ತಾನು ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದು ತನಗಿಂತ ಹಿರಿಯ ಮಹಿಳೆಯ ಜತೆ ಎಂದು ಬ್ರಿಟನ್‌ ರಾಜಕುವರ ಪ್ರಿನ್ಸ್‌ ಹ್ಯಾರಿ ಹೇಳಿದ್ದಾರೆ.

ವಾಷಿಂಗ್ಟನ್‌: ತಾನು ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದು ತನಗಿಂತ ಹಿರಿಯ ಮಹಿಳೆಯ ಜತೆ ಎಂದು ಬ್ರಿಟನ್‌ ರಾಜಕುವರ ಪ್ರಿನ್ಸ್‌ ಹ್ಯಾರಿ ಹೇಳಿದ್ದಾರೆ. ಹ್ಯಾರಿ ಆತ್ಮಕತೆ ಜ.10ರಂದು ಬಿಡುಗಡೆ ಆಗಲಿದ್ದು ಅದರಲ್ಲಿ ಈ ರೋಚಕ ಪ್ರಸಂಗವಿದೆ ಎಂದು ತಿಳಿದು ಬಂದಿದೆ. ಮೊದಲ ಬಾರಿಗೆ ಹಿರಿಯ ಮಹಿಳೆಯೊಬ್ಬರ ಜೊತೆ ನಾನು ಪಬ್‌ ಹಿಂಭಾಗದಲ್ಲಿ ಲೈಂಗಿಕ ಕ್ರಿಯೆ ನಡೆಸಿದೆ. 2001ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಈ ಘಟನೆ ನಡೆದಿತ್ತು. ಆ ಸಮಯದಲ್ಲಿ ನನಗೆ 17 ವರ್ಷ ವಯಸ್ಸಾಗಿತ್ತು. ಇದೊಂದು ನಾಚಿಕೆಯ ಅಧ್ಯಾಯ.. ಅವಳು ಕುದುರೆಗಳನ್ನು ಇಷ್ಟಪಡುತ್ತಿದ್ದಳು. ನನ್ನನ್ನು ಸಹ ಯುವ ಕುದುರೆ ಎಂದು ಭಾವಿಸಿದಳು. ಇದೊಂದು ತಪ್ಪು ಎನಿಸಬಹುದು. ಆದರೆ ಇದು ಪಬ್‌ ಹಿಂಭಾಗದಲ್ಲಿದ್ದ ಹುಲ್ಲುಗಾವಲಿನಲ್ಲಿ ನಡೆದೇ ಹೋಯಿತು ಎಂದು ಹ್ಯಾರಿ ಬರೆದಿದ್ದಾರೆ. ಆ ಮಹಿಳೆ ಯಾರು ಎಂಬುದು ಆ ವೇಳೆ ತಿಳಿಯದಿದ್ದರೂ ಸಹ ಆಕೆ ಎಲಿಜಬೆತ್‌ ಹರ್ಲೆ (Elizabeth Hurley) ಇರಬಹುದು ಎಂಬ ವದಂತಿ ಇದೆ. ಆದರೆ ಇದನ್ನು ಹರ್ಲೆ ಅಲ್ಲಗಳೆದಿದ್ದಾರೆ.

ಆತ್ಮಕಥೆಯಲ್ಲಿ ಸಿದ್ದರಾಮನವರ ಬಗ್ಗೆ ಬರೆದುಕೊಂಡ ಮೊಟಮ್ಮ, ಮಾಧ್ಯಮಗಳಿಗೆ ಹೇಳಿದ್ದಿಷ್ಟು

Wrist Assured: ದಿಗ್ಗಜ ಕ್ರಿಕೆಟಿಗ ಜಿಆರ್‌ ವಿಶ್ವನಾಥ್ ಆತ್ಮಕಥನ ಬಿಡುಗಡೆ