Asianet Suvarna News Asianet Suvarna News

ಆಯೋಧ್ಯೆಯಲ್ಲಿ ಶೀತಗಾಳಿ, ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಎಲ್‌ಕೆ ಅಡ್ವಾಣಿ ಗೈರಾಗುವ ಸಾಧ್ಯತೆ!

ಆಯೋಧ್ಯೆ ರಾಮ ಮಂದಿರ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬಿಜಿಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ, ಪ್ರಾಣಪ್ರತಿಷ್ಠೆ ಗೈರಾಗುವ ಸಾಧ್ಯತೆ ಇದೆ. ಆಯೋಧ್ಯೆ ಶೀತಗಾಳಿ ಹೆಚ್ಚಾಗಿರವ ಕಾರಣ ಪ್ರಾಣಪ್ರತಿಷ್ಠೆ ಗೈರಾಗುವ ಸಾಧ್ಯತೆ ಇದೆ.
 

BJP senior leader LK Advani unlikely to miss Ayodhya Ram Mandir Prana Pratishta due to cold wave ckm
Author
First Published Jan 22, 2024, 9:19 AM IST

ಆಯೋಧ್ಯೆ(ಜ.22) ರಾಮ ಮಂದಿರ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಗೈರಾಗವು ಸಾಧ್ಯತೆ ಇದೆ. ಆಯೋಥ್ಯೆಯಲ್ಲಿ ತಾಪಮಾನ 10 ಡಿಗ್ರಿ ಸೆಲ್ಶಿಯಸ್‌ಗೆ ಇಳಿದಿದೆ. ಶೀತಗಾಳಿ ಹೆಚ್ಚಾಗಿದೆ. ಹೀಗಾಗಿ ಆರೋಗ್ಯ ಕಾರಣದಿಂದ ಪ್ರಾಣಪ್ರತಿಷ್ಠೆಗೆ ಗೈರಾಗುತ್ತಿದ್ದಾರೆ. 96 ವರ್ಷದ ಎಲ್‌ಕೆ ಅಡ್ವಾಣಿ ರಥಯಾತ್ರೆ ಮೂಲಕ ದೇಶಾದ್ಯಂತ ಜನರಲ್ಲಿ ಸುಪ್ತವಾಗಿ ಅಡಗಿದ್ದ ರಾಮ ಮಂದಿರದ ಜಾಗೃತಿ ಪ್ರಜ್ಞೆಯನ್ನ ಹೊರತಂದಿದ್ದರು. ಇದು ಬಿಜೆಪಿಯ ಆಂದೋಲನವಾಗಿ ಬಳಿಕ ಪ್ರಣಾಳಿಕೆಯಲ್ಲೂ ಸೇರಿಕೊಂಡಿತು.

ಅಡ್ವಾಣಿಯ ಆರೋಗ್ಯ ದೃಷ್ಟಿಯಿಂದ ಪ್ರಾಣಪ್ರತಿಷ್ಠಗೆ ಬರಬೇಡಿ ಎಂದು ರಾಮಮಂದಿರ ಟ್ರಸ್ಟ್ ಸದ್ಯಸರು ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿವಾದ ಬೆನ್ನಲ್ಲೇ ಎಲ್‌ಕೆ ಅಡ್ವಾಣಿ ಹಾಗೂ ಮರುಳಿ ಮನೋಹರ್ ಜೋಶಿಯನ್ನು ಪ್ರಾಣಪ್ರತಿಷ್ಠೆಗೆ ಆಹ್ವಾನಿಸಲಾಗಿತ್ತು. ಇದೇ ವೇಳೆ ಆರೋಗ್ಯ ನೋಡಿಕೊಂಡು ತಾವು ಪ್ರಾಣಪ್ರತಿಷ್ಠೆಗೆ ಆಗಮಿಸುವುದಾಗಿ ಹೇಳಿದ್ದರು.

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆಯೋಧ್ಯೆ, ದೇಶ ವಿದೇಶಗಳಿಂದ ಗಣ್ಯರ ಆಗಮನ!

ಎಲ್‌ಕೆ ಅಡ್ವಾಣಿಯನ್ನು ಆಯೋಧ್ಯೆಗೆ ಕರೆತರಲು ವಿಶ್ವ ಹಿಂದೂ ಪರಿಷತ್ ವಿಶೇಷ ವಿಮಾನ ವ್ಯವಸ್ಥೆ ಮಾಡಿತ್ತು.  ಆದರೆ ಪ್ರತಿಕೂಲ ಹವಾಮಾನ, ಶೀತಗಾಳಿ ಕಾರಣದಿಂದ ಅಡ್ವಾಣಿ ಗೈರಾಗುತ್ತಿದ್ದಾರೆ. ಆರೋಗ್ಯ ದೃಷ್ಟಿಯಿಂದ ಅಡ್ವಾಣಿ ಕುಟುಂಬಸ್ಥರು ಈ ಸೂಚನೆ ನೀಡಿದ್ದಾರೆ. 

ಭಾರತೀಯ ಹವಾಮಾನ ಇಲಾಖೆ ಆಯೋಧ್ಯೆಯ ಇಂದಿನ ವಾತಾವರಣದ ಕುರಿತು ಮಾಹಿತಿ ನೀಡಿದ್ದಾರೆ. ಇಂದು ಆಯೋಧ್ಯೆಯಲ್ಲಿ ಕನಿಷ್ಠ 6 ರಿಂದ 8 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಲಿದೆ. ಗರಿಷ್ಠ 15 ರಿಂದ 17 ಡಿಗ್ರಿ ಸೆಲ್ಶಿಯಸ್ ದಾಖಲಾಗಲಿದೆ. ಆಯೋಧ್ಯೆಗೆ ಇಂದು ಗಣ್ಯರ ಸಾವಿರಾರು ವಿಮಾನಗಳು ಆಗಮಿಸುತ್ತಿದೆ. ಹೀಗಾಗಿ ಆಕಾಶದ ವಾತಾರಣ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಆಕಾಶ ತಿಳಿಗೊಂಡಿದೆ. ಮಂಜು ಕವಿದ ವಾತಾವರವಿಲ್ಲ. ಹೀಗಾಗಿ ಆಯೋಧ್ಯೆ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಸರಾಗವಾಗಿ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ರಾಮ ಮಂದಿರದಲ್ಲಿ 114 ಕಲಶ ನೀರಿನಿಂದ ಮೂರ್ತಿ ಪುಣ್ಯಸ್ನಾನ, ಪೂಜಾ ವಿಧಿವಿಧಾನ ಆರಂಭ!

ಇತ್ತ ಆಯೋಧ್ಯೆ ರಾಮ ಮಂದಿರಕ್ಕೆ ಪ್ರಧಾನಿ ಮೋದಿ ಸೇರಿದಂತೆ ವಿಶ್ವದ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸ್ ಭದ್ರತೆ, ಭದ್ರತಾ ಪಡೆಗಳು, ಭಯೋತ್ಪಾದಕ ನಿಗ್ರಹ ಪಡೆ ಸೇರಿದಂತೆ ಹಲವು ಶಸಸ್ತ್ರ ಪಡೆಗಳು ಭದ್ರತೆ ಜವಾಬ್ದಾರಿ ನಿರ್ವಹಿಸುತ್ತಿದೆ. ಈಗಾಗಲೇ ಸಾಧು ಸಂತರು ಆಯೋಧ್ಯೆಯತ್ತ ಧಾವಿಸುತ್ತಿದ್ದಾರೆ. ಸೆಲೆಬ್ರೆಟಿಗಳು ಆಯೋಧ್ಯೆಗೆ ತೆರಲಿದ್ದಾರೆ. ಗಣ್ಯರು ಸೇರಿದಂತೆ ಆಹ್ವಾನಿತರು ಆಯೋಧ್ಯೆಗೆ ಆಗಮಿಸುತ್ತಿದ್ದಾರೆ.
 

Follow Us:
Download App:
  • android
  • ios