ದಾವಣಗೆರೆ  : ಉಗ್ರರ ಮೇಲೆ ದಾಳಿಯ ವಿಚಾರವಾಗಿ ಸಚಿವ MC ಮನುಗೂಳಿ ಹೇಳಿಕೆ ಅತ್ಯಂತ ಬಾಲಿಷವಾಗಿರುವಂತದ್ದು ಎಂದು ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ. 

ಸೈನಿಕರ ಬಗ್ಗೆ ಬಾಲಿಷ ಹೇಳಿಕೆ ನೀಡಿರುವುದು ಅವರ ಮರೆಗುಳಿತನಕ್ಕೆ ಸಾಕ್ಷಿ.  ಉಗ್ರವಾದಿಗಳನ್ನ ಕೊಲ್ಲಬಾರದು ಎಂದು ಹೇಳಿಕೆ ನೀಡುವ ಮೂಲಕ ಸೈನಿಕರ ಬಗ್ಗೆ ಬಾಲಿಷವಾಗಿ ಮಾತನಾಡಿದ್ದಾರೆ. ಅವರಿಗೆ ಜನರ ಆಕ್ರೋಶ ನೋವು ಕಾಣಿಸುತ್ತಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಹಾಲಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ. 

ಸಮಜ್ದಾರ್ ಅಲ್ಲ ಪಾಕಿಸ್ತಾನ: ಸಮ್ಜೋತಾ ರೈಲು ರದ್ದು!

ಭಯೋತ್ಪಾದನೆಯನ್ನ ಬೇರು ಸಮೇತ ಕಿತ್ತು ಹಾಕಬೇಕು.  ಇನ್‌ಸ್ಟಾಲ್ ಮೆಂಟ್ ನಲ್ಲಿ ಭಯೋತ್ಪಾದನೆ ನಿಗ್ರಹ ಮಾಡಲು ಆಗಲ್ಲ. ವೀರಯೋಧ ಅಭಿನಂದನ್ ಗೆ ಇಡೀ ದೇಶವೇ ಸೆಲ್ಯೂಟ್ ಹೊಡೆಯಬೇಕು ಎಂದರು. 

ಇನ್ನು ಜಿನಿವಾ ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದ ಅವರು ನಾವು ಸಹಿ ಮಾಡಿದ್ದು, ಪಾಕಿಗೆ ಸೆರೆ ಸಿಕ್ಕಿರುವ ನಮ್ಮ ಕಮಾಂಡರ್ ಅಭಿನಂದನ ಅವರಿಗೆ ಯಾವುದೇ ತೊಂದರೆ ನೀಡದೇ ವಾಪಸ್ ಕಳಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ ಎಂದರು.  

ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ; ಭಾರತ ಬೆಂಬಲಕ್ಕೆ ನಿಂತ ಘಟಾನುಘಟಿಗಳು

ವಾಯುದಾಳಿ ವಿಚಾರವನ್ನು ರಾಜಕೀಯವಾಗಿ ಬಳಸಬಾರದು ಎಂದ ಅವರು, ಈ ವೇಳೆ ಯಡಿಯೂರಪ್ಪ ನೀಡಿದ 22 ಸೀಟುಗಳಲ್ಲಿ ಗೆಲುವು ಖಚಿತ ಎನ್ನುವ ವಿಚಾರವನ್ನು ಪ್ರಸ್ತಾಪಿಸಿ, ಅವರು ಯಾವ ಪದ ಬಳಸಿದ್ದಾರೆ ಎನ್ನುವುದು ತಮಗೆ ತಿಳಿದಿಲ್ಲ ಎಂದರು. 

ಇನ್ನು ಲೋಕಸಭಾ ಚುನಾವಣೆಯ ಬಗ್ಗೆಯೂ ಪ್ರಸ್ತಾಪಿಸಿದ ಅವರು ಬಿಜೆಪಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.