ಬೆಂಗಳೂರು (ಫೆ.05):  ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಗುರುವಾರ ‘ತೇಜಸ್‌’ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು, ಪೈಲಟ್‌ ಗುಣಶೇಖರ್‌ ಅವರೊಂದಿಗೆ ಸುಮಾರು 30 ನಿಮಿಷಗಳ ಕಾಲ ಯುದ್ಧ ವಿಮಾನದ ಹಾರಾಟದ ಅನುಭವ ಪಡೆದರು.

Aero India 2021 : ತೇಜಸ್ ಯುದ್ಧ ವಿಮಾನದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ತೇಜಸ್ವಿ ಸೂರ್ಯ ..

ಎಚ್‌ಎಎಲ್‌ನಿಂದ .48,000 ಕೋಟಿ ವೆಚ್ಚದಲ್ಲಿ 83 ತೇಜಸ್‌ ಲಘು ಯುದ್ಧ ವಿಮಾನಗಳ ಖರೀದಿಗೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಗುರುವಾರ ಮಧ್ಯಾಹ್ನ ತೇಜಸ್‌ನಲ್ಲಿ ಹಾರಾಟ ನಡೆಸಿದರು.

ಟಿಕೆಟ್ ಖರೀದಿಗೆ ಹರಸಾಹಸ 

ಏರೋ ಇಂಡಿಯಾ ಜೊತೆಗಿನ ಬಾಲ್ಯದ ನೆನಪು ಮೆಲಕು ಹಾಕಿದ ಅವರು, ನಾನು ಚಿಕ್ಕವನಿದ್ದಾಗಿನಿಂದ ಏರ್‌ ಶೋ ಪಾಸ್‌ ತೆಗೆದುಕೊಳ್ಳಲು ಹಾಗೂ ಟಿಕೆಟ್‌ ಖರೀದಿಸಲು ಬಹಳ ಕಷ್ಟಪಡುತ್ತಿದ್ದೆ. ಅದು ಸಿಗದೇ ಇದ್ದಾಗನಮ್ಮ ತಂದೆ ದೇವನಹಳ್ಳಿಯ ಯಾರದ್ದೋ ತೋಟದೊಳಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಂದ ಆಕಾಶ ನೋಡಿ ವಿಮಾನಗಳನ್ನು ಕಂಡು ಖುಷಿಪಡುತ್ತಿದ್ದೆ. ಆದರೆ ಈಗ ಬೆಂಗಳೂರಿನ ಜನರ ಆಶೀರ್ವಾದದಿಂದಾಗಿ ಯುದ್ಧ ವಿಮಾನದಲ್ಲಿ ಹಾರಾಡುವ ಅವಕಾಶ ಬಂತು. ಜೊತೆಗೆ ಗುಣಶೇಖರ್‌ ಅವರಂತಹ ಎನರ್ಜೆಟಿಕ್‌ ವ್ಯಕ್ತಿಯೊಂದಿ ಹಾರಾಟ ನಡೆಸಿದ್ದು ಸಂತಸ ತಂದಿದೆ ಎಂದರು.