ಬೆಂಗಳೂರು(ಏ.17): ಕೊರೋನಾ ಹೆಮ್ಮಾರಿ ದೇಶವನ್ನು ಆವರಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಲಾಕ್‌ಡೌನ್ ವಿಸ್ತರಿಸಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಇತ್ತ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬಿದ್ದಿದೆ. ಉತ್ಪಾದನಾ ವಲಯ ಅಪಾಯಕ್ಕೆ ಸಿಲುಕಿದೆ. ಹೀಗಾಗಿ ಉತ್ಪಾದನಾ ವಲಯಕ್ಕೆ RBI 50 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ RBI ಕೈಗೊಂಡ ನಿರ್ಧಾರವನ್ನು ರಾಜ್ಯಸಭಾ ಎಂಪಿ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ವಾರಿಯರ್ಸ್‌ಗೆ ರಾಜೀವ್ ಚಂದ್ರಶೇಖರ್ ಅನಂತ ಧನ್ಯವಾದ...

ಟ್ವಿಟರ್ ಮೂಲಕ ರಾಜೀವ್ ಚಂದ್ರಶೇಖರ್ RBI ಕೈಗೊಂಡ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಥಿಕತೆಗೆ ಚೇತರಿಕೆ ನೀಡಲು RBI ಮತ್ತೆ ದಿಟ್ಟ ಹಾಗೂ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿದೆ. ಉತ್ತಮ ಹಾಗೂ ಫಲಪ್ರದ ಕ್ರಮಗಳಿಂದ ಭಾರತದ ಆರ್ಥಿಕತೆ ಈ ವರ್ಷ ಸರಿಯಾದ ದಿಕ್ಕಿನಲ್ಲಿ ಸಾಗುವ ಭರವಸೆ ಇದೆ. ಇಷ್ಟೇ ಅಲ್ಲ ಮುಂದಿನ ವರ್ಷ ಪುಟಿದೇಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.

 

ನಮ್ಮ ಬೆಂಗಳೂರು ಜೊತೆ ಕೈಜೋಡಿಸಿದ ಪೊಲೀಸ್; COVID-19 ವಿರುದ್ಧದ ಹೋರಾಟಕ್ಕೆ ಸಿಕ್ತು ಮತ್ತಷ್ಟು ವೇಗ!...

ಇನ್ನು RBI ಕ್ರಮ ಶ್ಲಾಘಿಸುತ್ತಾ, ರಾಜ್ಯ ಸರ್ಕಾರಗಳಿಗೆ RBI ನೀಡಿರುವ ಶೇಕಡಾ 60 ರಷ್ಟು ಹಣಕಾಸಿನ ನೆರವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. NBFC, NBARD, SIDBI, HFC ಮೂಲಕ RBI ನೀಡಿರುವ ಹಣಕಾಸಿನ ನೆರವು ನಿಜಕ್ಕೂ ಭಾರತದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ ಎಂದು ರಾಜೀವ್ ಚಂದ್ರಶೇಖರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಭಾರತದ ಆರ್ಥಿಕತೆಯಲ್ಲಿ ಸ್ಥಿರತೆ ಕಾಪಾಡಲು ಬ್ಯಾಂಕ್ ಸಾಲ ನೀಡುವಿಕೆಯನ್ನು RBI ಉತ್ತೇಜಿಸಿದೆ. ಇದಕ್ಕಾಗಿಯೇ ವಿಶೇಷ ಪ್ಯಾಕೇಜ್ ಕೂಡ ಘೋಷಣೆ ಮಾಡಿದೆ. ಕೃಷಿ ಮತ್ತಿ ಗ್ರಾಮೀಣಾಭಿವೃದ್ದಿ ಬ್ಯಾಂಕ್, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಹಾಗೂ ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ಗೆ ಮರು ಬಂಡವಾಳ ಪೂರೈಕೆಗೆ RBI ಮಹತ್ವದ ನಿರ್ಧಾರ ಕೈಗೊಂಡಿದೆ. RBI ರಿವರ್ಸ್ ರೆಪೋ ದರವನ್ನು ಕಡಿಮೆಗೊಳಿಸುವ ಮೂಲಕ ಉತ್ಪಾದಕ ಕ್ಷೇತ್ರಗಳಿಗೆ ನೆರವು ನೀಡಿದೆ. ಇದೀಗ ಈ ಕ್ರಮಗಳನ್ನು ರಾಜೀವ್ ಚಂದ್ರಶೇಖರ್ ಭಾರತದ ಆರ್ಥಿಕ ಉತ್ತೇಜನಕ್ಕೆ ಪೂರಕ ಎಂದಿದ್ದಾರೆ.