ಬೇಹುಗಾರಿಕೆ ಆರೋಪ ಎದುರಿಸಿದ್ದ ಆರ್ಮಿ ಮೇಜರ್‌ಅನ್ನು ಸೇವೆಯಿಂದ ವಜಾ ಮಾಡಿದ ರಾಷ್ಟ್ರಪತಿ!
ಶಿಷ್ಟಾಚಾರದ ನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ರಾಷ್ಟ್ರಪತಿ ದ್ರೌಪದು ಮುರ್ಮು, ಆರ್ಮಿ ಮೇಜರ್‌ಅನ್ನು ಸೇವೆಯಿಂದ ವಜಾಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ.

ನವದೆಹಲಿ (ನ.1): ಉನ್ನತ ಮಟ್ಟದ ತನಿಖೆಯ ಬಳಿಕ ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ವಿಚಾರದಲ್ಲಿ ತಪ್ಪಿತಸ್ಥರೆಂದು ಕಂಡು ಬಂದ ಕಾರಣಕ್ಕೆ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ) ನಲ್ಲಿ ನೇಮಕಗೊಂಡಿದ್ದ ಭಾರತೀಯ ಸೇನಾ ಮೇಜರ್‌ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೇವೆಯಿಂದ ವಜಾ ಮಾಡಿದ್ದಾರೆ ಎಂದು ರಕ್ಷಣಾ ಮತ್ತು ಭದ್ರತಾ ಸಂಸ್ಥೆಯ ಮೂಲಗಳು ಮಂಗಳವಾರ ತಿಳಿಸಿವೆ. 2022 ರ ಮಾರ್ಚ್‌ನಲ್ಲಿ ಮೇಜರ್‌ನ ಚಟುವಟಿಕೆಗಳ ಬಗ್ಗೆ ಸೇನೆಯು ತನಿಖೆಯನ್ನು ಪ್ರಾರಂಭಿಸಿತು, ಅವರು ಸೂಕ್ಷ್ಮ ಮಾಹಿತಿಯನ್ನು ಹೊಂದಿರುವುದು ಮತ್ತು ಹಂಚಿಕೊಳ್ಳುವುದು ಸೇರಿದಂತೆ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಕಂಡು ಹಿಡಿದಿದ್ದರು ಎಂದು ತಿಳಿಸಿದ್ದಾರೆ.
ಮೂರು ಸೇನಾ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ, ಸೇನಾ ಕಾಯಿದೆ, 1950 ರ ಅಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾವಣೆ ಮಾಡಿದ್ದು, ಒಂದು ವಾರದ ಹಿಂದೆ ಮೇಜರ್‌ನ ಸೇವೆಯನ್ನು ಕೊನೆಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್‌ನ ಮಧ್ಯಭಾಗದಲ್ಲಿಮೇಜರ್‌ಅನ್ನು ಸೇವೆಯಿಂದ ವಜಾ ಮಾಡುವ
ಆದೇಶವನ್ನು ನೀಡಲಾಗಿತ್ತು. ರಾಷ್ಟ್ರಪತಿಗಳ ಅನುಮೋದನೆಯ ಬಳಿಕ ಇದನ್ನು ಜಾರಿ ಮಾಡಲಾಗಿದೆ.
ತಮ್ಮ ಸೇವೆ ಮುಕ್ತಾಯದ ಬಗ್ಗೆ ಮೇಜರ್ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆರೋಪಗಳು ಹೊರಬಿದ್ದ ನಂತರ ನೇಮಕಗೊಂಡ 'ಬೋರ್ಡ್ ಆಫ್ ಆಫೀಸರ್ಸ್'ನ ಸಂಶೋಧನೆಗಳ ಆಧಾರದ ಮೇಲೆ ಮೇಜರ್‌ನ ಸೇವೆಯನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೇಜರ್ ವಿರುದ್ಧದ ಆರೋಪಗಳು ಮುನ್ನೆಲೆಗೆ ಬಂದ ನಂತರ ಕಳೆದ ವರ್ಷ ಅವರನ್ನು ಅಮಾನತುಗೊಳಿಸಲಾಗಿತ್ತು. ಆ ಸಮಯದಲ್ಲಿ, ಅವರನ್ನು ಉತ್ತರ ಭಾರತದ ಒಂದು ಸ್ಥಳದಲ್ಲಿ ಎಸ್‌ಎಫ್‌ಸಿ ಘಟಕದೊಂದಿಗೆ ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನಿ ಗುಪ್ತಚರ ದಳಕ್ಕಾಗಿ ಕೆಲಸ ಮಾಡಿದ್ದಾನೆ ಎಂದು ನಂಬಲಾದ ಓರ್ವ ಕಾರ್ಯಕರ್ತನೊಂದಿಗೆ ಮೇಜರ್ ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕ ಹೊಂದಿದ್ದ ಎನ್ನುವುದು ತಿಳಿದುಬಂದಿದೆ.
ಮೇಜರ್ ವಿರುದ್ಧ ಬೇಹುಗಾರಿಕೆಯ ಆರೋಪಗಳನ್ನು ಹೊರಿಸಲಾಗಿದೆ. ಅನಧಿಕೃತ ವ್ಯಕ್ತಿಗಳೊಂದಿಗೆ ರಹಸ್ಯ ಮಾಹಿತಿಯನ್ನು ಹೊಂದುವುದು ಮತ್ತು ಹಂಚಿಕೊಳ್ಳುವುದು ಎಂದು ಮೂಲಗಳು ತಿಳಿಸಿವೆ. ಮೇಜರ್‌ನ ಫೋನ್‌ನಲ್ಲಿ ಈ ಕುರಿತಾದ ಪ್ರಮುಖ ಮಾಹಿತಿ ಕಂಡುಬಂದಿದೆ ಎಂದು ಅವರು ಹೇಳಿದರು, ಇದು ಭದ್ರತಾ ಪ್ರೋಟೋಕಾಲ್‌ಗಳ ಉಲ್ಲಂಘನೆಯಾಗಿದೆ.
ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿ ಸೇರಿದಂತೆ ಸುಮಾರು ಹನ್ನೆರಡು ರಕ್ಷಣಾ ಸಿಬ್ಬಂದಿಯನ್ನು ರಾಷ್ಟ್ರೀಯ ಭದ್ರತಾ ಪ್ರೋಟೋಕಾಲ್ ಉಲ್ಲಂಘನೆಯ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿತ್ತು. ಅವರು 'ಪಟಿಯಾಲಾ ಪೆಗ್' ಎಂಬ ವಾಟ್ಸಾಪ್ ಗುಂಪಿನ ಭಾಗವಾಗಿರುವುದು ಕಂಡುಬಂದಿದೆ, ಅದರಲ್ಲಿ ಮೇಜರ್ ಕೂಡ ಭಾಗವಾಗಿದ್ದರು.
ವರದಕ್ಷಿಣೆಗಾಗಿ ಹೆಂಡತಿ ಕೈಬೆರಳು ಕತ್ತರಿಸಿದ ಆರ್ಮಿ ಮೇಜರ್: ರಾಜಿ ಮಾಡಿಕೊಳ್ಳುವಂತೆ ಪೊಲೀಸ್ ಮನವೊಲಿಕೆ?
ಸೇನೆಯ ಸಾಮಾಜಿಕ ಮಾಧ್ಯಮ ನೀತಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ರಿಗೇಡಿಯರ್ ಸೇರಿದಂತೆ ಕನಿಷ್ಠ ಒಂದೆರಡು ಅಧಿಕಾರಿಗಳ ವಿರುದ್ಧ ಸೇನೆಯು ಮುಂದಿನ ಕೆಲವು ವಾರಗಳಲ್ಲಿ ಶಿಸ್ತು ಕ್ರಮವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
Indian Army: ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಮೇಜರ್ ದೀಪಕ್ ನೈನ್ವಾಲ್ ಪತ್ನಿ ಸೇನೆ ಸೇರ್ಪಡೆ!