Asianet Suvarna News Asianet Suvarna News

ಮಾವುತನನ್ನು ಸೊಂಡಲಿನಿಂದ ಬೀಳಿಸಿ, ಎರಡು ಕಾಲು ಆತನ ಮೇಲಿಟ್ಟು ನಿಂತ ಆನೆ - ಭಯಾನಕ ವಿಡಿಯೋ ವೈರಲ್ 

ಮಾವುತನ್ನು ಸೊಂಡಿಲಿನಿಂದ ಬೀಳಿಸಿ, ಎರಡು ಕಾಲುಗಳನ್ನು ಆತನ ಮೇಲಿಟ್ಟು ನಿರ್ದಯದವಾಗಿ ಮಾವುತನನ್ನು ಕೊಂದಿರುವ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

Horrifying cctv footage Elephant attack  Mahout To Death At Safari Centre mrq
Author
First Published Jun 22, 2024, 2:50 PM IST

ತಿರುವನಂತಪುರ: ಸಾಕಾನೆಯೊಂದು (Elephant) ಮಾವುತನನ್ನು ತುಳಿದು ಸಾವನ್ನಪಿರುವ ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿದೆ. ಜೂನ್ 20 ಗುರುವಾರ ಈ ಘಟನೆ ನಡೆದಿದ್ದು, ಬೆಚ್ಚಿಬೀಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಮಾವುತನ್ನು ಸೊಂಡಿಲಿನಿಂದ ಬೀಳಿಸಿ, ಎರಡು ಕಾಲುಗಳನ್ನು ಆತನ ಮೇಲಿಟ್ಟು ನಿರ್ದಯದವಾಗಿ ಮಾವುತನನ್ನು ಕೊಂದಿರುವ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

ದಿ ಹಿಂದೂ ವರದಿ ಪ್ರಕಾರ, ಇಡುಕ್ಕಿಯ ಸಫಾರಿ ಕೇಂದ್ರದಲ್ಲಿ ಆನೆಗಳನ್ನು ಅಕ್ರಮವಾಗಿ ಸಾಕಲಾಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ಮಾವುತನ ಸಾವಿನ ಬಳಿಕ ಸಫಾರಿ ಕೇಂದ್ರಕ್ಕೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಮೃತ ಮಾವುತನನ್ನು 62 ವರ್ಷದ ಬಾಲಕೃಷ್ಣ ಎಂದು ಗುರುತಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. 

ತಪ್ಪಿದ ದೊಡ್ಡ ಅನಾಹುತ

ಮೃತ ಮಾವುತ ಬಾಲಕೃಷ್ಣ ನೀಲೇಶ್ವರಂ ನಿವಾಸಿಯಾಗಿದ್ದು, ಕೇರಳದ ಅಡಿಮಲಿ ಸಮೀಪದ ಕಲ್ಲರ್ ಬಳಿಯ ಖಾಸಗಿ ಫಾರ್ಮ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆನೆ ದಾಳಿಗೂ ಮುನ್ನ ಮಾವುತ ಬಾಲಕೃಷ್ಣ ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋಗಲು ಸಿದ್ಧವಾಗಿದ್ದರು. ಅದಕ್ಕೂ ಮೊದಲು ಘಟನೆ ನಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

ಜೈಪುರ ಕೋಟೆ ಸಫಾರಿಗೆ ಹೊರಟ ರಷ್ಯಾ ಪ್ರವಾಸಿಗರನ್ನು ಎತ್ತೆಸೆದ ಆನೆ, ಇಬ್ಬರಿಗೆ ಗಾಯ!

ಈ ಆನೆ ಕೇಂದ್ರ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ (Animal Welfare Board of India) ನೋಂದಣಿ ಮಾಡಿಸಿಕೊಂಡಿಲ್ಲ. ಪ್ರವಾಸಿಗರನ್ನು ಮನರಂಜಿಸಲು ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಕುರಿತು ಇಡುಕ್ಕಿಯ ಅರಣ್ಯಾಧಿಕಾರಿ ಡಿಎಫ್‌ಓ (Social Forestry Divisional Forest Officer) ವಿಪಿನ್‌ದಾಸ್‌ ಪಿ.ಕೆ, ಮಾವುತನ ಮೇಲೆ ದಾಳಿ ನಡೆಸಿರುವ ಆನೆಯನ್ನು ಕೊಟ್ಟಾಯಂಗೆ ಶಿಫ್ಟ್ ಮಾಡುವಂತೆ ಮಾಲೀಕರಿಗೆ ಸೂಚಿಸಲಾಗಿದ್ದು, ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ನೋಂದಣಿ ಮಾಡಿಕೊಳ್ಳದ ಆನೆ ಕೇಂದ್ರಗಳು

ಇಡುಕ್ಕಿ ಸಫಾರಿಯ ಎಂಟು ಕೇಂದ್ರಗಳಲ್ಲಿ 35 ಆನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಬೋರ್ಡ್‌ನಲ್ಲಿ ಕೇವಲ ನಾಲ್ಕು ಕೇಂದ್ರಗಳನ್ನು ಮಾತ್ರ ನೋಂದಾಯಿಸಲಾಗಿದೆ. ಮಾವುತನನ್ನು ಕೊಂದಿರುವ ಆನೆ ಈ ಹಿಂದೆಯೂ ಆಕ್ರಮಣಕಾರಿಯಾಗಿ ವರ್ತಿಸಿತ್ತು ಎಂದು ವರದಿಯಾಗಿದೆ, ಅಕ್ರಮ ಸಫಾರಿ ಕೇಂದ್ರ ನಡೆಸಲು ಜಿಲ್ಲಾಡಳಿತದಿಂದ ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಇಡುಕ್ಕಿ ಜಿಲ್ಲಾಧಿಕಾರಿ  ಶೀಬಾ ಜಾರ್ಜ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಅಕ್ರಮ ಸಫಾರಿ ಕೇಂದ್ರಗಳ ವಿರುದ್ಧ ಸೂಕ್ರ ಕ್ರಮ ಜರುಗಿಸಲಿದೆ. ಅಕ್ರಮ ಸಫಾರಿ ಬಗ್ಗೆ ಮಾಹಿತಿ ಇದ್ರೆ ಸಾರ್ವಜನಿಕರು ಅಧಿಕಾರಿಗಳ ಜೊತೆ ಹಂಚಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಪೋಸ್ ಕೊಡಲು ಹೋದ ಯುವತಿ ಎತ್ತೆಸೆದ ಆನೆ, ನಿಂಗಿದು ಬೇಕಿತ್ತಾ ಎಂದ ನೆಟ್ಟಿಗರು?

ಹೈಕೋರ್ಟ್ ಆದೇಶ ನಿರ್ಲಕ್ಷ್ಯ

ಅಕ್ರಮ ಸಫಾರಿ ಕೇಂದ್ರಗಳನ್ನು ತಡೆಯುವಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ. ಇಂತಹ ಘಟನೆಗಳಿಗೆ ಅಧಿಕಾರಿಗಳೇ ಜವಾಬ್ದಾರರು ಎಂದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸೊಸೈಟಿ (ಎಸ್‌ಪಿಸಿಎ) ಜಿಲ್ಲಾ ಕಾರ್ಯದರ್ಶಿ ಎಂ.ಎನ್.ಜಯಚಂದ್ರನ್  ವಾಗ್ದಾಳಿ ನಡೆಸಿದ್ದಾರೆ. ಹೈಕೋರ್ಟ್ ಆದೇಶದ ಪ್ರಕಾರ, ಆನೆಗಳನ್ನು ಸಫಾರಿ ಕೇಂದ್ರಗಳಲ್ಲಿ ಅಥವಾ ಮನರಂಜನಾ ಉದ್ದೇಶಗಳಿಗಾಗಿ ಬಳಸಲು ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದೆ. ಆದ್ರೆ ಈ ನಿಯಮವನ್ನು ಅನೇಕ ಕೇಂದ್ರಗಳು ನಿರ್ಲಕ್ಷಿಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

Latest Videos
Follow Us:
Download App:
  • android
  • ios