ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಪ್ರಸಾರವಾಗುವುದನ್ನು ತಡೆಯಲು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ತಿದ್ದುಪಡಿ ಅತಿರೇಕದಿಂದ ಕೂಡಿದೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಚಾಟಿ ಬೀಸಿದೆ.

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಪ್ರಸಾರವಾಗುವುದನ್ನು ತಡೆಯಲು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ತಿದ್ದುಪಡಿ ಅತಿರೇಕದಿಂದ ಕೂಡಿದೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಚಾಟಿ ಬೀಸಿದೆ. ಅಲ್ಲದೆ, ಒಂದು ಇರುವೆ ಕೊಲ್ಲಲು ಯಾರು ಕೂಡ ಸುತ್ತಿಗೆ ತರಬಾರದು ಎಂದು ವ್ಯಂಗ್ಯ ಮಾಡಿದೆ. ನಿಯಮಗಳಿಗೆ ತರಲಾದ ತಿದ್ದುಪಡಿಯ ಅವಶ್ಯಕತೆ ಏನು ಎಂಬುದೇ ಈಗಲೂ ಅರ್ಥವಾಗುತ್ತಿಲ್ಲ. ನಕಲಿ, ತಪ್ಪು ಹಾಗೂ ದಾರಿತಪ್ಪಿಸುವಂತಹದ್ದು ಯಾವುದು ಎಂಬುದನ್ನು ನಿರ್ಧರಿಸುವ ಪರಿಪೂರ್ಣ ಹಕ್ಕನ್ನು ಸರ್ಕಾರದ ಒಂದು ಪ್ರಾಧಿಕಾರಕ್ಕೆ ಕೊಟ್ಟಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಗೌತಮ್‌ ಪಟೇಲ್‌ ಹಾಗೂ ನೀನಾ ಗೋಖಲೆ ಅವರಿದ್ದ ಪೀಠ ಹೇಳಿದೆ.

ತಿದ್ದುಪಡಿಯಾದ ನಿಯಮಗಳ ಅಡಿಯಲ್ಲಿ ಫ್ಯಾಕ್ಟ್ ಚೆಕಿಂಗ್‌ ಯುನಿಟ್‌ (ಸತ್ಯಾಂಶ ಪರಿಶೀಲನೆ ವಿಭಾಗ) ಅನ್ನು ಸ್ಥಾಪಿಸಲಾಗುತ್ತದೆ. ಅದರ ಸತ್ಯಾಂಶವನ್ನು ಯಾರು ಪರಿಶೀಲಿಸುತ್ತಾರೆ? ಫ್ಯಾಕ್ಟ್ ಚೆಕಿಂಗ್‌ ಯುನಿಟ್‌ ಹೇಳುವುದೇ ಸತ್ಯಾಂಶವಾಗಿಬಿಡುತ್ತದೆ ಎಂಬ ಭಾವನೆ ಇದೆ. ಯಾವುದು ನಕಲಿ, ಸುಳ್ಳು ಹಾಗೂ ದಾರಿತಪ್ಪಿಸುವಂತಹದ್ದು ಎಂಬ ಗಡಿಯ ಬಗ್ಗೆ ನಿಯಮಗಳು ಮೌನವಾಗಿವೆ ಎಂದು ನ್ಯಾಯಪೀಠ ಕೇಳಿದೆ. ಆಫ್‌ಲೈನ್‌ ಮಾಹಿತಿಗೆ ಒಂದಷ್ಟು ಜರಡಿ ಎಂಬುದು ಇದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅದು ಇಲ್ಲ. ವಾಸ್ತವಾಂಶ ಪರಿಶೀಲನೆ ಆಗಬೇಕು, ಒಂದು ಹಂತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿರುವ ಮಾಹಿತಿಯಲ್ಲಿರುವ ಸತ್ಯಾಂಶವನ್ನು ಯಾರಾದರೂ ಪರಿಶೀಲಿಸಬೇಕು ನಿಜ. ಆದರೆ ಕೇಂದ್ರದ ನಿಯಮಗಳು ಅತಿರೇಕವಾಯಿತು. ಇರುವೆ ಕೊಲ್ಲಲು ಸುತ್ತಿಗೆ ತರಬೇಡಿ ಎಂದು ನ್ಯಾಯಪೀಠ ಪ್ರಹಾರ ನಡೆಸಿತು.

ಹೆಂಡತಿಗೆ ನಿಮ್ಮ ಸಂಬಳದ ಬಗ್ಗೆ ಹೇಳಲ್ವಾ..? RTI ಮೂಲಕ ಗಂಡನ ಆದಾಯ ವಿವರ ಪಡೆದ ಪತ್ನಿ..!

ಜನತಂತ್ರದ ಪ್ರಕ್ರಿಯೆಯಲ್ಲಿ ನಾಗರಿಕನಷ್ಟೇ ಸರ್ಕಾರವೂ ಪಾಲುದಾರನಾಗಿರುತ್ತದೆ. ಹೀಗಾಗಿ ಸರ್ಕಾರವನ್ನು ಪ್ರಶ್ನಿಸುವ, ಉತ್ತರವನ್ನು ಕೇಳುವ ಮೂಲಭೂತ ಹಕ್ಕು ನಾಗರಿಕನಿಗೆ ಇರುತ್ತದೆ. ಅದಕ್ಕೆ ಉತ್ತರ ನೀಡುವ ಕರ್ತವ್ಯವನ್ನು ಸರ್ಕಾರ ಹೊಂದಿರುತ್ತದೆ ಎಂದು ಹೇಳಿತು.

ಏನಿದು ಪ್ರಕರಣ?:

ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ತಂದಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯಗಳನ್ನು ಹೇಳಿದೆ. ಸ್ಟಾಂಡ್‌ ಅಪ್‌ ಕಾಮಿಡಿಯನ್‌ ಕುನಾಲ್‌ ಕಮ್ರಾ, ಎಡಿಟರ್ಸ್​ ಗಿಲ್ಡ್‌ ಆಫ್‌ ಇಂಡಿಯಾ ಹಾಗೂ ಭಾರತೀಯ ನಿಯತಕಾಲಿಕೆಗಳ ಸಂಘಗಳು ಈ ಅರ್ಜಿ ಸಲ್ಲಿಸಿದ್ದು, ಐಟಿ ನಿಯಮ (Information Act) ತಿದ್ದುಪಡಿ ಸ್ವೇಚ್ಛಾಚಾರ, ಅಸಾಂವಿಧಾನಿಕದಿಂದ ಕೂಡಿದೆ. ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ವಾದಿಸಿದ್ದಾರೆ.

ಅಶ್ಲೀಲತೆ, ಹಿಂಸೆ ಇಲ್ಲದ ಕಂಟೆಟ್ ಪ್ರಸಾರ ಮಾಡಿ: ಕೇಂದ್ರದ ಸೂಚನೆಗೆ ಒಟಿಟಿ ವಿರೋಧ