Asianet Suvarna News Asianet Suvarna News

ಮದ್ವೆ ಮನೆಗೆ ಎಂಟ್ರಿ ಕೊಟ್ಟ ಗೂಳಿ: ವೈರಲ್ ವಿಡಿಯೋ

ಗೂಳಿಯೊಂದು ಹೂಂಕರಿಸುತ್ತಾ ಮದ್ವೆ ಮನೆಗೆ ಎಂಟ್ರಿಕೊಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಗಾಬರಿ ವ್ಯಕ್ತಪಡಿಸಿದ್ದಾರೆ.

Bull entered into wedding hall watch viral video akb
Author
First Published Dec 11, 2022, 8:17 PM IST

ಗೂಳಿಯೊಂದು ಹೂಂಕರಿಸುತ್ತಾ ಮದ್ವೆ ಮನೆಗೆ ಎಂಟ್ರಿಕೊಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಗಾಬರಿ ವ್ಯಕ್ತಪಡಿಸಿದ್ದಾರೆ. ಮದುವೆಯೊಂದಕ್ಕಾಗಿ ಸಮಾರಂಭ ನಡೆಯುವ ಸ್ಥಳವನ್ನು ಹಲವು ಬಣ್ಣ ಬಣ್ಣದ ದೀಪಗಳಿಂದ ಜಗಮಗಿಸಲಾಗಿದ್ದು, ಅಲ್ಲಿಗೆ ಕಪ್ಪು ಬಣ್ಣದ ಸಧೃಡ ಮೈಕಟ್ಟನ್ನು ಹೊಂದಿರುವ ದೊಡ್ಡ ಗಾತ್ರದ ಹೋರಿಯೊಂದು ಆಗಮಿಸಿದೆ. ಇದನ್ನು ನೋಡಿದ ಅಲ್ಲಿದ್ದವರೊಬ್ಬರು ಅದನ್ನು ಹೊರಗೆ ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ಆತನನ್ನೇ ಹೋರಿ ಹೂಂಕರಿಸುತ್ತಾ ಓಡಿಸಲು ಹೋಗಿದ್ದು, ಆತ ಹೋರಿಯ ತಿವಿತದಿಂದ ಜಸ್ಟ್ ಮಿಸ್ ಆಗಿದ್ದಾನೆ. ನಂತರ ಸೀದಾ ಮುಂದೆ ಹೋದ ಹೋರಿ ಅಲ್ಲಿದ್ದ ಆಹಾರದ ಸ್ಟಾಲ್‌ಗಳ ಮಧ್ಯೆ ಸಾಗುತ್ತಾ ಎಲ್ಲೂ ಕಣ್ಣಿಗೆ ಕಾಣಿಸದಂತೆ ಊರ ಹೋಗಿದೆ. 

ಮದ್ವೆ ಮನೆಗೆ ಬಂದು ಸ್ವಲ್ಪದರಲ್ಲೇ ಹೊರ ಹೋಗಿರುವುದರಿಂದ ಈ ಹೋರಿಯಿಂದ (Bull) ಯಾರಿಗೂ ಹಾನಿಯಾಗಿಲ್ಲ. ನರೇಂದ್ರ ಸಿಂಗ್ ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 15 ಸೆಕೆಂಡ್‌ಗಳ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದಾರೆ. ಆಹ್ವಾನಿಸದೇ ಮದುವೆಗೆ ಬಂದ ಅತಿಥಿ ಎಂದು ಅವರು ಬರೆದು ಈ ವಿಡಿಯೋವವನ್ನು ಶೇರ್ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರವಿಲ್ಲ. 

ಮದುವೆಗೆ ಬಂದ ಕರಡಿಗಳು 

ಮದುವೆ ಮನೆಗೆ ಪ್ರಾಣಿಗಳು ಬರುವುದು ಇದೇ ಮೊದಲೇನಲ್ಲ. ಆಹಾರ(Food) ಮತ್ತು ಆಶ್ರಯಕ್ಕಾಗಿ ಕಾಡು ಪ್ರಾಣಿಗಳು (Wildlife)  ವಸತಿ ಪ್ರದೇಶಗಳಿಗೆ ಅಲೆದಾಡುವ ವೀಡಿಯೊಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಈ ಹಿಂದೆ ಫೆಬ್ರವರಿಯಲ್ಲಿ ಒಂದು ಕರಡಿ ಮತ್ತು ಅದರ ಎರಡು ಮರಿಗಳು ಮದ್ವೆ ಮನೆಯೊಂದಕ್ಕೆ ಎಂಟ್ರಿ ಕೊಟ್ಟಿದ್ದವು. ಛತ್ತೀಸ್‌ಡದ (Chattisgarh) ಕಂಕೇರ್‌ನಲ್ಲಿ(Kanker) ಈ ಘಟನೆ ನಡೆದಿತ್ತು. ಮದುವೆ ಮನೆಗೆ ಎಂಟ್ರಿ ಕೊಟ್ಟ ಕರಡಿ ಹಾಗೂ ಮರಿಗಳು ನಂತರ ಸೀದಾ ವೇದಿಕೆ ಮೇಲೇರಿದ್ದವು. ನಂತರ ಸ್ವಲ್ಪ ಹೊತ್ತಿನಲ್ಲಿ ಅಲ್ಲಿಂದ ಬೇರೆಡೆ ಹೊರಟು ಹೋಗಿದ್ದವು. ಆ ಸಂದರ್ಭದಲ್ಲಿ ವಧುವರರು ವೇದಿಕೆ ಮೇಲಿರಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿತ್ತು. ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಂಡ ತಾಯಿ ಕರಡಿ ಪಾರ್ಟಿ ನಡೆಯುವ ಸ್ಥಳದಲ್ಲಿ ಅಡ್ಡಾಡುತ್ತಿರುವುದನ್ನು ವಿಡಿಯೋದಲ್ಲಿ ಸೆರೆ ಆಗಿತ್ತು. 

ಮಧುಮಗಳಿಗೆ ಹೀಗೂ ಕನಸುಗಳಿರುತ್ತಾ? ಮೆಹಂದಿಯಲ್ಲಿ ಮೂಡಿಬಂತು ಏನೇನೋ...

ವಧು ಮತ್ತು ವರ ಕುಳಿತುಕೊಳ್ಳಲು ವೆದಿಕೆಯಲ್ಲಿ ಹಾಕಲಾಗಿದ್ದ ಕುರ್ಚಿಗಳ ಕಡೆ ಕರಡಿ ಹೋಗುವುದನ್ನು ಕಾಣಬಹುದು. ವೇದಿಕೆಗೆ ಏರಿದ ತಾಯಿ ಕರಡಿ ಸುತ್ತಲೂ ಒಮ್ಮೆ ನೋಡಿ ವೇದಿಕೆಯಲ್ಲಿ ಮೂಸಿ ಮೂಸಿ ನೋಡುತ್ತಾಳೆ.  ಅದೃಷ್ಟವಶಾತ್, ಮದುವೆಯ ಆರತಕ್ಷತೆ ಮುಗಿದಿದ್ದರಿಂದ ಮತ್ತು ಕರಡಿಗಳು ಒಳಗೆ ಹೋದಾಗ ಅತಿಥಿಗಳು ಇರಲಿಲ್ಲವಾದ್ದರಿಂದ ಯಾರಿಗೂ ಹಾನಿಯಾಗಿಲ್ಲ. ಸ್ಥಳದಲ್ಲಿದ್ದ ಸಿಬ್ಬಂದಿಯೊಬ್ಬರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವಿಡಿಯೋದ ಹಿನ್ನೆಲೆಯಲ್ಲಿ ವಿಡಿಯೋ ಮಾಡುತ್ತಿರುವವರು ಹಿಂದಿ ಭಾಷೆಯಲ್ಲಿ  ತನ್ನ ಸಹೋದ್ಯೋಗಿಯೊಂದಿಗೆ 'ಅಟ್ಯಾಕ್ ತೋ ನಹೀ ಕರೇಗಾ? (ಕರಡಿ ನಮ್ಮ ಮೇಲೆ ದಾಳಿ ಮಾಡುವುದಿಲ್ಲ ) ಎಂದು ಹೇಳುತ್ತಿರುವು ಕೇಳಿಸುತ್ತಿದೆ. ಸ್ವಲ್ಪ ಸಮಯದ ನಂತರ ಕರಡಿಗಳು ಯಾವುದೇ ಗದ್ದಲವನ್ನು ಮಾಡದೇ ಸ್ಥಳದಿಂದ ನಿರ್ಗಮಿಸಿದವು.

ಹಿಮಕರಡಿಗಳ ವಲಸೆ

ಹವಾಮಾನ ಬದಲಾವಣೆ ಹಾಗೂ ತಾಪಮಾನದ ಹೆಚ್ಚಳದಿಂದಾಗಿ ಅಲಾಸ್ಕಾದಿಂದ ರಷ್ಯಾಕ್ಕೆ ಹಿಮಕರಡಿಗಳು ಗಣನೀಯ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪರಿಣಾಮ 2001 ರಿಂದ 2010 ರ ನಡುವೆ, ಅಲಾಸ್ಕಾದ ಹಿಮಕರಡಿಗಳ ಸಂಖ್ಯೆಯಲ್ಲಿ 40 ಪ್ರತಿಶತದಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎನ್ನುವುದನ್ನು ತೋರಿಸುವ ಹಲವು ಚಿಹ್ನೆಗಳಲ್ಲಿ ಪ್ರಾಣಿಗಳ ಜನಸಂಖ್ಯೆ ಮತ್ತು ವಾಸಸ್ಥಳದಲ್ಲಿನ ಬದಲಾವಣೆ ಕೂಡ ಒಂದಾಗಿದೆ. ಅಲಾಸ್ಕಾದ ಹಿಮಕರಡಿಗಳ ಜನಸಂಖ್ಯೆಯು ವೇಗವಾಗಿ ಕ್ಷೀಣಿಸುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. 

ಮದುವೆಗೆ ಬಂದವರಿಗೆ ಕಿಕ್ಕೇರಿಸಿದ ವಧುವಿನ ಬಂಧನ

Follow Us:
Download App:
  • android
  • ios