Hostel Boy Video: ವಿಶ್ವವಿದ್ಯಾಲಯದಲ್ಲಿ ಯುವಕನೊಬ್ಬ ಸೂಟ್‌ಕೇಸ್‌ನಲ್ಲಿ ಯುವತಿಯನ್ನು ಹಾಸ್ಟೆಲ್‌ಗೆ ಕರೆತರಲು ಪ್ರಯತ್ನಿಸಿದ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ಸೂಕ್ಷ್ಮತೆಯಿಂದ ಈ ಪ್ರಯತ್ನ ವಿಫಲವಾಗಿದೆ.
ಸೋನಿಪತ್: ಹುಡುಗರ ಹಾಸ್ಟೆಲ್‌ಗೆ ಹುಡುಗಿಯರು, ಹುಡುಗಿಯ ಹಾಸ್ಟೆಲ್‌ಗೆ ಬಾಯ್ಸ್ ಅನಧಿಕೃತವಾಗಿ ಎಂಟ್ರಿ ಕೊಡೋದನ್ನು ಸಿನಿಮಾಗಳಲ್ಲಿ ನೋಡಿರುತ್ತವೆ. ಕೆಲವೊಮ್ಮೆ ಇಂತಹ ಘಟನೆಗಳು ನಿಜಜೀವನದಲ್ಲಿಯೂ ನಡೆಯುತ್ತಿರುತ್ತವೆ. ಕೆಲ ದಿನಗಳ ಹಿಂದೆ ಗರ್ಲ್ಸ್ ಹಾಸ್ಟೆಲ್‌ಗೆ ಹುಡುಗರು ಬಂದಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಇದಕ್ಕೆ ತದ್ವಿರುದ್ದವಾದ ಘಟನೆಯೊಂದು ನಡೆದಿದೆ. ಹರಿಯಾಣದ ಸೋನಿಪತ್‌ನಲ್ಲಿರುವ ಒಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವ್ಹೀಲ್ ಬ್ಯಾಗ್‌ನಲ್ಲಿ ಅಡಗಿಕೊಂಡು ಯುವತಿ, ಹಾಸ್ಟೆಲ್ ಒಳಗೆ ಬರಲು ಪ್ರಯತ್ನಿಸಿದ್ದಳು. ಆದ್ರೆ ಭದ್ರತಾ ಸಿಬ್ಬಂದಿಯ ಜಾಣತನದಿಂದ ಯುವತಿಯ ಪ್ಲಾನ್ ಫೇಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಯುವಕನೋರ್ವ ದೊಡ್ಡದಾದ ವ್ಹೀಲ್ ಸೂಟ್‌ಕೇಸ್ ತೆಗೆದುಕೊಂಡು ಹಾಸ್ಟೆಲ್‌ನೊಳಗೆ ಬರುತ್ತಿರುತ್ತಾನೆ. ಆದರೆ ಪ್ರವೇಶದ್ವಾರದ ಬಳಿ ಭದ್ರತಾ ಸಿಬ್ಬಂದಿಗೆ ಅದು ಹೇಗೆ ಗೊತ್ತಾಗಿದೆಯೋ ಏನು? ಯುವಕ ಹಿಡಿದುಕೊಂಡು ಬಂದ ಸೂಟ್‌ಕೇಸ್ ಓಪನ್ ಮಾಡಿಸಿದ್ದಾರೆ. ಸೂಟ್‌ಕೇಸ್ ತೆರೆಯುತ್ತಿದ್ದಂತೆ ಅದರೊಳಗೆ ಯುವತಿ ಕುಳಿತಿರೋದು ಕಂಡು ಬಂದಿದೆ. ಈ ಎಲ್ಲಾ ಘಟನೆಯ ಹಾಸ್ಟೆಲ್‌ನಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಂತರ ಈ ವಿಡಿಯೋವನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ವಿಡಿಯೋ ಮಾಡೋದನ್ನು ಭದ್ರತಾ ಸಿಬ್ಬಂದಿ ತಡೆಯುವ ಕೆಲಸ ಮಾಡಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು, ಸೂಟ್‌ಕೇಸ್‌ನೊಳಗಿರೋದು ಹಳದಿ ಶರ್ಟ್ ಧರಿಸಿದ್ದ ಯುವಕನೇ ಈ ಕೆಲಸ ಮಾಡಿದ್ದು, ಯುವತಿ ಆತನ ಗರ್ಲ್‌ಫ್ರೆಂಡ್ ಎಂದು ಕಮೆಂಟ್ ಮಾಡಿದ್ದಾರೆ. ಹುಡುಗರು ಚಾಪೆ ಕೆಳಗೆ ನುಗ್ಗಿದ್ರೆ, ಭದ್ರತಾ ಸಿಬ್ಬಂದಿ ರಂಗೋಲಿ ಕೆಳಗೆ ನುಸಳಿದ್ದಾರೆ. ಪಾಪ, ಹುಡುಗನ ಮಾಸ್ಟರ್ ಪ್ಲಾನ್ ಎಲ್ಲಾ ಪ್ಲಾನ್ ಫೇಲ್ ಆಯ್ತು ರೂಮ್‌ಗೆ ಹೋಗಿ ಇಬ್ಬರು ಏನೇನು ಮಾಡಬೇಕು ಅಂತ ಯೋಚಿಸಿದ್ದರೋ ಏನು ಎಂದು ನೆಟ್ಟಿಗರು ಪೋಲಿಯಾಗಿ ಕಮೆಂಟ್ ಮಾಡಿದ್ದಾರೆ.
ನೆಟ್ಟಿಗರಿಗೆ ಬಂತು ಅನುಮಾನ
ವೈರಲ್ ಆಗಿರುವ ವಿಡಿಯೋವನ್ನು @TheSquind ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೂ 2 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, ನೂರಾರು ಕಮೆಂಟ್‌ಗಳು ಬಂದಿವೆ. ಹುಡುಗನ ಸ್ನೇಹಿತರೇ ಹಾಸ್ಟೆಲ್ ಸೆಕ್ಯುರಿಟಿ ಸ್ಟಾಫ್‌ಗೆ ಮಾಹಿತಿ ನೀಡಿರಬಹುದು ಎಂದು ಕೆಲ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಸೂಟ್‌ಕೇಸ್‌ನಲ್ಲಿ ಬಂದಿರುವ ಯುವತಿ ಅದೇ ವಿಶ್ವವಿದ್ಯಾಲಯದವಳಾ ಅಥವಾ ಅಲ್ಲವಾ ಎಂಬುದರ ಬಗ್ಗೆಯೂ ತಿಳಿದು ಬಂದಿಲ್ಲ. ವೈರಲ್ ಆಗಿರುವ ವಿಡಿಯೋದಲ್ಲಿಯೂ ಯುವತಿ ಮುಖ ಅಸ್ಪಷ್ಟವಾಗಿ ಕಾಣಿಸುತ್ತದೆ. ಯುವಕ ಮತ್ತು ಯುವತಿಯ ಗುರುತು ಸಹ ಪತ್ತೆಯಾಗಿಲ್ಲ.
ಇದನ್ನೂ ಓದಿ: ವಿದ್ಯಾರ್ಥಿಯ ಹಾಲ್ ಟಿಕೆಟ್ ಕದ್ದೊಯ್ದ ಹದ್ದು: ಆಮೇಲಾಗಿದ್ದು ಪವಾಡ
ಈ ಜೋಡಿ ವಿರುದ್ಧ ವಿಶ್ವವಿದ್ಯಾಲಯ ಯಾವ ಕ್ರಮ ತೆಗದುಕೊಂಡಿದೆ ಎಂಬುದರ ಬಗ್ಗೆಯೂ ವರದಿಯಾಗಿಲ್ಲ. ಓರ್ವ ನೆಟ್ಟಿಗ, ಇಂದು ಸೂಟ್‌ಕೇಸ್ ಬಟ್ಟೆ ತುಂಬಿಸೋದಕ್ಕಿಂತ ಬೇರೆ ಕೆಲಸಗಳಿಗೆ ಹೆಚ್ಚು ಉಪಯೋಗವಾಗುತ್ತಿದೆ. ನಿಮ್ಮ ಹಾಸ್ಟೆಲ್‌ನಲ್ಲಿ ದೊಡ್ಡದಾದ ಸೂಟ್‌ಕೇಸ್ ಪದೇ ಪದೇ ಹೊರಗೆ ಮತ್ತು ಒಳಗೆ ಹೋಗಿ ಬರುತ್ತಿದ್ದರೆ ಅಲ್ಲಿಯ ಸಿಬ್ಬಂದಿ ಎಚ್ಚರವಾಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಬಾಗಿಲು ಹಾಕೋದು ಮರೆತ ಜೋಡಿ!
ಇತ್ತೀಚೆಗಷ್ಟೆ ಜೋಡಿಯೊಂದು ಓಯೋ ರೂಮ್‌ಗೆ ಬಂದು ಬಾಗಿಲು ಹಾಕಿಕೊಳ್ಳುವುದನ್ನು ಮರೆತ್ತಿತ್ತು. ಇದನ್ನು ಗಮನಿಸಿದ್ದ ವ್ಯಕ್ತಿಯೊಬ್ಬ, ಜೋರಾಗಿ ಕೂಗಿ ಬಾಗಿಲು ಹಾಕಿಕೊಳ್ಳುವಂತೆ ಸಲಹೆ ನೀಡಿ ಇಬ್ಬರ ಮಾನವನ್ನು ಉಳಿಸಿದ್ದನು. ಆ ವ್ಯಕ್ತಿ ಕೂಗಿ ಹೇಳುತ್ತಿದ್ದಂತೆ ಮಂಚದ ಮೇಲೆ ಮಲಗಿದ್ದ ಯುವಕ ಓಡಿ ಬಂದು ನಗುತ್ತಾ ಬಾಗಿಲು ಹಾಕಿಕೊಂಡಿದ್ದನು. ಈ ವಿಡಿಯೋ ನೋಡಿದ ನೆಟ್ಟಿಗರು, ಓಯೋ ರೂಮ್ ಗೆ ಬಂದ ಕೂಡಲೇ ಮೊದಲ ಮಾಡಬೇಕಾದ ಕೆಲಸವನ್ನು ಜೋಡಿ ಮರೆತಿದೆ ಎಂದು ತಮಾಷೆ ಮಾಡಿದ್ದರು.
ಇದನ್ನೂ ಓದಿ: 59ರ ಸಲ್ಮಾನ್ ಖಾನ್ ಮಂಗನಂತೆ ಮರ ಏರಿದ್ರು, ಏನ್ ಕಿತ್ಕೊಂಡು ಬಂದ್ರು?
