Asianet Suvarna News Asianet Suvarna News

ಕೇಂದ್ರ ಗೃಹ ಸಚಿವಾಲಯಕ್ಕೇ ಬಾಂಬ್‌ ಸ್ಫೋಟ ಬೆದರಿಕೆ..!

ಬೆದರಿಕೆ ಸಂದೇಶ ಬಂದ ಕೂಡಲೇ ಶ್ವಾನ ದಳ ಹಾಗೂ ಬಾಂಬ್‌ ಸ್ಫೋಟ ನಿಗ್ರಹ ದಳ ಹಾಗೂ ಬಾಂಬ್‌ ಪತ್ತೆ ದಳದೊಂದಿಗೆ ಆಗಮಿಸಿದ ಪೊಲೀಸರು ಹಲವು ಸುತ್ತುಗಳಲ್ಲಿ ಕಟ್ಟಡದ ಮೂಲೆ ಮೂಲೆಯನ್ನೂ ಪರಿಶೀಲನೆ ನಡೆಸಿದದರು. ಆದರೆ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ. 
 

Bomb Blast Threat to Union Home Ministry in New Delhi grg
Author
First Published May 23, 2024, 7:28 AM IST

ನವದೆಹಲಿ(ಮೇ.23):  ರಾಷ್ಟ್ರ ರಾಜಧಾನಿಯಲ್ಲಿ ಮತದಾನಕ್ಕೆ ಇನ್ನು ಕೇವಲ ಮೂರು ದಿನಗಳು ಬಾಕಿ ಇರುವಾಗ ಕೇಂದ್ರ ಗೃಹ ಸಚಿವಾಲಯದ ಕಟ್ಟಡವನ್ನು ಒಳಗೊಂಡಿರುವ ದೆಹಲಿಯ ನಾರ್ತ್‌ ಬ್ಲಾಕ್‌ಗೆ ಬಾಂಬ್‌ ಸ್ಫೋಟದ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.

ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ಪತ್ತೆ ಆಗಿಲ್ಲ. ಹೀಗಾಗಿ ಇದು ಹುಸಿ ಬೆದರಿಕೆ ಎಂದು ಸಾಬೀತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಮಂದಿರ ಸ್ಫೋಟಿಸುತ್ತೇವೆ; ಅಲ್ಲಾಹು ಅಕ್ಬರ್ ಎಂದು ಪತ್ರ ಬರೆದ ಕ್ರಿಮಿನಲ್‌ಗಳು: ಪೊಲೀಸರಿಂದ ಹೈ-ಅಲರ್ಟ್

ಮಧ್ಯಾಹ್ನ 3:30ಕ್ಕೆ ಬೆದರಿಕೆ ಸಂದೇಶ ಬಂದ ಕೂಡಲೇ ಶ್ವಾನ ದಳ ಹಾಗೂ ಬಾಂಬ್‌ ಸ್ಫೋಟ ನಿಗ್ರಹ ದಳ ಹಾಗೂ ಬಾಂಬ್‌ ಪತ್ತೆ ದಳದೊಂದಿಗೆ ಆಗಮಿಸಿದ ಪೊಲೀಸರು ಹಲವು ಸುತ್ತುಗಳಲ್ಲಿ ಕಟ್ಟಡದ ಮೂಲೆ ಮೂಲೆಯನ್ನೂ ಪರಿಶೀಲನೆ ನಡೆಸಿದದರು. ಆದರೆ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ದೆಹಲಿಯ ಹಲವು ಶಾಲೆ ಹಾಗೂ ಆಸ್ಪತ್ರೆಗೂ ಬೆದರಿಕೆ ಇ-ಸಂದೇಶ ರವಾನೆಯಾಗಿತ್ತು. ಬೆಂಗಳೂರು ಹಾಗೂ ಗುಜರಾತ್‌ನ ಶಾಲಾ-ಕಾಲೇಜಿಗಳಿಗೂ ಬೆದರಿಕೆ ಇ-ಮೇಲ್ ಬಂದಿದ್ದವು.

Latest Videos
Follow Us:
Download App:
  • android
  • ios