ದೀಪಾವಳಿ ಸಂದರ್ಭದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ಆದರೆ ಪಟಾಕಿ ಹಚ್ಚುವುದು ಕೆಲವೆಡೆ ನಡೆದಿದೆ. ಇದೀಗ ಬಿಜೆಪಿ ಸಂಸದರೋರ್ವರ ಮೊಮ್ಮಗಳು ಪಟಾಕಿ ದುರಂತಕ್ಕೆ ಬಲಿಯಾಗಿದ್ದಾಳೆ

ವದೆಹಲಿ (ನ.17): ಈ ಬಾರಿ ದೇಶದ ಹಲವು ರಾಜ್ಯಗಳಲ್ಲಿ ಪಟಾಕಿಗೆ ನಿಷೇಧ ಹೇರಲಾಗಿದ್ದು, ಪಟಾಕಿ ಅನಾಹುತಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದವು. ಆದರೆ ಕೆಲವೆಡೆ ಅನಾಹುತಗಳು ಸಂಭವಿಸಿದೆ. 

ಬಿಜೆಪಿ ಸಂಸದರೋರ್ವರ 6 ವರ್ಷದ ಪುಟ್ಟ ಮೊಮ್ಮಗಳು ಪಟಾಕಿಯಿಂದ ಪ್ರಾಣ ಕಳೆದುಕೊಂಡಿದ್ದಾಳೆ. 

ಸಂಸದೆ ರೀಟಾ ಬಹುಗುಣ ಜೋಶಿ ಅವರ ಮೊಮ್ಮಗಳು ಆಟವಾಡಲು ತೆರಳಿದ್ದ ವೇಳೆ ಪಟಾಕಿಯಿಂದ ಬೆಂಕಿ ಹತ್ತಿ ಪ್ರಾಣ ಕಳೆದುಕೊಂಡಿದ್ದಾಳೆ.

ಹಸಿರು ಪಟಾಕಿ ರೂಲ್ಸ್‌ಗಿಲ್ಲ ಕಿಮ್ಮತ್ತು, ಸಾಮಾನ್ಯ ಪಟಾಕಿಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು ..

ಪುಟ್ಟ ಬಾಲಕಿಗೆ ಪಟಾಕಿಯಿಂದ ತಗುಲಿದ ಬೆಂಕಿಯಿಂದ ದೇಹದ ಶೇ,60 ರಷ್ಟು ಭಾಗ ಸುಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಆದರೆ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಆಕೆ ಅಸುನೀಗಿದ್ದಾಳೆ