* ಪಕ್ಷಗಳಿಗೆ 920 ಕೋಟಿ ದೇಣಿಗೆ* ಈ ಪೈಕಿ ಬಿಜೆಪಿಗೆ 720 ಕೋಟಿ* 2019-20ನೇ ಸಾಲಿನ ಕಾರ್ಪೊರೆಟ್ ದೇಣಿಗೆ*ಆಡಳಿತದಲ್ಲಿರುವ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ
ನವದೆಹಲಿ(ಏ.06) 2019-20ನೇ ಸಾಲಿನಲ್ಲೂ ಕಾರ್ಪೋರೆಟ್ ಸಂಸ್ಥೆಗಳು (corporate companies ) ವಿವಿಧ ರಾಜಕೀಯ ಪಕ್ಷಗಳಿಗೆ ಒಟ್ಟಾರೆ 921.95 ಕೋಟಿ ರು. ದೇಣಿಗೆ ನೀಡಿವೆ. ಈ ಪೈಕಿ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯೊಂದಕ್ಕೇ (BJP) 720 ಕೋಟಿ ದೇಣಿಗೆ ನೀಡಲಾಗಿದೆ ಎಂದು ಪ್ರಜಾಪ್ರಭುತ್ವ ಸುಧಾರಣೆ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.
ಬಿಜೆಪಿ 2025 ಕಾರ್ಪೋರೇಟ್ ಕಂಪನಿಗಳಿಂದ 720.4 ಕೋಟಿ ರು. ದೇಣಿಗೆ ಪಡೆದುಕೊಂಡಿದೆ. ಇದು ರಾಷ್ಟ್ರೀಯ ಪಕ್ಷವೊಂದು ಪಡೆದುಕೊಂಡ ಅತಿ ಹೆಚ್ಚಿನ ದೇಣಿಗೆಯಾಗಿದೆ. ಉಳಿದಂತೆ ಕಾಂಗ್ರೆಸ್ ಪಕ್ಷ 154 ಕಂಪನಿಗಳಿಂದ 133.04 ಕೋಟಿ ರು. ದೇಣಿಗೆ ಪಡೆದುಕೊಂಡಿದೆ. ಎನ್‌ಸಿಪಿ 36 ಕಂಪನಿಗಳಿಂದ 57 ಕೋಟಿ ರು. ದೇಣಿಗೆ ಪಡೆದುಕೊಂಡಿದೆ. ಉಳಿದಂತೆ ರಾಷ್ಟ್ರೀಯ ಪಕ್ಷಗಳಾದ ಬಿಎಸ್‌ಪಿ ಮತ್ತು ಸಿಪಿಐ 20 ಸಾವಿರಕ್ಕಿಂತ ಕಡಿಮೆ ದೇಣಿಗೆ ಪಡೆದುಕೊಂಡಿವೆ.
ತನ್ನೆಲ್ಲ ಆಸ್ತಿ ರಾಹುಲ್ ಗಾಂಧಿಗೆ ಬರೆದ ಮಹಿಳೆ.. ಕಾರಣ ಏನು?
ದೇಣಿಗೆ ನೀಡಿದವರ ಪೈಕಿ ಚುನಾವಣಾ ಟ್ರಸ್ಟ್‌ಗಳ ಪಾಲು ಶೇ.43ರಷ್ಟಿದೆ. ಉತ್ಪಾದನಾ ವಲಯದ ಉದ್ಯಮದ ಪಾಲು ಶೆ.15.87, ಗಣಿ/ನಿರ್ಮಾಣ/ ರಫ್ತು, ಆಮದು ವಲಯದ ಪಾಲು ಶೇ.13ರಷ್ಟಿದೆ ಎಂದು ವರದಿ ಹೇಳಿದೆ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅತಿ ಹೆಚ್ಚು ದೇಣಿಗೆ ನೀಡಿದ ಸಂಸ್ಥೆಯಾಗಿದೆ.
2019-20ನೇ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಮತ್ತು ವ್ಯಾಪಾರ ಸಂಸ್ಥೆಗಳಿಂದ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 921.95 ಕೋಟಿ ರೂ. ದೇಣಿಗೆಯಾಗಿ ಬಂದಿದೆ. ಇದರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗರಿಷ್ಠ ದೇಣಿಗೆ ಪಡೆದಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಬಿಜೆಪಿ ಒಟ್ಟು 720.407 ಕೋಟಿ ರೂಪಾಯಿ ಕಾರ್ಪೊರೇಟ್ ದೇಣಿಗೆಯನ್ನು ಸ್ವೀಕರಿಸಿದೆ ಎಂದು ಹೇಳಿತ್ತು
ಮುಂಬೈ ಭ್ರಷ್ಟಾಚಾಆರದ ವಾಸನೆ: ಮುಂಬೈನ ಚಾಲ್‌ಗಳನ್ನು ಮರು ನಿರ್ಮಾಣ ಯೋಜನೆಯಡಿ ನಡೆದಿದೆ ಎನ್ನಲಾದ 1034 ಕೋಟಿ ರು.ಮೌಲ್ಯದ ಭೂ ಅಕ್ರಮ ಪ್ರಕರಣ ಸಂಬಂಧ, ಶಿವಸೇನೆ ಸಂಸದ ಸಂಜಯ್ ರಾವತ್ ಅವರ ಕುಟುಂಬಕ್ಕೆ ಸೇರಿದ ಭಾರೀ ಪ್ರಮಾಣದ ಭೂಮಿಯನ್ನು ಇಡಿ ತನ್ನ ವಶಕ್ಕೆ ಪಡೆದಿದೆ. ಮುಂಬೈ ಹೊರವಲಯದ ಅಲಿಬಾಗ್‌ನಲ್ಲಿರುವ 8 ಜಮೀನು ಮತ್ತು ಮುಂಬೈನ ದಾದರ್‌ನಲ್ಲಿರುವ ಫ್ಲ್ಯಾಟ್ ಅನ್ನು ಇಡಿ ವಶಕ್ಕೆ ಪಡೆದಿದೆ. ಇತ್ತೀಚೆಗಷ್ಟೇ ಇದೇ ಹಗರಣ ಸಂಬಂಧ ಪ್ರವೀಣ್ ರಾವತ್ ಅವರನ್ನು ಇಡಿ ಬಂಧಿಸಿತ್ತು. ಅಲ್ಲದೆ ಸಂಜಯ್ ಅವರ ಪತ್ನಿಯನ್ನು ಕಳೆದ ವರ್ಷ ವಿಚಾರಣೆ ಕೂಡಾ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, ‘ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಿ, ನನಗೆ ಗುಂಡು ಹಾರಿಸಿ ಅಥವಾ ನನ್ನನ್ನು ಜೈಲಿಗೆ ಕಳುಹಿಸಿ ಇಂಥದ್ದಕ್ಕೆಲ್ಲಾ ನಾನು ಹೆದರುವವನಲ್ಲ. ನಾನು ಬಾಳಾಸಾಹೇಬ್ ಠಾಕ್ರೆ ಅವರ ಹಿಂಬಾಲಕ, ಓರ್ವ ಶಿವಸೈನಿಕ. ಇದಕ್ಕೆಲ್ಲಾ ಹೆದರಿ ಸುಮ್ಮನೆ ಕೂರುವುದಿಲ್ಲ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನಾನು ಅವರ ಬಣ್ಣ ಬಯಲು ಮಾಡುತ್ತೇನೆ’ ಎಂದು ಅಬ್ಬರಿಸಿದ್ದಾರೆ.
