Asianet Suvarna News Asianet Suvarna News

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ; ಇನ್ಮುಂದೆ ವಾರಕ್ಕೊಂದು ಬ್ರಿಡ್ಜ್ ಬೀಳುತ್ತಾ ಅಂತ ಕೇಳಿದ ಆರ್‌ಜೆಡಿ

ಸೇತುವೆ ಕುಸಿಯುವ ಮೊದಲು ದೊಡ್ಡದಾದ ಶಬ್ದ ಕೇಳಿಸಿದೆ. ದೊಡ್ಡ ಶಬ್ದದಿಂದ ಆಘಾತಕ್ಕೊಳಗಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಶಬ್ಧ ಕೇಳಿಸಿದ ಸ್ವಲ್ಪ ಸಮಯದ ಬಳಿಕ ಸೇತುವೆ ಹಂತ ಹಂತವಾಗಿ ಕುಸಿಯಲು ಆರಂಭಿಸಿದೆ.

Bridge Collapses In siwan district bihar mrq
Author
First Published Jun 22, 2024, 3:42 PM IST

ಪಟನಾ: ಕೆಲ ದಿನಗಳ ಹಿಂದೆಯಷ್ಟೇ ಕಾಮಗಾರಿ ಹಂತದ ಸೇತುವೆ ಕುಸಿದಿತ್ತು. ಇದೀಗ ಮತ್ತೊಂದು ಸೇತುವೆ ಕುಸಿದಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಬಿಹಾರದ ಸಿವಾನ್ ಜಿಲ್ಲೆಯ ಗಂಡಕ್ ಕಾಲುವೆ ಮೇಲೆ ನಿರ್ಮಿಸಲಾಗಿದ್ದ ಸೇತುವೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದಾರೋಂಡಾ ಬ್ಲಾಕ್‌ನ ರಾಮಗಢ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದು ಹಳೆಯ ಸೇತುವೆಯಾಗಿದ್ದು, ಕಾಲುವೆ ನಿರ್ಮಾಣದ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಸೇತುವೆ ಕುಸಿದಿದೆ ಎಂದು ವರದಿಗಳು ಪ್ರಕಟವಾಗಿದೆ. ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಸೇತುವೆಯ ಪಿಲ್ಲರ್‌ಗಳಿಗೆ ಹಾನಿಯುಂಟಾಗಿದ್ದರಿಂದ ಈ ಘಟನೆ ನಡೆದಿದೆ.

ಸೇತುವೆ ಕುಸಿಯುವ ಮೊದಲು ದೊಡ್ಡದಾದ ಶಬ್ದ ಕೇಳಿಸಿದೆ. ದೊಡ್ಡ ಶಬ್ದದಿಂದ ಆಘಾತಕ್ಕೊಳಗಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಶಬ್ಧ ಕೇಳಿಸಿದ ಸ್ವಲ್ಪ ಸಮಯದ ಬಳಿಕ ಸೇತುವೆ ಹಂತ ಹಂತವಾಗಿ ಕುಸಿಯಲು ಆರಂಭಿಸಿದೆ. ಸ್ಥಳೀಯರು ಈ ಎಲ್ಲಾ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಸೇತುವೆ ಕುಸಿತದಿಂದ ಮಹಾರಾಜಗಂಜ್ ಬ್ಲಾಕ್‌ನ ಪಥೇಡಿ ಬಜಾರ್ ಮತ್ತು ದರೋಂಡಾ ಬ್ಲಾಕ್‌ನ ರಾಮಗಢ ಪಂಚಾಯತ್ ನಡುವಿನ ಸಂಪರ್ಕ ಕಡಿತಗೊಂಡಿದೆ. ಇದೇ ಸೇತುವೆ ಬಳಸಿ ಎರಡೂ ಗ್ರಾಮದ ಸಾವಿರಾರು ಜನರು ಪ್ರಯಾಣಿಸುತ್ತಿದ್ದರು. ಸೇತುವೆ ಕುಸಿತದಿಂದ ಅನಾನೂಕೂಲತೆ ಉಂಟಾಗಿದೆ.

ಮಾವುತನನ್ನು ಸೊಂಡಲಿನಿಂದ ಬೀಳಿಸಿ, ಎರಡು ಕಾಲು ಆತನ ಮೇಲಿಟ್ಟು ನಿಂತ ಆನೆ - ಭಯಾನಕ ವಿಡಿಯೋ ವೈರಲ್ 

ಸೇತುವೆ ಕುಸಿತ ಸಂಬಂಧ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಎರಡೂ ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಲುವೆ ನಿರ್ಮಾಣದ ವೇಳೆ ಅಧಿಕಾರಿಗಳ ಬೇಜವಾಬ್ದಾರಿಯೇ ಸೇತುವೆಯ ಕುಸಿತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಎರಡೂ ಗ್ರಾಮಗಳ ಸಂಪರ್ಕಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕೂಡಲೇ ಹೊಸ ಸೇತುವೆ ನಿರ್ಮಾಣಕ್ಕೆ ಅನಮೋದನೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆರ್‌ಜೆಡಿಗೆ ಮತ್ತೊಂದು ಅಸ್ತ್ರ, ಎನ್‌ಡಿಎ ವಿರುದ್ಧ ವಾಗ್ದಾಳಿ

ಸಿವಾನ್ ಸೇತುವೆ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ, ಬಿಹಾರ ಆಡಳಿತರೂಢ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಕಾರ್ಯವೈಖರಿ ನೋಡಿ, ವಾರಕ್ಕೊಂದು ಸೇತುವೆ ಕುಸಿಯುವುದು ಗ್ಯಾರಂಟಿ ಅನ್ನಿಸುತ್ತಿದೆ ಎಂದು ಎಕ್ಸ್ ಖಾತೆಯಲ್ಲಿ ಆರ್‌ಜೆಡಿ ಬರೆದುಕೊಂಡಿದೆ. ಕಮಿಷನ್ ತೆಗೆದುಕೊಳ್ಳುವುದು, ಅಧಿಕಾರಶಾಹಿ, ಭ್ರಷ್ಟಾಚಾರದ ಅಪರೂಪದ ಪ್ರದರ್ಶನ ಬೇರೆಲ್ಲಿಯೂ ಕಾಣಲ್ಲ ಅನ್ನಿಸುತ್ತೆ ಎಂದು ಕಿಡಿಕಾರಿದೆ.

ಈದ್ಗಾ ಬಳಿ ಕಾಂಪೌಂಡ್ ನಿರ್ಮಾಣ; ಎರಡು ಗುಂಪುಗಳ ನಡುವೆ ಗಲಾಟೆ; ಪೊಲೀಸರ ಮೇಲೆ ಕಲ್ಲು ತೂರಾಟ

ಅರಾರಿಯಾ ಸೇತುವೆ ದುರಂತ

ಕಳೆದ ವಾರವಷ್ಟೇ  ಅರಾರಿಯಾ ಜಿಲ್ಲೆಯ ಬಕ್ರಾ ನದಿಯ ಮೇಲಿನ ಉದ್ಘಾಟನೆಗೆ ಸಿದ್ಧವಾಗಿದ್ದ ಸೇತುವೆಯೊಂದು ಕುಸಿದಿತ್ತು. ಈ ಘಟನೆಯಲ್ಲಿಯೂ ಅದೃಷ್ಟಾವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಉದ್ಘಾಟನೆಗೂ ಮುನ್ನವೇ ಸೇತುವೆ ಕುಸಿದಿದ್ದರಿಂದ ಬಿಹಾರ ಸರ್ಕಾರ ಮುಜುಗರಕ್ಕೊಳಗಾಗಿತ್ತು. ಅರಾರಿಯಾ ಜಿಲ್ಲೆಯ ಕುರ್ಸಾ ಕಾಂತಾ ಮತ್ತು ಸಿಕ್ತಿ ಪ್ರದೇಶಗಳ ಸಂಪರ್ಕಕ್ಕಾಗಿ ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ಕುಸಿತ ಸಂಬಂಧ ತನಿಖೆ ಆರಂಭವಾಗಿದೆ. ಸೇತುವೆ ಕುಸಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾರ್ಚ್‌ನಲ್ಲಿ ಸುಪೌಲ್ ಜಿಲ್ಲೆಯ ಕೋಸಿ ನದಿಯ ಮೇಲೆ ನಿರ್ಮಾಣ ಹಂತದ ಸೇತುವೆ ಕುಸಿತು ಓರ್ವ ಸಾವನ್ನಪ್ಪಿ, ಹತ್ತು ಜನರು ಗಾಯಗೊಂಡಿದ್ದರು.

Latest Videos
Follow Us:
Download App:
  • android
  • ios