ನವದೆಹಲಿ[ಫೆ.24]: ಸತತ ಎರಡು ಸಾರ್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಭರ್ಜರಿ ಬಹುಮತದೊಂದಿಗೆ ಗೆದ್ದಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಸಾಧನೆ ಇಂಡೋನೇಷ್ಯಾ ಇಸ್ಲಾಮಿಕ್‌ ವಿಶ್ವ ವಿದ್ಯಾನಿಲಯದಲ್ಲಿ ಪಠ್ಯವಾಗಿದೆ.

ಪದವಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಸಂಬಂಧ ವಿಷಯದಲ್ಲಿ ಬಿಜೆಪಿ ಕುರಿತ ಪಠ್ಯವನ್ನು ಸೇರಿಸಲಾಗಿದೆ. ಖ್ಯಾತ ಲೇಖಕ ಶಾಂತನು ಗುಪ್ತಾ ವಿರಚಿತ ‘ಭಾರತೀಯ ಜನತಾ ಪಾರ್ಟಿ, ಭೂತ-ವರ್ತಮಾನ-ಭವಿಷ್ಯ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ’ ಎಂಬ ಪುಸ್ತಕದ ಅಧ್ಯಾಯವೊಂದು ಪಠ್ಯವಾಗಿದೆ.

ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಇಂಡೋನೇಷ್ಯಾ ಪ್ರಾಧ್ಯಾಪಕ ಹದ್ಸಾ ಮಿನ್‌ ಫಧಿಲ್‌, ಸತತ ಎರಡು ಬಾರಿಯ ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ಬಗ್ಗೆ ಇಂಡೋನೇಷ್ಯಾದಲ್ಲಿ ಕುತೂಹಲ ಹೆಚ್ಚಾಗಿದೆ. ಹಾಗಾಗಿ ಈ ವಿಷಯವನ್ನು ವಿವಿ ಪಠ್ಯದಲ್ಲಿ ಅಳವಡಿಸಿಕೊಂಡಿದೆ ಎಂದರು.