ಲಡಾಖ್(ಅ.26): ಕೇಂದ್ರ ಸರ್ಕಾರ ತೆಗೆದುಕೊಂಡ ಕೇಂದ್ರಾಡಳಿತ ಪ್ರದೇಶ ಲಡಾಖ್ ಅಭಿವೃದ್ಧಿಗೆ ಜನ ಬೆಂಬಲಿಸಿದ್ದಾರೆ. ಇದರ ಫಲವಾಗಿ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ, ಲೆಹ್ ಚುನಾವಣೆಯಲ್ಲಿ ಬೆಜಿಪಿ ಭರ್ಜರಿ ಗೆಲುವು ದಾಖಲಿಸಿದೆ. 26 ಸ್ಥಾನಗಳ ಪೈಕಿ ಬಿಜೆಪಿ 15 ಸ್ಥಾನ ಗೆದ್ದುಕೊಂಡಿದೆ. ಈ ಮೂಲಕ ಬಿಜೆಪಿ ಬಹುದೊಡ್ಡ ಪಕ್ಷವಾಗಿ LHDC ಅಧಿಕಾರ ಚುಕ್ಕಾಣಿಗೆ ಆಯ್ಕೆಯಾಗಿದೆ.

71 ವರ್ಷದಲ್ಲಿ ಸಿಗದೇ ಇದ್ದದ್ದು, ಕಳೆದೊಂದು ವರ್ಷದಲ್ಲಿ ಸಿಕ್ಕಿದೆ; ಲಡಾಖ್ ಸಂಸದ ಜಮ್ಯಾಂಗ್!.

ಬಿಜೆಪಿ ಭರ್ಜರಿ ಗೆಲುವನ್ನು ಲಡಾಖ್ ಸಂಸದ ಜಮ್ಯಾಂಗ್ ತೆಸ್ರಿಂಗ್ ನಂಗ್ಯಾಲ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

 

26 ಸ್ಥಾನಕ್ಕೆ ಬಿಜೆಪಿ, ಇಂಡಿಯನ್ ನ್ಯಾಷನಲ್ ಕ್ರಾಂಗ್ರೆಸ್, ಆಪ್, 23 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 94 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.  ಗುರುವಾರ(ಅ.22) ನಡೆದ 6 ನೇ ಲಡಾಕ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿ ಲೇಹ್ ಚುನಾವಣೆಯಲ್ಲಿ ಶೇ 65.07 ರಷ್ಟು ಮತದಾನ ದಾಖಲಿಸಿತ್ತು. 

ಲೇಹ್’ಗೆ ಭೇಟಿ ನೀಡಿದ ರಾಷ್ಟ್ರಪತಿ ಕೋವಿಂದ್..

45,025 ಮಹಿಳೆಯರು ಸೇರಿದಂತೆ 89,776 ಮತದಾರರು ಲೆಹ್ ಜಿಲ್ಲೆಯಾದ್ಯಂತ 26 ಕ್ಷೇತ್ರಗಳಲ್ಲಿ ಹರಡಿರುವ 294 ಮತಗಟ್ಟೆಗಳಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಚುನಾವಣೆ ಹೊಸದಲ್ಲ. ಆದರೆ ಆಮ್ ಅದ್ಮಿ ಪಕ್ಷ  (AAP) ಇದೇ ಮೊದಲ ಬಾರಿ ಸ್ಪರ್ಧಿಸಿತ್ತು. ಆಪ್‌ನಿಂದ 19 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.