Asianet Suvarna News Asianet Suvarna News

ರಾಜಸ್ಥಾನ, ಜಾರ್ಖಂಡ್ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ!

ರಾಜಸ್ಥಾನ ಹಾಗೂ ಜಾರ್ಖಂಡ್ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಎರಡು ರಾಜ್ಯದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ.
 

BJP Announces candidates for upcoming  Jharkhand and Rajasthan assembly by elections 2024 ckm
Author
First Published Mar 29, 2024, 7:02 PM IST

ನವದೆಹಲಿ(ಮಾ.29) ಲೋಕಸಭಾ ಚುನಾವಣೆ ತಯಾರಿ ಒಂದಡೆಯಾದರೆ, ಇದರ ನಡುವೆ ಉಪಚುನಾವಣೆ ತಯಾರಿಗಳು ನಡೆಯುತ್ತಿದೆ. ಇದೀಗ ರಾಜಸ್ಥಾನ ಹಾಗೂ ಜಾರ್ಖಂಡ್ ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಟ್ಟಿ ಘೋಷಿಸಿದೆ. ಜಾರ್ಖಂಡ್‌ನ ಗಂಡೆ ಕ್ಷೇತ್ರ ಹಾಗೂ ರಾಜಸ್ಥಾನದ ಬಗಿದೋರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿದೆ. ಗಂಡೆ ಕ್ಷೇತ್ರಕ್ಕೆ ದಿಲೀಪ್ ಕುಮಾರ್ ವರ್ಮಾಗೆ ಟಿಕೆಟ್ ಘೋಷಿಸಲಾಗಿದೆ. ಇನ್ನು ಬಗಿದೋರ ಕ್ಷೇತ್ರಕ್ಕೆ ಸುಭಾಷ್ ತಂಬೋಲಿಯಾಗೆ ಟಿಕೆಟ್ ನೀಡಲಾಗಿದೆ. ಬಗಿದೋರ ಎಸ್‌ಟಿ ಮೀಸಲು ಕ್ಷೇತ್ರವಾಗಿದೆ.

ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಉಪ ಚುನಾವಣೆಗಳು ನಡೆಯಲಿದೆ. ಇತ್ತೀಚೆಗಷ್ಟೇ ಬಿಜೆಪಿ ಲೋಕಸಭಾ ಚುನಾವಣೆಯ 6ನೇ ಪಟ್ಟಿ ಬಿಡುಗಡೆ ಮಾಡಿತ್ತು. 6ನೇ ಪಟ್ಟಿಯಲ್ಲಿ ರಾಜಸ್ಥಾನ ಹಾಗೂ ಮಣಿಪುರ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿತ್ತು. ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾಜ್‌ಕುಮಾರ್‌ ರಂಜನ್‌ ಸಿಂಗ್‌ ಅವರೂ ಸೇರಿದಂತೆ ಮೂರು ಹಾಲಿ ಸಂಸದರನ್ನು ಕೈಬಿಟ್ಟಿತ್ತು.

Lok Sabha Election 2024: ದಾಖಲೆ ಮತಗಳಿಂದ ಗೆದ್ದರೂ ಕರಾವಳಿ ಮೂಲದ ಸಂಸದರಿಗೆ ಬಿಜೆಪಿ ಟಿಕೆಟ್‌ ಇಲ್ಲ..!

ಇನ್ನು ಮಣಿಪುರ ಕ್ಷೇತ್ರದಲ್ಲಿ ರಾಜ್‌ಕುಮಾರ್‌ ಬದಲಿಗೆ ರಾಜ್ಯದಲ್ಲಿ ಶಿಕ್ಷಣ ಮಂತ್ರಿಯಾಗಿರುವ ಥೌನೋಜಂ ವಸಂತ ಕುಮಾರ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ. ಉಳಿದಂತೆ ರಾಜಸ್ಥಾನದ ಕರೌಲಿ ಧೋಲ್‌ಪುರ್‌ ಕ್ಷೇತ್ರದಲ್ಲಿ ಮನೋಜ್‌ ರಾಜೋರಿಯಾ ಬದಲಿಗೆ ಇಂದುದೇವಿ ಅವರಿಗೂ ದೌಸಾ ಕ್ಷೇತ್ರದಲ್ಲಿ ಜಸ್ಕೌರ್‌ ಮೀನಾ ಬದಲಾಗಿ ಕನ್ಹಯ್ಯಾ ಲಾಲ್‌ ಮೀನಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದರೊಂದಿಗೆ ಬಿಜೆಪಿಯಲ್ಲಿ ಒಟ್ಟು ಆರು ಪಟ್ಟಿಗಳಲ್ಲಿ 405 ಮಂದಿಗೆ ಟಿಕೆಟ್‌ ಘೋಷಿಸಿದಂತಾಗಿದೆ.

ಕರ್ನಾಟಕದ 25 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಈ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಸಿ.ಎನ್‌.ಮಂಜುನಾಥ್‌, ಮೈಸೂರಿನಿಂದ ಯದುವೀರ್ ಒಡೆಯರ್‌, ಕೊಪ್ಪಳದಿಂದ ಡಾ.ಕೆ.ಬಸವರಾಜ, ದಕ್ಷಿಣ ಕನ್ನಡದಿಂದ ಕ್ಯಾ.ಬ್ರಿಜೇಶ್ ಚೌಟ ಹಾಗೂ ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ್ ಅವರು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2024: ಕರ್ನಾಟಕದ ಬಿಜೆಪಿ- ಕಾಂಗ್ರೆಸ್- ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ...

ಅಭ್ಯರ್ಥಿಗಳ ಪೈಕಿ 11 ಮಂದಿ ಹಾಲಿ ಸಂಸದರಿದ್ದಾರೆ. ಚಿಕ್ಕೋಡಿಯ ಅಣ್ಣಾ ಸಾಹೇಬ್‌ ಜೊಲ್ಲೆ, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್, ವಿಜಯಪುರದ ರಮೇಶ್ ಜಿಗಜಿಣಗಿ, ಕಲಬುರಗಿಯ ಡಾ.ಉಮೇಶ್ ಜಾಧವ್‌, ಬೀದರ್‌ನ ಭಗವಂತ ಖೂಬಾ, ಧಾರವಾಡದ ಪ್ರಹ್ಲಾದ್ ಜೋಶಿ, ಶಿವಮೊಗ್ಗದ ಬಿ.ವೈ.ರಾಘವೇಂದ್ರ, ಬೆಂಗಳೂರು ಉತ್ತರದ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್‌, ಬೆಂಗಳೂರು ದಕ್ಷಿಣದ ತೇಜಸ್ವಿ ಸೂರ್ಯ, ರಾಯಚೂರಿನ ರಾಜಾ ಅಮರೇಶ್ ನಾಯಕ್‌.

Follow Us:
Download App:
  • android
  • ios