ಕೋಲ್ಕತ್ತಾ(ಅ.02) ಉಯಸಿದ್ದು ಆಗುವುದು ಅಂದರೆ ಇದೇ ಇರಬೇಕು. ಆದರೆ ಇಲ್ಲಿ ಕೆಟ್ಟದಾಗಿದೆ,. ಬೇರೆಯವರಿಗೆ ಕೆಟ್ಟದ್ದು ಬಯಸಲು ಹೋದ ಮುಖಂಡ ತಾನೇ ಸಂಕಷ್ಟಕ್ಕೆ ಸಿಲುಕಿದ್ದಾನೆ. 

 ಒಂದು ವೇಳೆ ನನಗೆ ಕೋವಿಡ್-19 ಸೋಂಕು ತಗುಲಿದರೆ ನಾನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಅನುಪಮ್ ಹಜ್ರಾಗೆ ಕೊರೋನಾ ದೃಢಪಟ್ಟಿದೆ.

ಆನ್ ಲೈನ್ ಖರೀದಿದಾರರೆ ಎಚ್ಚರ.. ಈ ಕಂಪನಿಯ ತುಂಬಾ ಕೊರೋನಾ

 ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಇತ್ತೀಚಿಗಷ್ಟೇ   ನೇಮಕಗೊಂಡಿದ್ದ  ಹಜ್ರಾ ಗೆ  ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಕೋಲ್ಕತಾದ ಖಾಸಗಿ ಆಸ್ಪತ್ಪೆಗೆ ದಾಖಲಾಗಿದ್ದಾರೆ.

ಕೋವಿಡ್-19 ರೋಗಿಗಳ ಕುಟುಂಬಗಳ ನೋವು ಏನು ಎಂಬುದನ್ನು ಮಮತಾ ಬ್ಯಾನರ್ಜಿಗೆ ಅರ್ಥ ಮಾಡಿಸಲು ಕೊರೋನಾ ಬಂದರೆ ನ ನಾನು ಅವರನ್ನು ತಬ್ಬಿಕೊಳ್ಳುತ್ತೇನೆ ಎಂದು ಹಜ್ರಾ ನೀಡಿದ್ದ ಹೇಳಿಕೆ ವಿವಾದ ಎಬ್ಬಿಸಿತ್ತು.  ಟಿಎಂಸಿ ದೂರು ಸಹ ದಾಖಲು ಮಾಡಿತ್ತು.

ಬಿಜೆಪಿ ಕಾರ್ಯಕರ್ತರು ಕೊರೋನಾಗಿಂತಲೂ ದೊಡ್ಡ ಶತ್ರುವಾಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ. ಒಂದು ವೇಳೆ ನನಗೆ ಕೊರೋನಾ ಸೋಂಕು ತಾಗಿದರೆ ಮಮತಾ  ಅವರನ್ನು ತಬ್ಬಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದರು.