ಬಿಜೆಪಿ ಅಭ್ಯರ್ಥಿಗಳ 8ನೇ ಪಟ್ಟಿ ಪ್ರಕಟಗೊಂಡಿದೆ. ಪ್ರಮುಖವಾಗಿ ನಿವೃತ್ತ ರಾಯಭಾರ ಅಧಿಕಾರಿ ತರಣಜಿತ್‌ಗೆ ಟಿಕೆಟ್‌ಗೆ ನೀಡಲಾಗಿದೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪತ್ನಿಗೆ ಟಿಕೆಟ್ ನೀಡಲಾಗಿದೆ. ಇದೇ ವೇಳೆ ಹಾಲಿ ಸಂಸದ, ನಟ ಸನ್ನಿ ಡಿಯೋಲ್‌ಗೆ ಟಿಕೆಟ್ ನಿರಾಕರಿಸಲಾಗಿದೆ. 

ನವದೆಹಲಿ(ಮಾ.30) ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 8ನೇ ಪಟ್ಟಿ ಪ್ರಕಟಗೊಂಡಿದೆ. ಪಂಜಾಬ್, ಒಡಿಶಾ ಹಾಗೂ ಪಶ್ಚಿಮ ಬಂಗಾಳದ 11 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ಪ್ರಮುಖವಾಗಿ ಪಂಜಾಬ್ ಹಲವು ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿದೆ. ಅಮೆರಿಕದಲ್ಲಿ ಭಾರತ ರಾಯಭಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ತರನ್ಜಿತ್ ಸಿಂಗ್‌ಗೆ ಅಮೃತಸರದಿಂದ ಟಿಕೆಟ್ ನೀಡಲಾಗಿದೆ. ಇನ್ನು ಗುರುದಾಸ್‌ಪುರ ಕ್ಷೇತ್ರದಿಂದ ಸಂಸದನಾಗಿರುವ ನಟ ಸನ್ನಿ ಡಿಯೋಲ್‌ಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಈ ಕ್ಷೇತ್ರದಿಂದ ದಿನೇಶ್ ಸಿಂಗ್ ಬಾಬುಗೆ ಟಿಕೆಟ್ ನೀಡಲಾಗಿದೆ.

ಇದೇ ಮೊದಲ ಬಾರಿಗೆ ತರನ್ಜಿತ್ ಸಿಂಗ್ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಮಾಜಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪತ್ನಿ ಪ್ರಣೀತ್ ಕೌರ್‌ಗೆ ಪಟಿಯಾಲದಿಂದ ಬಿಜೆಪಿ ಟಿಕೆಟ್ ನೀಡಿದೆ. ಇತ್ತ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರವನೀತ್ ಸಿಂಗ್ ಬಿಟ್ಟುಗೆ ಲುಧಿಯಾನದಿಂದ ಬಿಜೆಪಿ ಟಿಕೆಟ್ ನೀಡಿದೆ. ಸುಶೀಲ್ ಕುಮಾರ್ ರಿಂಗ್ ಇತ್ತೀಚೆಗಷ್ಟೆ ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಇದೀಗ ಸುಶೀಲ್ ಕುಮಾರ್ ರಿಂಕುಗೆ ಜಲಂಧರ್‌ನಿಂದ ಟಿಕೆಟ್ ನೀಡಲಾಗಿದೆ. 

ರಾಜಸ್ಥಾನ, ಜಾರ್ಖಂಡ್ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ!

ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆಯಾಗಿದೆ. ಒಡಿಶಾ ಜಾಜ್‌ಪುರ್ ಎಸ್‌ಸಿ ಮೀಲು ಕ್ಷೇತ್ರಕ್ಕೆ ರಬೀಂದ್ರ ನಾರಾಯಣ ಬೆಹೆರಾಗೆ ಟಿಕೆಟ್ ನೀಡಲಾಗಿದೆ. ಕಂಧಮಾಲ್ ಕ್ಷೇತ್ರದಿಂದ ಸುಕಾಂತ್ ಕುಮಾರ್ ಪಾಣಿಗ್ರಹಿ ಹಾಗೂ ಕಟಕ್ ಕ್ಷೇತ್ರದಿಂದ ಭಾರ್ತ್ರುಹಾರಿ ಮಹತಾಬ್‌ಗೆ ಟಿಕೆಟ್ ನೀಡಲಾಗಿದೆ. ಇನ್ನು ಪಶ್ಚಿಮ ಬಂಗಾಳದ ಝಾರಗ್ರಾಮ್ ಎಸ್‌ಟಿ ಮೀಸಲು ಕ್ಷೇತ್ರದಿಂದ ಪ್ರನತ್ ಟುಡುಗೆ ಟಿಕೆಟ್ ನೀಡಲಾಗಿದೆ. ಬೀರ್ಮುಬ್‌ನಿಂದ ದೇಬಶೀಶ್ ಧಾರ್‌ಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಬಿಜೆಪಿ 411 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ.

ಲೋಕಸಭಾ ಚುನಾವಣೆ ಏಪ್ರಿಲ್ 19ರಿಂದ ಆರಂಭಗೊಳ್ಳಲಿದೆ. 7 ಹಂತಗಳಲ್ಲಿ ನಡೆಯಲಿರುವ ಮತದಾನ ಜೂನ್ 1ಕ್ಕೆ ಅಂತ್ಯವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಎಪ್ರಿಲ್ 26 ಹಾಗೂ ಮಾರ್ಚ್ 7ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಘೋಷಣೆಯಾಗಲಿದೆ. 


ಕುರಾನ್‌, ಹದೀಸ್‌ ಓದಿದ್ದೇನೆ, ತುಷ್ಟೀಕರಣಕ್ಕಾಗಿ ಟೋಪಿ ಧರಿಸಲಾರೆ: ಅಣ್ಣಾಮಲೈ