Asianet Suvarna News Asianet Suvarna News

ಪ್ರಮಾಣವಚನ ವೇಳೆ ಅಪ್ಪ ಅಮ್ಮ ಹೆಸರು: ಉದ್ಧವ್ ಅಂದ್ರು ಅವರೇ ಅಲ್ವೇ ನನ್ನುಸಿರು!

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ಉದ್ಧವ್ ಠಾಕ್ರೆ| ಪ್ರತಿಜ್ಞಾ ವಿಧಿ ವೇಳೆ ತಮ್ಮ ತಂದೆ-ತಾಯಿ ಹೆಸರು ಉಲ್ಲೇಖಿಸಿದ್ದ ಉದ್ಧವ್| ತಂದೆ-ತಾಯಿ ಹೆಸರು ಉಲ್ಲೇಖಿಸಿದ್ದಕ್ಕೆ ಬಿಜೆಪಿ ವಿರೋಧ| 'ಸಾಂವಿಧಾನಿಕ ಹುದ್ದೆ ಅಲಂಕರಿಸುವಾಗ ವೈಯಕ್ತಿಕ ಸಂಬಂಧಗಳನ್ನು ಉಲ್ಲೇಖಿಸಬಾರದು'| ಬಿಜೆಪಿ ಆರೋಪಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಸಿಎಂ ಉದ್ಧವ್ ಠಾಕ್ರೆ| 'ಜನ್ಮಕ್ಕೆ ಕಾರಣರಾದ ತಂದೆ-ತಾಯಿಯನ್ನು ನೆನೆಯದಿದ್ದರೆ ಮನುಷ್ಯನಾಗಲು ಸಾಧ್ಯವೇ'?| 'ತಂದೆ-ತಾಯಿಯನ್ನು ನೆನೆಯುವುದು ತಪ್ಪು ಎಂದಾದರೆ ನಾನು ಈ ತಪ್ಪನ್ನು ಮತ್ತೆ ಮತ್ತೆ ಮಾಡುತ್ತೇನೆ'|

BJP Objected To Uddhav Thackeray Invoking Parents In Oath
Author
Bengaluru, First Published Nov 30, 2019, 9:40 PM IST

ಮುಂಬೈ(ನ.30): ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಿವಸೇನೆಯ ಉದ್ಧವ್ ಠಾಕ್ರೆ, ಪ್ರತಿಜ್ಞಾ ವಿಧಿ ವೇಳೆ ತಮ್ಮ ತಂದೆ-ತಾಯಿ ಹೆಸರು ಉಲ್ಲೇಖಿಸಿದ್ದನ್ನು ಬಿಜೆಪಿ ವಿರೋಧಿಸಿದೆ.

ಸಾಂವಿಧಾನಿಕ ಹುದ್ದೆ ಅಲಂಕರಿಸುವಾಗ ವೈಯಕ್ತಿಕ ಸಂಬಂಧಗಳನ್ನು ಉಲ್ಲೇಖಿಸಬಾರದು ಎಂದು ಬಿಜೆಪಿ ಹರಿಹಾಯ್ದಿದೆ. ಉದ್ಧವ್ ತಮ್ಮ ತಂದೆ-ತಾಯಿ ಹೆಸರು ಉಲ್ಲೇಖಿಸಿದ್ದು ತಪ್ಪು ಎಂದು ಹೇಳಿದೆ.

‘ಮಹಾ’ದಲ್ಲಿ ಉದ್ಧವ್ ದರ್ಬಾರ್: ಅಸ್ತಿತ್ವಕ್ಕೆ ಬಂತು ಅಘಾಡಿ ಸರ್ಕಾರ್!

ಆದರೆ ಬಿಜೆಪಿ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಉದ್ಧವ್ ಠಾಕ್ರೆ, ವ್ಯಕ್ತಿಯೋರ್ವ ತನ್ನ ಜನ್ಮಕ್ಕೆ ಕಾರಣರಾದ ತಂದೆ-ತಾಯಿಯನ್ನು ನೆನೆಯದಿದ್ದರೆ ಆತನನ್ನು ಮನುಷ್ಯ ಎಂದು ಕರೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ತಂದೆ-ತಾಯಿಯನ್ನು ನೆನೆಯುವುದು ತಪ್ಪು ಎಂದಾದರೆ ನಾನು ಈ ತಪ್ಪನ್ನು ಮತ್ತೆ ಮತ್ತೆ ಮಾಡುತ್ತೇನೆ ಎಂದು ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಪ್ರಮಾಣವಚನ ಸಮಾರಂಭದಲ್ಲಿ ತಂದೆ-ತಾಯಿಯ ಹೆಸರು ಉಲ್ಲೇಖಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ಉದ್ಧವ್ ಬಹುಮತ ಸಾಬೀತುಪಡಿಸಿದರು: ದಂಡು ಕಟ್ಕೊಂಡು ಫಡ್ನವೀಸ್ ಹೊರ ನಡೆದರು!

ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿರುವ ಉದ್ಧವ್ ಠಾಕ್ರೆ, ವಿಕಾಸ್ ಅಘಾಡಿ ಸರ್ಕಾರದ ನೊಗವನ್ನು ಅಧಿಕೃತವಾಗಿ ಹೊತ್ತುಕೊಂಡಿದ್ದಾರೆ.

Follow Us:
Download App:
  • android
  • ios