ಉಭಯ ಸದನದಲ್ಲಿ ಕಡ್ಡಾಯ ಹಾಜರಾತಿಗೆ ವಿಪ್ ಜಾರಿಗೊಳಿಸಿದ ಬಿಜೆಪಿ, ನಾಳೆ ಮತ್ತೊಂದು ಸರ್ಪ್ರೈಸ್!

ಬಜೆಟ್ ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಶ್ವೇತಪತ್ರದ ಶಾಕ್ ನೀಡಿರುವ ಮೋದಿ ಸರ್ಕಾರ, ನಾಳೆ ಮತ್ತೊಂದು ಸರ್ಪ್ರೈಸ್ ನೀಡುವ ಸಾಧ್ಯತೆ ಇದೆ.

BJP issued whip to ruling party mps to be present in Both Lok sabha and Rajya sabha on Feb 10th ckm

ನವದೆಹಲಿ(ಫೆ.09) ಬಜೆಟ್ ಅಧಿವೇಶನ ಫೆ.9ಕ್ಕೆ ಅಂತ್ಯವಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಒಂದು ದಿನ ವಿಸ್ತರಣೆ ಮಾಡಿದೆ. ಈಗಾಗಲೇ ಬಜೆಟ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಹಾಗೂ ವಿಪಕ್ಷಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರೆ, ಇತ್ತ ಕೇಂದ್ರ ಹಣಕಾಸು ಸಚಿವೆ ಯುಪಿಎ ಸರ್ಕಾರದಲ್ಲಿ ಆಗಿರುವ ಆರ್ಥಿಕ ದುರಪಯೋಗದ ಶ್ವೇತಪತ್ರ ಮಂಡಿಸಿದ್ದಾರೆ. ಇದರ ನಡುವೆ ಕೊನೆಯ ಬಜೆಟ್ ಅಧಿವೇಶನದಲ್ಲಿ ಮತ್ತೊಂದು ಸರ್ಪ್ರೈಸ್ ನೀಡುವ ಸಾಧ್ಯತೆ ಇದೆ. ಕಾರಣ ಈಗಾಗಲೇ ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ಉಭಯ ಸದನದಲ್ಲಿ ಕಡ್ಡಾಯ ಹಾಜರಿರುವಂತೆ ವಿಪ್ ಜಾರಿಗೊಳಿಸಿದೆ.

ಬಜೆಟ್ ಅಧಿವೇಶನದ ಕೊನೆಯ ದಿನ(ಫೆ.10) ಕೆಲ ಪ್ರಮುಖ ಶಾಸಕಾಂಗ ವ್ಯವಹಾರಗಳ ಕುರಿತು ಸದನದಲ್ಲಿ ಚರ್ಚೆ ನಡೆಸಲಾಗುತ್ತದೆ. ಹೀಗಾಗಿ ಎಲ್ಲರು ಕಡ್ಡಾವಾಗಿ ಹಾಜರಾತಿ ಇರಬೇಕು ಎಂದು ಬಿಜೆಪಿ ಮುಖ್ಯ ಸಚೇತಕ ಲಕ್ಷ್ಮೀಕಾಂತ್ ಬಾಜ್‌ಪೇಯ್ ವಿಪ್ ಹೊರಡಿಸಿದ್ದಾರೆ.  ಲೋಕಸಭಾ ಚುನಾವಣೆ ಅಖಾಡಕ್ಕಿಳಿಯುವ ಮೊದಲು ನಡೆಯುತ್ತಿರುವ ಕೊನೆಯ ಅಧಿವೇಶನ ಇದಾಗಿದೆ. ಹೀಗಾಗಿ ಪ್ರಧಾನಿ ಮೋದಿ ಸರ್ಕಾರ ಕೆಲ ಅಚ್ಚರಿ ನೀಡುವ ಸಾಧ್ಯತೆ ಎಂದು ವಿಶ್ಲೇಷಿಸಲಾಗುತ್ತಿದೆ.

3ನೇ ಅವಧಿ ದೂರವಿಲ್ಲ, ರಾಜ್ಯಸಭೆಯಲ್ಲಿ ಮೋದಿ 3.O ಸರ್ಕಾರದ ವಿಷನ್ ಮುಂದಿಟ್ಟ ಪ್ರಧಾನಿ!

ಸದನದಲ್ಲಿ ಕೆಲ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಉಭಯ ಸದನದಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಹೀಗಾಗಿ ಬಿಜೆಪಿಯ ಲೋಕಸಭಾ ಹಾಗೂ ರಾಜ್ಯಸಭೆಯ ಎಲ್ಲಾ ಸದಸ್ಯರು ಎರಡೂ ಸದನದಲ್ಲಿ ಹಾಜರರಿಬೇಕು. ಸಂಪೂರ್ಣ ದಿನ ಸದನದಲ್ಲಿ ಹಾಜರಿದ್ದು, ಸರ್ಕಾರದ ನಿರ್ಧಾರವನ್ನು ಬೆಂಬಲಿಸಲು ಈ ಮೂಲಕ ಕೋರಲಾಗಿದೆ ಎಂದು ಲಕ್ಷ್ಮೀಕಾಂತ್ ಬಾಜ್‌ಪೇಯ್ ವಿಪ್ ಹೊರಡಿಸಿದ್ದಾರೆ.

 

 

ಕೇಂದ್ರ ಸರ್ಕಾರ ಸದನದಲ್ಲಿ ಮಂಡಿಸಿರುವ ಶ್ವೇತಪತ್ರ ಕೋಲಾಹಲ ಸೃಷ್ಟಿಸಿದೆ. ಹಿಂದಿನ ಮನಮೋಹನ ಸಿಂಗ್‌ ಅವಧಿಯ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 10 ವರ್ಷಗಳ ಅವಧಿಯಲ್ಲಿ ದೇಶವನ್ನು ಎಲ್ಲಾ ರಂಗದಲ್ಲೂ ಅಧಃಪತನದತ್ತ ಕೊಂಡೊಯ್ದಿದೆ ಎಂದು ಎನ್‌ಡಿಎ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಿದೆ. ‘2004ರಲ್ಲಿ ಎನ್‌ಡಿಎ ಸರ್ಕಾರದ ಆಡಳಿತ ಅಂತ್ಯಗೊಂಡು ಯುಪಿಎ ಸರ್ಕಾರಕ್ಕೆ ಆಡಳಿತಕ್ಕೆ ಬಂದಾಗ ಆರೋಗ್ಯಕರ ಆರ್ಥಿಕತೆಯನ್ನು ದೇಶ ಹೊಂದಿತ್ತು. ಆದರೆ 2004ರಿಂದ 2014ರವರೆಗಿನ 10 ವರ್ಷಗಳಲ್ಲಿ ಯುಪಿಎ ಸರ್ಕಾರ ಈ ಆರ್ಥಿಕತೆಯನ್ನು ಹಾಳುಮಾಡಿತು ಎಂದು ದಾಖಳೆ ಸಮೇತ ಶ್ವೇತಪತ್ರದಲ್ಲಿ ಗಂಭೀರ ಆರೋಪ ಮಾಡಿದೆ.

ನನ್ನ ದೇಶ ಕೇವಲ ದೆಹಲಿಯಲ್ಲ, ಬೆಂಗಳೂರು ಕೂಡ ನನ್ನ ದೇಶ; ವಿಪಕ್ಷಗಳಿಗೆ ಚಾಟಿ ಬಿಸಿದ ಪ್ರಧಾನಿ ಮೋದಿ !

ಫೆ.27ರಂದು ರಾಜ್ಯಸಭಾ ಚುನಾವಣೆ
ರಾಜ್ಯಸಭೆಯಲ್ಲಿ ತೆರವಾಗಿರುವ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ಫೆಬ್ರವರಿ 15 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಫೆಬ್ರವರಿ27ರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಮತ ಏಣಿಕೆ ನಡೆಯಲಿದೆ. ಈ ಎಲ್ಲಾ ಕಾರಣಗಳಿಂದ ನಾಳೆ
 

Latest Videos
Follow Us:
Download App:
  • android
  • ios