ಬಲಿಯಾ(ಮಾ.25): ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ನ ಅನಿಷ್ಟದಿಂದ ದೂರ ಮಾಡಿದ್ದಾಯ್ತು. ಮುಂದಿನ ಸರದಿ ಬುರ್ಖಾ ನಿಷೇಧದ್ದು ಎಂದು ಉತ್ತರಪ್ರದೇಶದ ಸಚಿವ ಆನಂದ್‌ ಸ್ವರೂಪ್‌ ಶುಕ್ಲಾ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬುರ್ಖಾ ಧರಿಸುವುದು ದುಷ್ಟಪದ್ಧತಿ. ಮುಂದಿನ ದಿನಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಈ ದುಷ್ಟಪದ್ಧತಿಯಿಂದಲೂ ಮುಕ್ತಿ ನೀಡಲಾಗುವುದು. ಈಗಾಗಲೇ ಹಲವು ದೇಶಗಳಲ್ಲಿ ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ’ ಎಂದರು.

ಮಸೀದಿಗಳಲ್ಲಿ ದೊಡ್ಡದಾಗಿ ಧ್ವನಿವರ್ಧಕ ಬಳಸುತ್ತಿರುವ ಕಾರಣ ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಕೋರ್ಟ್‌ ಅನುಮತಿ ನೀಡಿದ ಪ್ರಮಾಣದಲ್ಲಷ್ಟೇ ಧ್ವನಿವರ್ಧಕ ಬಳಕೆಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ದೂರಿದ ಮಾರನೇ ದಿನವೇ ಅವರು ಈ ಹೇಳಿಕೆ ನೀಡಿದ್ದಾರೆ.