Indian Railways new ticket rule ಭಾರತೀಯ ರೈಲ್ವೆಯು ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಹೊಸ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ, ನಿಗದಿತ ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಹತ್ತದಿದ್ದರೆ, ಅವರ ಟಿಕೆಟ್ ತಕ್ಷಣವೇ ರದ್ದಾಗಲಿದ್ದು, ಆಸನವನ್ನು ಬೇರೆಯವರಿಗೆ ನೀಡಲಾಗುತ್ತೆ.

ನವದೆಹಲಿ (ಫೆ.17): ಭಾರತೀಯ ರೈಲ್ವೆಯು ಕಾಯ್ದಿರಿಸುವ ಟಿಕೆಟ್‌ ಸ್ವರೂಪದಲ್ಲಿ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಇನ್ನು ಮುಂದೆ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರು ತಮಗೆ ನಿಗದಿಯಾದ ನಿಲ್ದಾಣದಲ್ಲಿ ರೈಲು ಏರದಿದ್ದರೆ ಟಿಕೆಟ್‌ ರದ್ದಾಗಲಿದೆ.

Add Asianetnews Kannada as a Preferred SourcegooglePreferred

ಟಿಕೆಟ್‌ ಪರೀಕ್ಷಕರಿಗೆ ಹೊಸ ಎಚ್‌ಎಚ್‌ಟಿ ಟ್ಯಾಬ್ಲೆಟ್‌

ರೈಲ್ವೆಯು, ಟಿಕೆಟ್‌ ಪರೀಕ್ಷಕರಿಗೆ ಹೊಸ ಎಚ್‌ಎಚ್‌ಟಿ ಟ್ಯಾಬ್ಲೆಟ್‌ಗಳನ್ನು (ಹ್ಯಾಂಡ್‌ ಹೆಲ್ಡ್‌ ಟರ್ಮಿನಲ್ಸ್‌) ನೀಡಿದೆ. ಒಂದು ವೇಳೆ ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದರೆ ಅದು ತಕ್ಷಣ ಈ ಎಚ್‌ಎಚ್‌ಟಿಗಳಲ್ಲಿ ದಾಖಲಾಗುತ್ತದೆ.

ಕಾಯುವಿಕೆ ಪಟ್ಟಿಯಲ್ಲಿನ ಪ್ರಯಾಣಿಕರಿಗೆ ದಾಖಲಾದ ಆಸನ

ಬಳಿಕ ಕಾಯುವಿಕೆ ಪಟ್ಟಿಯಲ್ಲಿನ ಪ್ರಯಾಣಿಕರಿಗೆ ದಾಖಲಾದ ಆಸನ ನೀಡಲಾಗುತ್ತದೆ. ಆಸನ ಬೇರೊಬ್ಬರಿಗೆ ನೀಡಿದ ಬಗ್ಗೆ ಮೂಲ ಪ್ರಯಾಣಿಕರಿಗೆ ಸಂದೇಶವೂ ರವಾನೆಯಾಗಲಿದೆ. ಇದಕ್ಕೂ ಮೊದಲು ನಿಗದಿತ ನಿಲ್ದಾಣದಲ್ಲಿ ಕಾಯ್ದಿರಿಸಿದ ಪ್ರಯಾಣಿಕರು ಏರದಿದ್ದರೆ ಟಿಟಿಇ ಆ ಆಸನವನ್ನು ಬೇರೆಯವರಿಗೆ ನೀಡದೆ ಮುಂದಿನ 2 ನಿಲ್ದಾಣಗಳ ವರೆಗೆ ಖಾಲಿ ಬಿಡುತ್ತಿದ್ದರು.

Board at your booked station or lose your seat Indian Railways new strict No Show rule

YouTube video player