Asianet Suvarna News Asianet Suvarna News

ಐತಿಹಾಸಿಕ ಗೆಲುವು, ಸಂಪೂರ್ಣ ಬಿಹಾರ, ಜಾರ್ಖಂಡ್‌ನ ಬುದ್ಧ ಪಹಡ್ ನಕ್ಸಲ್ ಮುಕ್ತ!

ಭಾರತದ ಆಂತರಿಕ ಭದ್ರತೆಗೆ ಸವಲಾಗಿದ್ದ ನಕ್ಸಲ್ ಸಮಸ್ಯೆಗೆ ಶಾಶ್ವತ ಅಂತ್ಯಹಾಡುವ ಸಮಯ ಹತ್ತಿರವಾಗುತ್ತಿದೆ. ಇದೀಗ ಒಂದೊಂದೆ ರಾಜ್ಯಗಳು ನಕ್ಸಲ್ ಮುಕ್ತವಾಗುತ್ತಿದೆ. ಸಂಪೂರ್ಣ ಬಿಹಾರ ನಕ್ಸಲ್ ಮುಕ್ತ ರಾಜ್ಯವಾಗಿದ್ದರೆ, ಬದ್ಧ ಪಹಡ್‌ನಲ್ಲಿ ನಕ್ಸಲ್ ಅಂತ್ಯಗೊಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

Buddha Pahad in Jharkhand and entire Bihar naxal free CRPF DG brief Operation Thunderstorm ckm
Author
First Published Sep 21, 2022, 7:00 PM IST

ನವದೆಹಲಿ(ಸೆ.21):  ನಕ್ಸಲ್ ಸಮಸ್ಯೆಗೆ ಭಾರತಕ್ಕೆ ಎದುರಾದ ಭದ್ರತಾ ಸವಾಲುಗಳಲ್ಲಿ ಪ್ರಮುಖವಾಗಿದೆ. 1960ರ ದಶಕದಲ್ಲಿ ಭಾರತದಲ್ಲಿ ನಕ್ಸಲ್ ಸಮಸ್ಯೆಗಳು ಆರಂಭಗೊಂಡಿತು. ಬಳಿಕ ಈ ಆತಂಕದ ವಿರುದ್ದ ಸತತ ಹೋರಾಟ ನಡೆಸಲಾಗುತ್ತಿದೆ. ಇದೀಗ ಇಡೀ ಭಾರತವನ್ನು ನಕ್ಸಲ್ ಮುಕ್ತ ಮಾಡುವ ಅತೀ ದೊಡ್ಡ ಕಾರ್ಯಕ್ಕೆ ಯಶಸ್ಸು ಸಿಗುತ್ತಿದೆ. ರಾಜ್ಯಗಳ ಪೊಲೀಸ್, ಭಾರತೀಯ ಸೇನೆ, ಸಿಆರ್‌ಪಿಎಫ್ ಸೇರಿದಂತೆ ಭದ್ರತಾ ಪಡೆಗಳ ಸತತ ಕಾರ್ಯಾಚರಣೆಯಿಂದ ಇದೀಗ ಸಂಪೂರ್ಣ ಬಿಹಾರ ನಕ್ಸಲ್ ಮುಕ್ತ ರಾಜ್ಯವಾಗಿ ಹೊರಹೊಮ್ಮಿದೆ. ಇತ್ತ ಇತ್ತೀಚಿನ ದಿನಗಳವರೆಗೆ ನಕ್ಸಲ್ ಪ್ರಾಬಲ್ಯ ಹೊಂದಿದ್ದ ಜಾರ್ಖಂಡ್‌ನ ಬುದ್ಧ ಪಹಡ್ (ಬೆಟ್ಟ) ಇದೀಗ ನಕ್ಸಲ್ ಮುಕ್ತವಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿಆರ್‌ಪಿಎಫ್ ಡಿಜಿ ಕುಲ್ದೀಪ್ ಸಿಂಗ್, ಮಹತ್ವದ ಮಾಹಿತಿ ಹಂಚಿಕೊಂಡರು.

ಜಾರ್ಖಂಡ್‌ನ ಬುದ್ಧ ಪಹಾಡ್(Buddha Pahad in Jharkhand), ಕಾಡು ಬೆಟ್ಟಗಳಿಂದ ತುಂಬಿದ ಪ್ರದೇಶದಲ್ಲಿ ನಕ್ಸಲ್(Naxal) ಹಾವಳಿ ಹೆಚ್ಚಾಗಿತ್ತು. ಈ ಬೆಟ್ಟವನ್ನು ಹಾಗೂ ಇಲ್ಲಿನ ಪ್ರದೇಶದಲ್ಲಿ ನಕ್ಸಲ್ ಹಾವಳಿ ತಪ್ಪಿಸಲು CRPF ಹೆಲಿಕಾಪ್ಟರ್ ಮೂಲಕ ಸೇನಾ ಪಡೆಯನ್ನು ಕಳುಹಿಸಲಾಗಿತ್ತು. ಬಳಿಕ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಬುದ್ಧ ಪಹಾಡ್‌ನಲ್ಲಿ 3 ಶಾಶ್ವತ ಶಿಬಿರಗಳನ್ನು CRPF ಸ್ಥಾಪಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದೆ. ಮೂರು ವಿಭಿನ್ನ ಕಾರ್ಯಾಚರಣೆ ಅಡಿಯಲ್ಲಿ ಶಿಬಿರಗಳನ್ನು ಸ್ಥಾಪಿಸಿ , ಶಾಂತಿ ನೆಲೆಸುವಂತೆ ಮಾಡಲಾಗಿದೆ ಎಂದು ಕುಲ್ದೀಪ್ ಸಿಂಗ್(Kuldiep Singh, DG, CRPF) ಹೇಳಿದ್ದಾರೆ. 

ಕರ್ನಾಟಕ ಗಡಿಯ ಕಣ್ಣೂರಲ್ಲಿ ನಕ್ಸಲರು ಪ್ರತ್ಯಕ್ಷ, ಕೂಂಬಿಂಗ್‌ ಆಪರೇಷನ್‌

ನಕ್ಸಲ್ ವಿರುದ್ಧದ ಹೋರಾಟವನ್ನು CRPF ಥಂಡರ್‌ಸ್ಟ್ರೋಮ್(Operation Thunderstorm) ಹೆಸರಿನಡಿ ಕಾರ್ಯಾಚರಣೆ ಮಾಡಿತ್ತು. ಈ ಥಂಡರ್‌ಸ್ಟ್ರೋಮ್‌ನಡಿ 2022ರರ ಎಪ್ರಿಲ್ ತಿಂಗಳಿನಿಂದ ಇಲ್ಲೀವರೆಗೆ ಚತ್ತೀಸಘಡದಲ್ಲಿ 7, ಜಾರ್ಖಂಡ್ 4, ಮಧ್ಯಪ್ರದೇಶದಲ್ಲಿ ಮೂವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ.  578 ಮಾವೋವಾದಿಗಳು ಶರಣಾಗಿದ್ದಾರೆ ಹಾಗೂ ಬಂಧಿಸಾಗಿದೆ ಎಂದು ಕುಲ್ದೀಪ್ ಸಿಂಗ್ ಹೇಳಿದ್ದಾರೆ.

ಬಿಹಾರದಲ್ಲಿ(Bihar) ಸತತ ಕಾರ್ಯಾಚರಣೆ ಮೂಲಕ ನಕ್ಸಲ್ ಮುಕ್ತಗೊಳಿಸಲಾಗಿದೆ. ನಕ್ಸಲ್ ಮುಖಂಡರು, ಉಗ್ರರನ್ನು ಹೊಡದುರುಳಿಸಲಾಗಿದೆ.  ಬಿಹಾಹದಲ್ಲಿ ಸುಲಿಗೆ ಗ್ಯಾಂಗ್ ಇರುವ ಸಾಧ್ಯತೆಗಳಿವೆ. ಆದರೆ ಬಿಹಾರದಲ್ಲಿ ನಕ್ಸಲ್ ಪ್ರಾಬಲ್ಯ ಸಂಪೂರ್ಣ ನಶಿಸಿದೆ. ಬಿಹಾರ್ ಹಾಗೂ ಜಾರ್ಖಂಡ್‌ನಲ್ಲಿ ಸೇನಾ ಪಡೆ ತಲುಪದ ಸ್ಥಳವಿಲ್ಲ. ಎಲ್ಲಾ ಪ್ರದೇಶದ ಮೇಲೆ ಸೇನೆ ಹದ್ದಿನ ಕಣ್ಣಿಟ್ಟಿದೆ ಎಂದು ಕುಲ್ದೀಪ್ ಸಿಂಗ್ ಹೇಳಿದ್ದಾರೆ. 

 

Naxal Encounter: ಛತ್ತೀಸ್‌ಗಢ ತೆಲಂಗಾಣ ಗಡಿಯಲ್ಲಿ ಗುಂಡಿನ ಚಕಮಕಿ : 6 ನಕ್ಸಲರ ಹತ್ಯೆ

ಎಡಪಂಥೀಯ ಉಗ್ರವಾದ ಘಟನೆಗಳು ಇದೀಗ ಅತ್ಯಂತ ಕಡಿಮೆಯಾಗಿದೆ. ಎಲ್ಲವೂ ಹದ್ದುಬಸ್ತಿನಲ್ಲಿದೆ. 2009ರಲ್ಲಿ 2258 ಪ್ರಕರಣಗಳು ವರದಿಯಾಗಿತ್ತು. ಅಂದರೆ ಸೇಕಡಾ 77ರಷ್ಟು ಎಡಫಂಥೀಯ ಅಥವಾ ನಕ್ಸಲ್ ಉಗ್ರವಾದ ಘಟನೆಗಳು ನಡೆದಿತ್ತು. ಇದೀಗ ಈ ಸಂಖ್ಯೆ 509ಕ್ಕೆ ಇಳಿದಿದೆ. ನಕ್ಸಲ್ ದಾಳಿಯಿಂದ ಆಗುತ್ತಿದ್ದ ಸಾವಿನ ಪ್ರಮಾಣ ಇದೀಗ ಶೇಕಡಾ 85 ರಷ್ಟು ಕಡಿಮೆಯಾಗಿದೆ ಎಂದು ಕುಲ್ದೀಪ್ ಸಿಂಗ್ ಹೇಳಿದ್ದಾರೆ 

700 ನಕ್ಸಲ್‌ ಬೆಂಬಲಿಗರು ಶರಣು
ಒಡಿಶಾ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ವಿವಿಧ ಜಿಲ್ಲೆಗಳ 700ಕ್ಕೂ ಹೆಚ್ಚು ನಕ್ಸಲ್‌ ಬೆಂಬಲಿಗ ಗ್ರಾಮಸ್ಥರು ಶನಿವಾರ ಮಲ್ಕಾನ್‌ಗಿರಿಯಲ್ಲಿ ಬಿಎಸ್‌ಎಫ್‌ ಯೋಧರಿಗೆ ಶರಣಾಗಿದ್ದಾರೆ. ನಕ್ಸಲರ ಬಲ ಹೆಚ್ಚಿರುವ ಸ್ಥಳದಲ್ಲಿ ನಡೆದ ಈ ಬೆಳವಣಿಗೆ ನಕ್ಸಲ್‌ ಹೋರಾಟಗಾರರಿಗೆ ದೊಡ್ಡ ಪೆಟ್ಟು ಎಂದು ಹೇಳಲಾಗಿದೆ. ಇವರೆಲ್ಲಾ ನಕ್ಸಲರಿಗೆ ಹಿಂಸಾಕೃತ್ಯಗಳಲ್ಲಿ, ಭದ್ರತಾ ಪಡೆಗಳು, ಪೊಲೀಸ್‌ ಮಾಹಿತಿದಾರರನ್ನು ಹತ್ಯೆ ಮಾಡಲು ನಾನಾ ರೀತಿಯಲ್ಲಿ ನೆರವಾಗುತ್ತಿದ್ದರು. ಅವರಿಗೆ ಹಣ, ಸರಕು ಸಾಗಣೆ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಇವರೆಲ್ಲಾ ಇದೀಗ ನಕ್ಸಲ್‌ ವಾದದಿಂದ ಬೇಸತ್ತು ಸಮಾಜದ ಮುಖ್ಯವಾಹಿನಿಗೆ ಮರಳಲು ಮುಂದಾಗಿದ್ದಾರೆ ಎಂದು ಬಿಎಸ್‌ಎಫ್‌ ಹೇಳಿದೆ.

Follow Us:
Download App:
  • android
  • ios