್ಟಿಕೊಂಡಿತು. 1970ರ ನಂತರ ಖಲಿಸ್ತಾನ ಪ್ರತ್ಯೇಕ ರಾಷ್ಟ್ರಕ್ಕಾಗಿ ಸಿಖ್‌ ಹೋರಾಟ ತೀವ್ರಗೊಂಡಿತ್ತು. ಭಾರತ ಒಡೆಯಲು ಪಾಕಿಸ್ತಾನದ ಐ.ಎಸ್.ಐನಿಂದಲೂ ಖಲಿಸ್ತಾನಿಗಳಿಗೆ ಬೆಂಬಲ ಸಿಕ್ಕಿದೆ.

Latest Videos
Follow Us:
Download App:
  • android
  • ios