Asianet Suvarna News Asianet Suvarna News

ಟಿಎಂಸಿ ಮತ್ತೆ ಗೆದ್ದರೆ ಕಾಶ್ಮೀರವಾಗಲಿದೆ ಬಂಗಾಳ: ಸುವೇಂದು

ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ನಾಯಕರ ವಾಗ್ದಾಳಿ| ಟಿಎಂಸಿ ಮತ್ತೆ ಗೆದ್ದರೆ ಕಾಶ್ಮೀರವಾಗಲಿದೆ ಬಂಗಾಳ| ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಇಲ್ಲ​ದಿ​ದ್ದರೆ, ಈ ದೇಶ ಇಸ್ಲಾಂ ದೇಶ​ವಾ​ಗಿ​ರು​ತ್ತಿತ್ತು: ಸುವೇಂದು|

BJP Suvendu drags Kashmir into Bengal debate pod
Author
Bangalore, First Published Mar 8, 2021, 9:57 AM IST

ಕೋಲ್ಕ​ತಾ(ಮಾ.08): ಈ ಬಾರಿಯ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ನೇತೃ​ತ್ವದ ಟಿಎಂಸಿ ಅಧಿ​ಕಾ​ರಕ್ಕೇರಿ​ದರೆ, ಪಶ್ಚಿ ಮ ಬಂಗಾ​ಳ​ವನ್ನು ಮತ್ತೊಂದು ಕಾಶ್ಮೀ​ರ​ವ​ನ್ನಾಗಿ ಪರಿ​ವ​ರ್ತಿ​ಸ​ಲಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿ​ಕಾರಿ ಆತಂಕ ವ್ಯಕ್ತ​ಪ​ಡಿ​ಸಿ​ದ್ದಾರೆ.

ಇಲ್ಲಿ ಬಿಜೆಪಿ ರಾರ‍ಯಲಿ​ಯ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಸುವೇಂದು ಅಧಿ​ಕಾರಿ, ‘ಜನ​ಸಂಘದ ಸಂಸ್ಥಾ​ಪ​ಕ​ರಲ್ಲಿ ಒಬ್ಬ​ರಾದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಇಲ್ಲ​ದಿ​ದ್ದರೆ, ಈ ದೇಶ ಇಸ್ಲಾಂ ದೇಶ​ವಾ​ಗಿ​ರು​ತ್ತಿತ್ತು. ಅಲ್ಲದೆ ನಾವೆ​ಲ್ಲರೂ ಬಾಂಗ್ಲಾ​ದೇ​ಶ​ದ​ಲ್ಲಿ​ರ​ಬೇ​ಕಿತ್ತು. ಇದೀ​ಗ ಮತ್ತೊಮ್ಮೆ ಟಿಎಂಸಿ ಅಧಿ​ಕಾ​ರಕ್ಕೆ ಬಂದಲ್ಲಿ ಪಶ್ಚಿಮ ಬಂಗಾಳ ಕಾಶ್ಮೀರ ಆಗ​ಲಿ​ದೆ’ ಎಂದು ಹೇಳಿ​ದ್ದಾರೆ.

ಫೆ.14ರಂದು ಜೈ ಬಾಂಗ್ಲಾ ಘೋಷ ವಾಕ್ಯದ ಮೂಲಕ ಪಶ್ಚಿಮ ಬಂಗಾ​ಳ​ವನ್ನು ಟಿಎಂಸಿ ಬಂಗ್ಲಾ​ವ​ನ್ನಾಗಿ ಪರಿ​ವ​ರ್ತಿ​ಸಲು ಯತ್ನಿ​ಸು​ತ್ತಿದೆ ಎಂದಿ​ದ್ದರು.

Follow Us:
Download App:
  • android
  • ios