Asianet Suvarna News Asianet Suvarna News

ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತ ಮಹಾಭಾರತದ ದ್ರೌಪದಿಯ ಬಂಧಿಸಿದ ಪೊಲೀಸರು

ಬನ್ಸ್‌ದ್ರೋನಿ ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಾಜಿ ಸಂಸದೆ ಹಾಗೂ ನಟಿ ರೂಪಾ ಗಂಗೂಲಿ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. 

BJP Leader Roopa Ganguly Arrested Amidst Protests Over Student's Death
Author
First Published Oct 3, 2024, 7:38 PM IST | Last Updated Oct 3, 2024, 7:40 PM IST

ಭಾರತೀಯ ಜನತಾ ಪಾರ್ಟಿಯ ಮಾಜಿ ಸಂಸದೆ ಹಾಗೂ ಮಹಾಭಾರತ ಸೀರಿಯಲ್‌ನಲ್ಲಿ ದ್ರೌಪದಿ ಪಾತ್ರ ಮಾಡಿ ದೇಶದ ಲಕ್ಷಾಂತರ ಜನರನ್ನು ರಂಜಿಸಿದ್ದ ನಟಿ ರೂಪಾ ಗಂಗೂಲಿ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಬನ್ಸ್‌ದ್ರೋನಿ ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸ್ ಕಮೀಷನರ್ ಮನೋಜ್‌ ಕುಮಾರ್ ವರ್ಮಾ ಹೇಳಿದ್ದಾರೆ. 

ನಿನ್ನೆ ಬನ್ಸ್‌ದ್ರೋನಿ ಬಳಿ ಅಪಘಾತವೊಂದು ಸಂಭವಿಸಿತ್ತು. ಈ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸಾವನ್ನಪ್ಪಿದ್ದ, ಈ ಘಟನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಐವರನ್ನು ಪೊಲೀಸರು ಬಂಧಿಸಿದ್ದಾರೆ. 

ಈ ವೇಳೆ ಪೊಲೀಸ್ ಠಾಣೆಗೆ ಬಂದ ರೂಪಾ ಗಂಗೂಲಿ ಅವರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಕ್ಕೆ ಈ ನಾಲ್ವರನ್ನು  ಬಂಧಿಸಲಾಗಿದೆ. ಹೀಗಾಗಿ ಕೂಡಲೇ  ಬಂಧಿಸಿದವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಪೊಲೀಸರು ಒಪ್ಪದೇ ಇದ್ದಾಗ ಅಲ್ಲೇ ಧರಣಿ ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕೋರ್ಟ್ ಬೇಲ್ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಮನೋಜ್‌ ಕುಮಾರ್ ವರ್ಮಾ ಹೇಳಿದ್ದಾರೆ.

ದ್ರೌಪದಿ ಮಾಡಿದ ಆ ತಪ್ಪಿನಿಂದಲೇ ಪುನರ್ಜನ್ಮದಲ್ಲಿ ಐವರು ಗಂಡಂದಿರ ಪತ್ನಿಯಾಗಿದ್ದು!

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮೀಷನರ್ ಮನೋಜ್ ಕುಮಾರ್ ವರ್ಮಾ, ಆಕೆ ಪೊಲೀಸರು ಬಂಧಿಸಿದವರನ್ನು ಬಿಡುಗಡೆ ಮಾಡುವಂತೆ ಕೇಳಿದರು. ಆದರೆ ಇದು ಸಾಧ್ಯವಿಲ್ಲ, ಅವರ ವಿರುದ್ಧ ಕಾನೂನು ಕ್ರಮದ ಆದೇಶವಿದ್ದು, ಯಾರಿಗಾದರು ಈ ವಿಚಾರದಲ್ಲಿ ಸಮಸ್ಯೆ ಇದ್ದರೆ ಕೋರ್ಟ್ ಮೆಟ್ಟಿಲೇರಬಹುದು ಎಂದು ಹೇಳಿದೆವು. ಆದರೆ ಅವರು ಅಲ್ಲೇ ಧರಣಿ ಕೂತರು. ಹಲವು ಬಾರಿ ಅಲ್ಲಿಂದ ಹೋಗುವಂತೆ ಹೇಳಿದರು ಅವರು ಕೇಳಲಿಲ್ಲ. ಇದರಿಂದ ಪೊಲೀಸರ ಕರ್ತವ್ಯಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ನಾವು ಅವರ ವಿರುದ್ಧ ಕೇಸ್ ದಾಖಲಿಸಿದ್ದೇವೆ. ಅಲ್ಲದೇ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ ಎಂದು ಹೇಳಿದ್ದಾರೆ. 

ಆದರೆ ರೂಪಾ ಗಂಗೂಲಿ ಅವರು ಹೇಳೋದೇ ಬೇರೆ, ಈ ಬಗ್ಗೆ ಮಾತನಾಡಿದ ರೂಪಾ ಗಂಗೂಲಿ, ನಿನ್ನೆ ಕೋಲ್ಕತ್ತಾದ ಬನ್ಸಿದ್ರೋನಿಯಲ್ಲಿ 14 ವರ್ಷದ ಬಾಲಕನೋರ್ವ ಜೆಸಿಬಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ. ಈ ಪ್ರಕರಣದಲ್ಲಿ ಭಾಗಿಯಾದವರು 113ನೇ ವಾರ್ಡ್ ಕಾರ್ಪೋರೇಟರ್‌ ಓರ್ವರ ಸಹಾಯಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಾಲಯ ಅಮಾವಾಸ್ಯೆಯ ದಿನವೇ ಮುಂಜಾನೆ ಈ ಘಟನೆ ನಡೆದಿದೆ. ಟ್ಯೂಷನ್ ಗಾಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆದರೆ ಈ ವೇಳೆ ಜೆಸಿಬಿಯನ್ನುಅದರ ಮಾಲೀಕ ಚಾಲನೆ ಮಾಡುತ್ತಿರಲಿಲ್ಲ, ಹಾಗೂ ಇದು ಚಾಲನಾ ತರಬೇತಿ ಸಮಯದಲ್ಲಿ ಘಟನೆ ನಡೆದಿತ್ತು, ಕೆಲ ಸ್ಥಳೀಯರು ಹೇಳುವ ಪ್ರಕಾರ ಆ ನಾಲ್ವರು ಘಟನೆ ವೇಳೆ ಪಾನಮತ್ತರಾಗಿದ್ದರು. ಆದರೆ ಪೊಲೀಸರು ಅವರನ್ನು ಬಂಧಿಸಲಿಲ್ಲ,ನನ್ನನ್ನು ಬಂಧಿಸಿದ್ದಾರೆ ಎಂದು ರೂಪಾ ಗಂಗೂಲಿ ಆರೋಪಿಸಿದ್ದಾರೆ. 

Mahabharata: ಈಗ್ಲೂ ಸರ್ಕಾರಕ್ಕೆ ತೆರಿಗೆ ಕಟ್ತಿದ್ದಾನೆ ಮಹಾಭಾರತದ ದುರ್ಯೋದನ..!

ಇಂದು ಮುಂಜಾನೆ ಅವರನ್ನು ರೂಪಾ ಗಂಗೂಲಿ ಅವರನ್ನು ಬಂಧಿಸಿದ ಪೊಲೀಸರು ಲಾಲ್‌ಬಜಾರ್‌ನಲ್ಲಿರುವ ಪೊಲೀಸ್ ಮುಖ್ಯ ಕಚೇರಿಗೆ ಕರೆದೊಯ್ದರು. ನಂತರ ಅವರನ್ನು ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ. 

 

Latest Videos
Follow Us:
Download App:
  • android
  • ios