* ‘ಗರೀಬ್‌ ಕಲ್ಯಾಣ’ (ಬಡವರ ಕಲ್ಯಾಣ)ಕ್ಕೆ ಒತ್ತು ನೀಡುವ ನಿರ್ಣಯ* ಬಿಜೆಪಿ ಕಾರ‍್ಯಕಾರಿಣಿ ಸಭೆ ಗೊತ್ತುವಳಿ ಅಂಗೀಕಾರ* ಸದೃಢ ತೆಲಂಗಾಣ ನಿರ್ಮಾಣಕ್ಕೂ ನಿರ್ಣಯ

ಹೈದರಾಬಾದ್‌(ಜು.04): ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ನೀತಿಯನ್ವಯ ‘ಗರೀಬ್‌ ಕಲ್ಯಾಣ’ (ಬಡವರ ಕಲ್ಯಾಣ)ಕ್ಕೆ ಒತ್ತು ನೀಡುವ ನಿರ್ಣಯವೊಂದನ್ನು ಬಿಜೆಪಿ ಕಾರ‍್ಯಕಾರಿಣಿ ಸಭೆ ಗೊತ್ತುವಳಿ ಅಂಗೀಕರಿಸಿದೆ. ಇದೇ ವೇಳೆ ತೆಲಂಗಾಣದಲ್ಲಿನ ಜನವಿರೋಧಿ ಸರ್ಕಾರಕ್ಕೆ ಅಂತ್ಯ ಹಾಡಿ ಜನಪರ ಸರ್ಕಾರ ರಚಿಸಲು ಪಣ ತೊಡುವ ರಾಜಕೀಯ ಗೊತ್ತುವಳಿಗೂ ಅದು ಅಂಗೀಕಾರ ನೀಡಿದೆ.

ಆರ್ಥಿಕ ಗೊತ್ತುವಳಿ:

- ಗರೀಬ್‌ ಕಲ್ಯಾಣ ಯೋಜನೆ ಮೂಲಕ ಬಡವರಿಗೆ ಆಹಾರ ಧಾನ್ಯ ಒದಗಿಸುವುದು

- ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಬಡವರಿಗೆ ಆರ್ಥಿಕ ಭದ್ರತೆ ನೀಡುವುದು

- ಜನಧನ ಯೋಜನೆಯಂಥವುಗಳ ಮೂಲಕ ಆರ್ಥಿಕ ಒಳಗೊಳ್ಳುವಿಕೆಗೆ ಒತ್ತು

- ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಮೂಲಕ ಸ್ವಯಂ ಉದ್ಯೋಗಕ್ಕೆ ನೆರವು

- ಜಲಜೀವನ ಮಿಷನ್‌ ಮೂಲಕ ಎಲ್ಲರಿಗೂ ಕುಡಿಯುವ ನೀರು

- ಸಣ್ಣ ಹಾಗೂ ಬೃಹತ್‌ ಉದ್ದಿಮೆಗಳಿಗೆ ನೆರವು ನೀಡಿ ಆತ್ಮನಿರ್ಭರ ಭಾರತ ನಿರ್ಮಾಣ

ರಾಜಕೀಯ ಗೊತ್ತುವಳಿ

- ತೆಲಂಗಾಣದಲ್ಲಿನ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಕಳವಳಕಾರಿ

- ತೆಲಂಗಾಣದ ಇಂದಿನ ದುಃಸ್ಥಿತಿಗೆ ಪರಿವಾರವಾದಿ ಸರ್ಕಾರವೇ ಕಾರಣ

- ಎಲ್ಲರನ್ನೂ ಒಳಗೊಂಡ ಸದೃಢ ತೆಲಂಗಾಣ ನಿರ್ಮಿಸುವುದು

- ತೆಲಂಗಾಣದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಗೆ ಆದ್ಯತೆ

- ತೆಲಂಗಾಣದಲ್ಲಿ ಹಿಂದೆ ಮುಚ್ಚಿರುವ ಕಾರ್ಖಾನೆಗಳ ಪುನಾರಂಭಕ್ಕೆ ಆದ್ಯತೆ

- ಈಗಿನ ಕೆಸಿಆರ್‌ ಸರ್ಕಾರಕ್ಕೆ ಬಿಜೆಪಿಯೊಂದೇ ಪರ್ಯಾಯ