ಶಿಕಾರ ಚಿತ್ರ ನೋಡಿ ಕಣ್ಣೀರಿಟ್ಟ ಅಡ್ವಾಣಿ| 1990ರ ಆದಿಯಲ್ಲಿ ಇಸ್ಲಾಮಿ ದಂಗೆಕೋರರು ಕಾಶ್ಮೀರ ಪಂಡಿತರನ್ನು ಕಣಿವೆಯಿಂದ ಓಡಿಸುವ ಕತೆಯುಳ್ಳ ಸಿನಿಮಾ

ನವದೆಹಲಿ[ಫೆ.09]: 1990ರ ಆದಿಯಲ್ಲಿ ಇಸ್ಲಾಮಿ ದಂಗೆಕೋರರು ಕಾಶ್ಮೀರ ಪಂಡಿತರನ್ನು ಕಣಿವೆಯಿಂದ ಓಡಿಸುವ ಕತೆಯುಳ್ಳ, ವಿಧು ವಿನೋದ್‌ ಚೋಪ್ರಾ ನಿರ್ದೇಶನದ ‘ಶಿಕಾರ; ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಕಾಶ್ಮೀರಿ ಪಂಡಿತ್ಸ್’ ಚಿತ್ರವನ್ನು ನೋಡಿ, ಬಿಜೆಪಿ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ ಕಣ್ಣೀರಿಟ್ಟಿದ್ದಾರೆ.

ಚಿತ್ರ ಮುಗಿಯುತ್ತಿದ್ದಂತೆ ಕಣ್ಣೀರಿಡುವ ಅಡ್ವಾಣಿ ಅವರ ಮುಂದೆ ಮಂಡಿಯೂರಿ ಕುಳಿತು ಚೋಪ್ರಾ ಸಂತೈಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

Scroll to load tweet…

ಕಾಶ್ಮೀರಿ ಪಂಡಿತರ ವಲಸೆಯನ್ನು ಶಿವಕುಮಾರ್‌ ಧರ್‌ ಹಾಗೂ ಅವರ ಪತ್ನಿ ಶಾಂತಿ ಎಂಬ ಕಾಲ್ಪನಿಕ ಪಾತ್ರಗಳ ಮೂಲಕ ಚಿತ್ರಿಸಲಾಗಿದೆ.