ನವದೆಹಲಿ[ಫೆ.11]: ಮಂಗಳವಾರ ಬಿಜೆಪಿ ಸಂಸದರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಪಕ್ಷವು ವಿಪ್‌ (ಸಚೇತಕಾಜ್ಞೆ) ಜಾರಿ ಮಾಡಿದೆ.

‘ಮಹತ್ವದ ಮಸೂದೆಗಳ ಅಂಗೀಕಾರ ನಡೆಯಲಿದ್ದು, ಕಡ್ಡಾಯವಾಗಿ ಹಾಜರಿರಬೇಕು’ ಎಂದು 3 ಸಾಲಿನ ವಿಪ್‌ನಲ್ಲಿ ತಿಳಿಸಲಾಗಿದೆ.

ರಾಮಮಂದಿರಕ್ಕೆ ಭರ್ಜರಿ 10 ಕೋಟಿ ರು. ದೇಣಿಗೆ!

‘ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಬಳಿಕ ಬಜೆಟ್‌ ಅಂಗೀಕಾರ ಮಾಡಲಾಗುತ್ತದೆ. ಹೀಗಾಗಿ ವಿಪ್‌ ಜಾರಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

ಸಂಸತ್ತಿನ ಬಜೆಟ್‌ ಅಧಿವೇಶನದ ಮೊದಲ ಭಾಗ ಮಂಗಳವಾರ ಮುಗಿಯಲಿದೆ. ಮುಂದಿನ ಭಾಗವು ಮಾರ್ಚ್ 2ರಿಂದ ಏಪ್ರಿಲ್‌ 3ರವರೆಗೆ ನಡೆಯಲಿದೆ.