ಕೋಲ್ಕತ್ತಾ(ಫೆ.01): ಪ್ರಧಾನಿ ನರೇಂದ್ರ ಮೋದಿ ಅವರು ‘ಜನಕಲ್ಯಾಣ’ದಲ್ಲಿ ನಿರತರಾಗಿದ್ದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಬಂಧುವಿನ ಕಲ್ಯಾಣದಲ್ಲಿ ನಿರತರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ.

ಭಾನುವಾರ ಹೌರಾ ಜಿಲ್ಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಚುನಾವಣಾ ರಾರ‍ಯಲಿಯಲ್ಲಿ ಮಾತನಾಡಿದ ಶಾ, ‘ತೃಣಮೂಲ ಕಾಂಗ್ರೆಸ್‌ ಅಜೆಂಡಾ ಎಂದರೆ ಅವರ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿಯನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವುದು’ ಎಂದು ವ್ಯಂಗ್ಯವಾಡಿದರು.

‘ಈ ಮೊದಲು ಮಾ, ಮಾಟಿ, ಮಾನುಷ್‌ (ಮಾತೆ, ಭೂಮಿ, ಜನ) ಎನ್ನುತ್ತಿದ್ದವರು ಈಗ ‘ಸರ್ವಾಧಿಕಾರ, ಸುಲಿಗೆ ಹಾಗೂ ಓಲೈಕೆ’ ಎನ್ನುತ್ತಿದ್ದಾರೆ’ ಎಂದೂ ಮಮತಾರನ್ನು ಟೀಕಿಸಿದರು.

ಭಾನುವಾರವಷ್ಟೇ ಬಿಜೆಪಿ ಸೇರಿದ ಟಿಎಂಸಿ ಮಾಜಿ ಮುಖಂಡ ರಾಜೀಬ್‌ ಬ್ಯಾನರ್ಜಿ ಹಾಗೂ ಇತರರು ರಾರ‍ಯಲಿಯಲ್ಲಿ ಹಾಜರಿದ್ದರು.