Asianet Suvarna News Asianet Suvarna News

ಬಾಂಗ್ಲಾ ಭಾರತಕ್ಕಿಂತ ಹೆಚ್ಚು ಸಂತೋಷದ ದೇಶ, ವಿಡಿಯೋ ಮಾಡಿದ್ದ ಧ್ರುವ ರಾಠಿಯನ್ನು ಬಿಜೆಪಿ ಟ್ರೋಲ್!

ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಪರಾರಿಯಾಗಿದ್ದಾರೆ. ಪ್ರಧಾನಿ ನಿವಾಸದಲ್ಲಿ ಪ್ರತಿಭಟನಾಕಾರರು ಗುಡಿಸಿ ಗುಂಡಾಂತ ಮಾಡಿದ್ದಾರೆ. ಇದೇ ಬಾಂಗ್ಲಾದೇಶ ಭಾರತಕ್ಕಿಂತ ಹೆಚ್ಚು ಸಂತೋಶದ ದೇಶ ಎಂಬ ವರದ ಹೊಗಳಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಧ್ರುವ್ ರಾಠಿಯನ್ನು ಬಿಜೆಪಿ ಜೋಕರ್ ಎಂದು ಟ್ರೋಲ್ ಮಾಡಿದೆ.

BJP Shehzad Poonawalla troll dhruv rathee and share old video of praising bangladesh ckm
Author
First Published Aug 5, 2024, 9:42 PM IST | Last Updated Aug 5, 2024, 10:05 PM IST

ನವದೆಹಲಿ(ಆ.05) ಬಾಂಗ್ಲಾದೇಶ ಪರಿಸ್ಥಿತಿ ಗಂಭೀರವಾಗಿದೆ. ಪ್ರಧಾನಿ ಶೇಖ್ ಹಸೀನಾ ದೇಶದಿಂದಲೇ ಪರಾರಿಯಾಗಿದ್ದಾರೆ. ಬಾಂಗ್ಲಾದೇಶ ಸೇನೆ ಇದೀಗ ಅಧಿಕಾರ ವಹಿಸಿಕೊಳ್ಳಲಿದೆ. ಎಲ್ಲೆಡೆ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿದೆ. ಸೇನೆ ಸೂಚನೆಯಂತೆ ಪ್ರಧಾನಿ ಸ್ಥಾನಕ್ಕೆ ಶೇಕ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಅತ್ತ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಿಂತಿಲ್ಲ, ಪ್ರಧಾನಿ ನಿವಾಸಕ್ಕೂ ದಾಂಗುಡಿ ಇಟ್ಟು ಎಲ್ಲವನ್ನು ಗುಡಿಸಿ ಗುಂಡಾಂತರ ಮಾಡಿದ್ದಾರೆ. ಈ ಬೆಳವಣಿಗೆ ನಡುವೆ ಯೂಟ್ಯೂಟಬರ್ ಧ್ರುವ್ ರಾಠಿಯನ್ನು ಬಿಜೆಪಿ ಟ್ರೋಲ್ ಮಾಡಿದೆ. 2024ರ ಹ್ಯಾಪಿಯೆಸ್ಟ್ ದೇಶಗಳ ಪಟ್ಟಿ ಬಿಡುಗಡೆಯಾಗಿತ್ತು. ವರದಿಯನ್ನು ಹೊಗಳಿ ವಿಡಿಯೋ ಮಾಡಿದ್ದ ಧ್ರುವ್ ರಾಠಿ, ಭಾರತಕ್ಕಿಂತ ಬಾಂಗ್ಲಾದೇಶದ ಜನರು ಹೆಚ್ಚು ಸಂತೋಷವಾಗಿದ್ದಾರೆ ಎಂದಿದ್ದರು. ಇದೀಗ ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಬಿಜೆಪಿ ನಾಯಕ, ಜೋಕರ್ ಎಂದು ಟ್ರೋಲ್ ಮಾಡಿದ್ದಾರೆ.

ಇತ್ತೀಚೆಗೆ 2024ರ ಹ್ಯಾಪಿಯೆಸ್ಟ್ ದೇಶಗಳ ಪಟ್ಟಿ ಬಿಡುಗಡೆಯಾಗಿತ್ತು. ಹಲವು ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿತ್ತು. ಈ ವರದಿ ಭಾರಿ ಕೋಲಾಹಲಕ್ಕೂ ಕಾರಣಾಗಿತ್ತು. ಕಾರಣ ಈ ವರದಿಯಲ್ಲಿ ಬಾಂಗ್ಲಾದೇಶ ಭಾರತಕ್ಕಿಂತ ಉತ್ತಮ ಸ್ಥಾನ ಪಡೆದಿತ್ತು. ಅಂದರೆ ಬಾಂಗ್ಲಾದೇಶದ ಜನರು ಭಾರತಕ್ಕಿಂತ ಹೆಚ್ಚು ಸಂತೋಷವಾಗಿದ್ದಾರೆ. ಬಾಂಗ್ಲಾದೇಶ, ಭಾರತಕ್ಕಿಂತ ಹೆಚ್ಚು ಸಂತೋಷವಾದ ದೇಶ ಎಂದು ಹೇಳಿತ್ತು. ಇದೇ ವರದಿ ಆಧಾರದಲ್ಲಿ ಧ್ರುವ್ ರಾಠಿ ವಿಡಿಯೋ ಪೋಸ್ಟ್ ಮಾಡಿದ್ದರು.

ಬಾಂಗ್ಲಾದೇಶ ಪ್ರಧಾನಿ ರಾಜೀನಾಮೆ, ಭಾರತಕ್ಕೆ ಓಡಿಬಂದ ಶೇಖ್‌ ಹಸೀನಾ!

ಈ ವಿಡಿಯೋದಲ್ಲಿ ಧ್ರುವ್ ರಾಠಿ, ಬಾಂಗ್ಲಾದೇಶ ಹಲವು ವಿಚಾರದಲ್ಲಿ ಭಾರತವನ್ನು ಹಿಂದಿಕ್ಕಿದೆ. ಈ ಮೂಲಕ ಬಾಂಗ್ಲಾದೇಶ ಭಾರತಕ್ಕಿಂತ ಅತೀ ಸಂತೋಷದ ದೇಶ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದಿದ್ದರು. ಈ ವಿಡಿಯೋವನ್ನು ಬಿಜೆಪಿ ನಾಯಕ ಶೆಹಜಾದ್ ಪೂನವಾಲ ಹಂಚಿಕೊಂಡಿದ್ದಾರೆ. ಬಳಿಕ ಜೋಕರ್ ಆಪ್ ದಿ ಸೆಂಚುರಿ ಎಂದು ಟ್ರೋಲ್ ಮಾಡಿದ್ದಾರೆ.

 

 

ಶೆಹಜಾದ್ ಪೂನಾವಾಲಗೆ ಧ್ರುವ್ ರಾಠಿ ತಿರುಗೇಟು ನೀಡಿದ್ದಾರೆ. ಇದು ಹಳೆ ವಿಡಿಯೋ. ಅಂದಿನ ಡೇಟಾ, ಮಾಹಿತಿ ಆಧರಿಸಿ ವಿಡಿಯೋ ಮಾಡಲಾಗಿದೆ. ಅಂದು ಬಿಡುಗಡೆಯಾಗಿದ್ದ ವರದಿಯಲ್ಲಿ ಇರುವುದನ್ನು ಹೇಳಿದ್ದೇನೆ. ಇದೀಗ ಈ ವಿಡಿಯೋ ಹಂಚಿಕೊಂಡು ಸುಳ್ಳು ಹರಡಬೇಡಿ ಎಂದು ರಾಠಿ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಧ್ರುವ್ ರಾಠಿ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಹಳೇ ವಿಡಿಯೋ ಹಂಚಿಕೊಂಡು ಪ್ರಸ್ತುತ ಪರಿಸ್ಥಿತಿಗೆ ಹೋಲಿಗೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಬಾಂಗ್ಲಾದೇಶದಲ್ಲಿ ಮತ್ತೆ ಭಾರೀ ಸಂಘರ್ಷಕ್ಕೆ 98 ಜನ ಬಲಿ: ಭಾರತೀಯರಿಗೆ ಎಚ್ಚರಿಕೆ

Latest Videos
Follow Us:
Download App:
  • android
  • ios