ಭಾರತದಲ್ಲಿ ಬಾಂಗ್ ಲಸ್ಸಿ ಕುಡಿದು ಆಸ್ಪತ್ರೆ ದಾಖಲಾದ ಬ್ರಿಟಿಷ್ ಯೂಟ್ಯೂಬರ್!
ಉಜ್ಜೈನಿಗೆ ತೆರಳಿದ ಬ್ರಿಟಿಷ್ ಯೂಟ್ಯೂಬರ್ ಬೀದಿ ಬದಿಯಲ್ಲಿ ಜನಪ್ರಿಯ ಬಾಂಗ್ ಲಸ್ಸಿ ಕುಡಿದಿದ್ದಾರೆ. ಪರಿಣಾಮ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.
ಭೋಪಾಲ್(ಸೆ.26) ಭಾರತದಲ್ಲಿ ಸ್ಟ್ರೀಟ್ ಫುಡ್ ಭಾರಿ ಜನಪ್ರಿಯ. ವಿದೇಶಗಳಿಂದ ಬರವು ಹಲವು ಪ್ರವಾಸಿಗರು ಭಾರತದ ಬೀದಿ ಬದಿಯ ಆಹಾರ ಟೇಸ್ಟ್ ಮಾಡುತ್ತಾರೆ. ಹೀಗೆ ಉಜ್ಜೈನಿ ಪ್ರವಾಸಕ್ಕೆ ಆಗಮಿಸಿದ ಬ್ರಿಟಿಷ್ ಯೂಟ್ಯೂಬರ್ ಸ್ಯಾಮ್ಯುಯೆಲ್ ನಿಕೋಲಸ್ ಪೆಪ್ಪರ್ ಬೀದಿ ಬದಿಯ ಬಾಂಗ್ ಲಸ್ಸಿ ಕುಡಿದಿದ್ದಾರೆ. ಇಷ್ಟೇ ನೋಡಿ, ನಿಕೋಲಸ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಇದೀಗ ಚೇತರಿಸಿಕೊಲ್ಳುತ್ತಿರುವ ನಿಕೋಸಲ್, ಇನ್ನೆಂದು ಭಾರತದ ಬೀದಿ ಬದಿಯ ಆಹಾರ ತಿನ್ನುವ ಧೈರ್ಯ ಮಾಡುವುದಿಲ್ಲ ಎಂದಿದ್ದಾರೆ.
ಸ್ಯಾಮ್ ಪೆಪ್ಪರ್ ಎಂದೇ ಯೂಟ್ಯೂಬ್ ಮೂಲಕ ಜನಪ್ರಿಯವಾಗಿರುವ ನಿಕೋಸಲ್, ಉಜ್ಜೈನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬೀದಿ ಬದಿ ವ್ಯಾಪಾರಿ ಬಳಿ ತೆರಳಿ ಬಾಂಗ್ ಲಸ್ಸಿ ಕುಡಿಯಲು ಮುಂದಾಗಿದ್ದಾರೆ. ಗಾಂಜಾ ರೀತಿಯ ಮಾದಕ ವಸ್ತುವನ್ನು ಲಸ್ಸಿಯಲ್ಲಿ ಮಿಶ್ರಣ ಮಾಡಿ ನೀಡುವ ಈ ಪಾನೀಯ ಭಾರಿ ಜನಪ್ರಿಯ. ಈ ಬಾಂಗ್ ಲಸ್ಸಿ ರೆಡಿ ಮಾಡುತ್ತಿರುವ ಹಾಗೂ ಕುಡಿಯುವ ವಿಡಿಯೋವನ್ನು ನಿಕೋಲಸ್ ಪೋಸ್ಟ್ ಮಾಡಿದ್ದ.
ಚೆನ್ನೈ ಬೀದಿಯಲ್ಲಿ ಚಿಕನ್ ಕಬಾಬ್ ಮಾರುತ್ತಿರುವ ಪಿಹೆಚ್‌ಡಿ ಸ್ಕಾಲರ್ ಪತ್ತೆ ಹಚ್ಚಿದ ಅಮೆರಿಕ ವ್ಲೋಗರ್!
ಆದರೆ ಕುಡಿದ ಬೆನ್ನಲ್ಲೇ ನಿಕೋಲಸ್ ಅಸ್ವಸ್ಥನಾಗಿದ್ದಾನೆ. ತನ್ನ ಅಸ್ವಸ್ಥತೆಗೆ ಕಾರಣವನ್ನೂ ನೀಡುದ್ದಾನೆ. ಲಸ್ಸಿಯಲ್ಲಿ ಬಾಂಗ್ ಇರುವ ಕಾರಣಕ್ಕೆ ಅಸ್ವಸ್ಥನಾಗಿಲ್ಲ. ಆದರೆ ಶುಚಿತ್ವ ಎಳ್ಳಷ್ಟು ಇಲ್ಲ. ಬೀದಿ ಬದಿಯ ವ್ಯಾಪಾರಿಯ ಕೈಗಳ ಬೆರಳು, ಉಗುರು ಕಪ್ಪಾಗಿತ್ತು. ಅದೇ ಕೈಗಳನ್ನು ಗ್ಲಾಸಿನಲ್ಲಿಟ್ಟು ಲಸ್ಸಿಯನ್ನು ತೆಗೆಯುತ್ತಾರೆ. ಬಳಿಕ ಬಟ್ಟೆಗೆ ಬಾಂಗ್ ಹುಡಿ ಹಾಕಿ ಅದಕ್ಕೆ ಲಸ್ಸಿ ಮಿಶ್ರಣ ಮಾಡುತ್ತಾರೆ. ಇದನ್ನು ಕೂಡ ಕೈಗಳಲ್ಲೇ ಉಜ್ಜಿ ಮಾಡುತ್ತಾರೆ. ಬಾಂಗ್ ಲಸ್ಸಿ ತಯಾರಿಕೆಯಲ್ಲಿನ ಶುಚಿತ್ವದ ಕೊರತೆ, ಗುಣಮಟ್ಟದ ಉತ್ಪನ್ನಗಳ ಕೊರತೆಯಿಂದ ಈ ರೀತಿ ಆಗಿದೆ ಎಂದು ವಿಡಿಯೋ ಸಮೇತ ನಿಕೋಲಸ್ ವಿವರಿಸಿದ್ದಾನೆ.
ನಿಕೋಲಸ್ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ತೀವ್ರ ಅಸ್ವಸ್ಥಗೊಂಡ ನಿಕೋಲಸ್ ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಇದೇ ವೇಳೆ ಬಾಂಗ್ ಲಸ್ಸಿ ಕುರಿತು ಚರ್ಚೆ ಆರಂಭಗೊಂಡಿದೆ. ಗಾಂಜಾ ರೀತಿಯ ಮಾದಕ ವಸ್ತು ಭಾರತದ ಕೆಲ ಪ್ರದೇಶದಲ್ಲಿ ಬಳಕೆಗೆ ಅವಕಾಶವಿದೆ. ಜೊತೆಗೆ ಬಳಕೆ ಪ್ರಮಾಣದಲ್ಲಿ ನಿರ್ಬಂಧಗಳಿವೆ. ಆದರೆ ಬಾಂಗ್ ಬಳಕೆಯಿಂದ ಹಲವು ಅಡ್ಡ ಪರಿಣಾಮಗಳಿವೆ. ಬಳಕೆ ಮಾಡುವ ಮೊದಲು ಅಡ್ಡಪರಿಣಾಮಗಳ ಕುರಿತು ತಿಳಿದುಕೊಳ್ಳುವುದು ಮುಖ್ಯ. ನೆನಪಿನ ಶಕ್ತಿ ಮೇಲೂ ಇದು ಪರಿಣಾಮ ಬೀರಲಿದೆ.
ವಡಾಪಾವ್ ಬಳಿಕ ಇದೀಗ ಬೀದಿ ಬದಿಯಲ್ಲಿ ಪರೋಟ ಗರ್ಲ್ ಪ್ರತ್ಯಕ್ಷ, ಜನವೋ ಜನ!
ಸ್ಯಾಮ್ ಪೆಪ್ಪರ್ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಹಲವು ಭಾರತೀಯರು ಪ್ರತಿಕ್ರಿಯಿಸಿದ್ದಾರೆ. ಭಾರತದ ಬೀದಿ ಬದಿಯ ಆಹಾರ ಅರಗಿಸಿಕೊಳ್ಳುವ ಶಕ್ತಿ ಸಾಮರ್ಥ್ಯ ವಿದೇಶಿಗರಿಗೆ ಕಡಿಮೆ. ಕಾರಣ ಇಲ್ಲಿಯ ಮಸಾಲೆಗಳು ಸುಲಭದಲ್ಲಿ ಜೀರ್ಣಿಸಲು ಸಾಧ್ಯವಿಲ್ಲ. ಭಾರತೀಯರಿಗೆ ಅಥವಾ ಏಷ್ಯಾದ ಜನರಿಗೆ ಇದು ಹೊಸದಲ್ಲ. ಆದರೆ ನಿಕೋಲಸ್ ತನ್ನ ಬೀದಿ ಬದಿಯ ಆಹಾರದಲ್ಲೇ ಬಾಂಗ್ ಲಸ್ಸಿ ಸೇವಿಸಿದ್ದಾರೆ. ಇದು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.