ಪ್ರಧಾನಿ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಹಲವರು ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಅಜಯ್ ರೈ ಕಣದಲ್ಲಿದ್ದಾರೆ. ಇದೀಗ ಬಿಎಸ್‌ಪಿ ಅಭ್ಯರ್ಥಿಗಳ ಪ್ರಕಟಿಸಿದ್ದು, ಅಥರ್ ಜಮಾಲ್ ಲರಿ ವಾರಣಿಸಿಯಿಂದ ಸ್ಪರ್ಧಿಸುತ್ತಿದ್ದಾರೆ. ಯಾರು ಈ ಅಥರ್ ಜಮಾಲ್ ಲರಿ  

ವಾರಾಣಸಿ(ಏ.16) ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಬಹುತೇಕ ಪಕ್ಷಗಳು ತಮ್ಮ ಅಭ್ಯರ್ಥಿಗಳ ಘೋಷಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಉತ್ತರ ಪ್ರದೇಶದ ಬಹುಜನ ಸಮಾಜವಾದಿ ಪಾರ್ಟಿ ಅಭ್ಯರ್ಥಿಗಳ ಘೋಷಿಸಿದೆ. ಪ್ರಮುಖವಾಗಿ ವಾರಾಣಿಸಿ ಕ್ಷೇತ್ರದಿಂದ ಬಿಎಸ್‌ಪಿ ಅಥರ್ ಜಮಾಲ್ ಲರಿಗೆ ಟಿಕೆಟ್ ನೀಡಿದೆ. ವಾರಣಾಸಿಯಲ್ಲಿ ಅಥರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ. 

66 ವರ್ಷದ ಅಥಲ್ ಜಮಾಲ್ ಲರಿ 1980ರಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೇ ಹಲವು ಪಕ್ಷಗಳಲ್ಲಿ ಸೇರಿಕೊಂಡು ಚನಾವಣೆ ಬಳಿಕ, ಸೋಲಿನ ಬಳಿಕ ಪಕ್ಷ ತೊರೆದ ಉದಾಹರಣಗಳಿವೆ. ಜನಾತ ದಳ, ಅಪ್ನಾ ದಳ, ಕ್ಯುಯಾಮಿ ಏಕ್ತಾ ದಳ, ಸಮಾಜವಾದಿ ಪಾರ್ಟಿ ಸೇರಿದಂತೆ ಕೆಲ ಪಾರ್ಟಿಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಇದೀಗ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದ್ ಪಾರ್ಟಿಯ ಸದಸ್ಯರಾಗಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದಿಂದ ಮೋದಿ ವಿರುದ್ಧ ಕಣಕ್ಕಿಳಿದಿರುವ ಮಂಗಳಮುಖಿ ಯಾರು?

ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ಎರಡಲ್ಲೂ ಅಥರ್ ಜಮಾಲ್ ಲರಿ ಸ್ಪರ್ಧಿಸಿದ್ದಾರೆ. ಆದರೆ ಯಶಸ್ಸು ಸಿಕ್ಕಿಲ್ಲ. 1984ರಲಲಿ ಜನತಾ ಪಾರ್ಟಿಯಿಂದ ಅಥರ್ ಜಮಾಲ್ ಲರಿ ಲೋಕಸಭೆಗೆ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್‌ನ ಶ್ಯಾಮ್‌ಲಾಲ್ ವಿರುದ್ದ ಸೋಲು ಅನುಭವಿಸಿದ್ದರು. ಆಥರ್ ಜಮಾಲ್ ಲರಿ 50,329 ಮತಗಳನ್ನು ಪಡೆದಿದ್ದರು. 

ಬಿಎಸ್‌ಪಿ ಪಕ್ಷ ಏಕಾಂಗಿಯಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದೆ. ಇಂಡಿಯಾ ಮೈತ್ರಿ ಕೂಟಕ್ಕಾಗಲಿ, ಎನ್‌ಡಿಎ ಒಕ್ಕೂಟಕ್ಕಾಗಲಿ ಬೆಂಬಲ ಸೂಚಿಸಿಲ್ಲ. ಈ ಒಕ್ಕೂಟದ ಜೊತೆ ಸೇರಿಕೊಂಡಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಠಕ್ಕರ್ ನೀಡಲು ಬಿಎಸ್‌ಪಿ ರೆಡಿಯಾಗಿದೆ. 

ಇತ್ತೀಚೆಗೆ ಪಕ್ಷದ ನಿಲುವ ಪ್ರಣಾಳಿಕೆ ಕುರಿತು ಮಾತನಾಡಿದ ಮಾಯಾವತಿ, ತಮ್ಮ ಪಕ್ಷ ಕೇಂದ್ರ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಉತ್ತರ ಪ್ರದೇಶದ ಪಶ್ಚಿಮ ಪ್ರಾಂತ್ಯಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕಲ್ಪಿಸುವುದಾಗಿ ಮಾಯಾವತಿ ಪ್ರಕಟಿಸಿದ್ದರು. ನಾನು ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಪಶ್ಚಿಮ ಪ್ರಾಂತ್ಯದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಿ ಖರೀದಿ ಮಾಡಿದ್ದೆ. ಅದರಲ್ಲೂ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಂಬಲ ಬೆಲೆ ನೀಡಿದ್ದೆ. ಅದೇ ರೀತಿ ಈ ಬಾರಿ ತಮ್ಮ ಪಕ್ಷ ಕೇಂದ್ರ ಸರ್ಕಾರದಲ್ಲಿ ಅಧಿಕಾರ ಹಿಡಿದರೆ ಆ ಪ್ರದೇಶಕ್ಕೆ ಪ್ರತ್ಯೇಕ ಸ್ಥಾನಮಾನ ಕೊಡಿಸುವೆ’ ಎಂದು ತಿಳಿಸಿದ್ದಾರೆ.

ಮೋದಿ ವಿರುದ್ಧ ಸ್ಪರ್ಧಿಸಲು ಮಾಜಿ ಎಬಿವಿಪಿ ಕಾರ್ಯಕರ್ತನಿಗೆ ಕಾಂಗ್ರೆಸ್ ಟಿಕೆಟ್, ಯಾರು ಈ ಅಜಯ್ ರೈ?