Asianet Suvarna News Asianet Suvarna News

ನಿಮ್ಗೆ ಗಂಡನಾಗೋ ಮೊದ್ಲು ಆತ ತಾಯಿಗೆ ಮಗ, ಸೋ ಅತ್ತೆ ಜೊತೆ ಸ್ಪರ್ಧೆ ಮಾಡ್ಬೇಡಿ; ಸುಧಾಮೂರ್ತಿ

ಅತ್ತೆ-ಸೊಸೆ ಸಂಬಂಧ ಅಂದ್ರೆ ಎಣ್ಣೆ-ಸೀಗೇಕಾಯಿ ಅನ್ನೋ ಮಾತು ಮೊದಲಿನಿಂದಲೂ ಇದೆ. ಹೆಚ್ಚಿನ ಮನೆಗಳಲ್ಲೂ ಅತ್ತೆ-ಸೊಸೆಗೆ ಆಗಿ ಬರಲ್ಲ. ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡ್ತಾನೆ ಇರ್ತಾರೆ. ಆದ್ರೆ ಅತ್ತೆ-ಸೊಸೆ ಸಾಮರಸ್ಯದಿಂದ ಇರೋದು ಹೇಗೆ ಅಂತ ಸುಧಾಮೂರ್ತಿ ತಿಳಿಸಿಕೊಟ್ಟಿದ್ದಾರೆ.
 

Person first son to his mother, then your husband, Dont compete with mother in law; Sudhamurthy Vin
Author
First Published Aug 19, 2023, 10:25 AM IST

ಇಂದು ಇನ್‌ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿಯವರ ಹುಟ್ಟುಹಬ್ಬ. ಇನ್ಫೋಸಿಸ್‌ನಂಥಾ ಹೆಮ್ಮೆಯ ಸಂಸ್ಥೆಯ ಹಿಂದಿರುವ ಪ್ರೇರಕ ಶಕ್ತಿ ಸುಧಾಮೂರ್ಇತ. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಲಕ್ಷಾಂತರ ಜನರಿಗೆ ನೆರವಾದವರು. ಜನಪ್ರಿಯ ಲೇಖಕಿಯೂ ಹೌದು. ಮಕ್ಕಳಿಗೆ, ದೊಡ್ಡವರಿಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಬೆಸ್ಟ್ ಸೆಲ್ಲರ್ ಅನಿಸಿಕೊಂಡಿವೆ. ಸುಧಾಮೂರ್ತಿ ಅವರು ಸಂಬಂಧಗಳ ಬಗೆಗೂ ಬರೆದಿದ್ದಾರೆ, ಮಾತನಾಡುತ್ತಾರೆ. ಅದರಲ್ಲೂ ನಮ್ಮ ಕಣ್ಣ ಮುಂದೆಯೇ ಬೆಳೆದ ಮಕ್ಕಳಲ್ಲಿ ಅನೇಕ ಮಾರ್ಪಾಡು ಕಂಡಾಗ ಅವನ್ನು ಹೇಗೆ ಸ್ವೀಕರಿಸಬೇಕು, ಅವಕ್ಕೆ ಹೇಗೆ ಸ್ಪಂದಿಸಬೇಕು ಅನ್ನೋದರ ಬಗ್ಗೆ ತನ್ನ ಅನುಭವದ ಹಿನ್ನೆಲೆಯಲ್ಲೇ ಅವರಿಲ್ಲಿ ಮುಖ್ಯವಾದ ಮಾತುಗಳನ್ನ ಹೇಳಿದ್ದಾರೆ. 

ಅತ್ತೆ-ಸೊಸೆ (Mother in law and Daughter in law) ಸಂಬಂಧ ಅಂದ್ರೆ ಎಣ್ಣೆ-ಸೀಗೇಕಾಯಿ ಅನ್ನೋ ಮಾತು ಮೊದಲಿನಿಂದಲೂ ಇದೆ. ಹೆಚ್ಚಿನ ಮನೆಗಳಲ್ಲೂ ಅತ್ತೆ-ಸೊಸೆಗೆ ಆಗಿ ಬರಲ್ಲ. ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡ್ತಾನೆ ಇರ್ತಾರೆ. ಅಡುಗೆ, ಡ್ರೆಸ್, ಮಡಿ, ಮನೆ ಕ್ಲೀನಿಂಗ್ ಹೀಗೆ ನಾನಾ ವಿಚಾರಕ್ಕೆ ಜಗಳವಾಗ್ತಾನೆ ಇರುತ್ತೆ. ಸೊಸೆ ಬಂದ್ಮೇಲೆ ಮಗ (Son) ನನ್ ಬಗ್ಗೆ ಕೇರ್ ಮಾಡ್ತಿಲ್ಲ ಅನ್ನೋದು ತಾಯಿಯ ದೂರು. ಗಂಡ ಯಾವಾಗ್ಲೂ ಅಮ್ಮನ ಬಾಲ ಅನ್ನೋ ಕಂಪ್ಲೇಂಟ್ ಹೆಂಡ್ತೀದು. ಹೀಗಾಗಿಯೇ ದಿನ ಬೆಳಗಾದ್ರೆ ಇಬ್ಬರ ನಡುವೆ ಜಗಳ ತಪ್ಪಲ್ಲ. ಆದ್ರೆ ಹೀಗೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ಮಾಡೋ ಅಗತ್ಯವಿಲ್ಲ ಎಂದು ಸುಧಾಮೂರ್ತಿ ಹೇಳುತ್ತಾರೆ. ಅತ್ತೆ-ಸೊಸೆ ಸಾಮರಸ್ಯದಿಂದ ಇರೋದು ಹೇಗೆ ಅಂತ ಸುಧಾಮೂರ್ತಿ ತಿಳಿಸಿಕೊಟ್ಟಿದ್ದಾರೆ.

ದುಡಿಯೋ ಪತ್ನಿ ಅಮ್ಮನಂತೆ ಅಡುಗೆ ಮಾಡ್ಬೇಕು ಅನ್ನೋದು ನ್ಯಾಯವಾ? ಸುಧಾಮೂರ್ತಿ ಹೇಳ್ತೋರೋದ ಕೇಳಿ

ಗಂಡನನ್ನು ಹುಟ್ಟಿನಿಂದಲೇ ನೋಡಿಕೊಂಡವಳು ತಾಯಿ, ಅವಳಿಗೆ ಮೊದಲ ಸ್ಥಾನ
ನಾನು ನನ್ನ ಗಂಡನನ್ನು 26ನೇ ವಯಸ್ಸಿನಿಂದ ನೋಡುತ್ತಿದ್ದೇನೆ. ಅದಕ್ಕಿಂತ ಮೊದಲು ನೋಡಿಕೊಂಡವರು ಯಾರು? ತಾಯಿಯಲ್ವೇ. ಹೀಗಾಗಿ ಅವಳಿಗೆ ಹೆಚ್ಚು ಹಕ್ಕಿದೆ. ಮಗನ ಸಮಯ ಪಡೆಯಲು ಅವಳು ಹೆಚ್ಚು ಅರ್ಹಳು. ಮನಸ್ಸಿಗೆ ಇದನ್ನೇ ಹೇಳಿ. ಗಂಡನ ಅಮ್ಮನೊಂದಿಗೆ, ಅತ್ತೆಯೊಂದಿಗೆ ಕಾಂಪೀಟ್ ಮಾಡಬೇಡಿ. ಯಾಕೆಂದರೆ ನಿಮ್ಮ ಪತಿ (Husband) ಮೊದಲು ಆಕೆಯ ಮಗ ನಂತರವಷ್ಟೇ ನಿಮ್ಮ ಗಂಡ. ಈ ವಿಷಯವೇ ನಿಮ್ಮ ಅತ್ತೆಯೊಂದಿಗೆ ನೀವು ಸಾಮರಸ್ಯದಿಂದ ಹೊಂದಾಣಿಕೆಯಿಂದ ಬಾಳಲು ಅನುವು ಮಾಡಿಕೊಡುತ್ತದೆ ಎಂದು ಸುಧಾಮೂರ್ತಿ ಹೇಳುತ್ತಾರೆ.

ಅತ್ತೆಯ ಜೊತೆ ಕಾಂಪೀಟ್ ಮಾಡಬೇಡಿ, ಸೊಸೆಗೆ ಜವಾಬ್ದಾರಿ ನೀಡಿ
ಅತ್ತೆ-ಸೊಸೆ ಅನೂನ್ಯವಾಗಿರಬೇಕೆಂದು ಅಂದ್ರೆ ಇಬ್ಬರೂ ಕೆಲವು ವಿಷಯಗಳ ಕಡೆ ಗಮನ ಕೊಡಬೇಕು ಎಂದು ಸುಧಾಮೂರ್ತಿ ಹೇಳುತ್ತಾರೆ. ಎಲ್ಲ ಅತ್ತಯಂದಿರೆಗ ತಮ್ಮ ಮಗಳು ಮಾಡಿದರೆ ಸರಿ. ಆದರೆ, ಸೊಸೆ ಮಾಡಿದ್ದು ಮಾತ್ರ ಅಕ್ಷಮ್ಯ ಅಪರಾಧ ಎಂಬ ಮನೋಭಾವವಿರುತ್ತದೆ. ಈ ತಾರತಮ್ಯದಿಂದಲೇ ಅತ್ತೆ-ಸೊಸೆ ಸಂಬಂಧ ಕ್ಲಿಷ್ಟವಾಗೋದು. ಅತ್ತೆಗೆ ಬೆಲೆ ಕೊಡಬೇಕು, ಸೇವೆ ಮಾಡಬೇಕು ಎನ್ನುವ ನಿರೀಕ್ಷೆಗಳಿದ್ದರೆ, ಬಿಟ್ಟು ಬಿಡಿ. ಬದಲಾಗಿ ನಿಮ್ಮ ಮಗಳಂತೆ ಆಕೆಯೂ ಒಂದು ಹೆಣ್ಣು. ಅವಳಿಗೂ ಭಾವನೆಗಳಿರುತ್ತೆ ಎಂಬುವುದು ನೆನಪಿರಲಿ. ಪ್ರೀತಿಸಿ, ಗೌರವಿಸಿ. ಆಗ ಅವಳು ಅದೇ ರೀತಿ ನಿಮ್ಮನ್ನು ಟ್ರೀಟ್ ಮಾಡದೇ ಇದ್ದರೆ ಕೇಳಿ? ಸೊಸೆ ಮೇಲೆ ಅಧಿಕಾರ ಚಲಾಯಿಸೋ ಬದಲು, ಪ್ರೀತಿಯ ಮಳೆಗೈದರೆ, ಸೊಸೆ ಕೆಟ್ಟವಳಾಗುವುದೇ ಇಲ್ಲ.

ಸಿಂಪಲ್ ಆಗಿರೋದೆ ಇಷ್ಟ, ನಾನು Low maintenance wife ಎಂದ ಸುಧಾಮೂರ್ತಿ

ಜವಾಬ್ದಾರಿ ಕೊಡಿ
ಅತ್ತೆಯಂದಿರಿಗೆ ಸದಾ ತಮ್ಮ ಕಾಲ ಮುಗಿಯುವ ಆತಂಕ ಕಾಡುತ್ತಲೇ ಇರುತ್ತದೆ. ಈ ಅಭದ್ರತಾ ಭಾವನೆಯಿಂದಾನೇ ಸೊಸೆ ಜೊತೆ ಜಗಳ ತೆಗೆಯುತ್ತಾರೆ. ಮಗ ಸೊಸೆಗೆ ಅಧಿಕಾರ ಬಿಟ್ಟು ಕೊಡಲು ಹೆದರುತ್ತಾರೆ. ಯಾವುದೇ ಜವಾಬ್ದಾರಿಯನ್ನು ಬಿಟ್ಟು ಕೊಡೋಲ್ಲ. ಮೊದ ಮೊದಲ ತಮ್ಮ ತಲೆ ಮೇಲೆ ಹೊತ್ತು ತಿರುಗುತ್ತಾರೆ. ಆಮೇಲೆ ಸೊಸೆ ಏನೂ ಜವಾಬ್ದಾರಿ ತೆಗೆದುಕೊಳ್ಳೋಲ್ಲ ಅಂತ ಬ್ಲೇಮ್ ಮಾಡುತ್ತಾರೆ. ಸಾಕು ಜೀವನದ ಹಲವು ವರ್ಷಗಳ ಕಾಲ ಮನೆಗಾಗಿ ಜೀವ ತೇದಿದ್ದೀರಿ. ಇನ್ನು ಮಗ-ಸೊಸೆ ಕುಟುಂಬದ ಹೊಣೆ ಹೊತ್ತು ಕೊಳ್ಳಲಿ ಬಿಡಿ. ಅವರೂ ಜವಾಬ್ದಾರಿ ನಿಭಾಯಿಸೋದು ಕಲಿಯಲಿ. ಅವರಿಷ್ಟದ ಹಾಗೆ ಅವರು ಬದುಕು ಕಟ್ಟಿಕೊಂಡು ಬೆಳೆಯಲು ಅವಕಾಶ ಕೊಟ್ಟರೆ, ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂದು ಸುಧಾಮೂರ್ತಿ ತಿಳಿಸಿದ್ದಾರೆ.

Follow Us:
Download App:
  • android
  • ios