* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗೆಲುವಿನ ರುಚಿ: ಸಮೀಕ್ಷೆ* ಕಾಂಗ್ರೆಸ್‌, ಬಿಎಸ್ಪಿಗೂ ಸೋಲಿನ ರುಚಿ: ಝೀ ನ್ಯೂಸ್‌* ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿರುವ ಎಸ್‌ಪಿಗೆ ವಿಪಕ್ಷ ಸ್ಥಾನ

ಲಖನೌ(ಜ.20): ದೇಶದ ಅತಿದೊಡ್ಡ ರಾಜ್ಯ ಮತ್ತು ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎನ್ನಲಾದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಝೀ ವಾಹಿನಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.

ಇನ್ನು ಬಿಜೆಪಿಯನ್ನು ಸೋಲಿಸಿ ಅಧಿಕಾರದ ಗದ್ದುಗೆಗೇರುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ, ಬಿಜೆಪಿ ಬಳಿಕದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಕಮಾಲ್‌ ವರ್ಕೌಟ್‌ ಆಗಲ್ಲ. ಇನ್ನು ಉತ್ತರ ಪ್ರದೇಶಕ್ಕೆ 4 ಬಾರಿ ಮುಖ್ಯಮಂತ್ರಿಯಾಗಿರುವ ಮಾಯಾವತಿ ಅವರ ಬಿಎಸ್‌ಪಿ ಪಕ್ಷ 10 ಸ್ಥಾನಗಳನ್ನು ಪಡೆಯಲು ಯಶಸ್ವಿಯಾಗದು ಎಂದು ಈ ಸಮೀಕ್ಷೆ ತಿಳಿಸಿದೆ.

ಉತ್ತರ ಪ್ರದೇಶ (ಒಟ್ಟು ಸ್ಥಾನ: 403/ಬಹುಮತಕ್ಕೆ 202)

ಪಕ್ಷ| ಸ್ಥಾನ

ಬಿಜೆಪಿ| 245-267

ಎಸ್‌ಪಿ| 125-148

ಬಿಎಸ್‌ಪಿ| 5-9

ಕಾಂಗ್ರೆಸ್‌| 3-7

ಇತರರು| 2-6