ಕ್ರಿಸ್ಮಸ್, ನ್ಯೂ ಇಯರ್‌ಗೆ ಶುರುವಾಗಿದೆ ಬೋಲ್ಡ್ ಟ್ರೆಂಡ್; ಆದ್ರೆ ಇದು ನೀವು ಯೋಚಿಸುತ್ತಿರೋದು ಮಾತ್ರ ಅಲ್ಲ!
ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯಾಣಕ್ಕೆ ಸಂಬಂಧಿಸಿದಂತೆ ಟಿಕ್‌ಟಾಕ್‌ನಲ್ಲಿ ವಿಷಯವೊಂದು ಟ್ರೆಂಡ್ ವೈರಲ್ ಆಗುತ್ತಿದೆ. ಏನಿದು ಟ್ರೆಂಡ್ ಎಂಬುದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.
ನವದೆಹಲಿ: 2024ಕ್ಕೆ ಗುಡ್‌ಬೈ ಹೇಳಿ 2025ನೇ ವರ್ಷವನ್ನ ಬರಮಾಡಿಕೊಳ್ಳಲು ಇಡೀ ಜಗತ್ತು ಕಾಯುತ್ತಿದೆ. ಎಷ್ಟೋ ಜನರು ಹೊಸ ವರ್ಷದ ಆಚರಣೆ ಹೇಗಿರಬೇಕು ಎಂಬುದರ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿಯೂ ಹೊಸ ವರ್ಷಾಚರಣೆಗೆ ಸಂಬಂಧಿಸಿದ ವಿಡಿಯೋ, ರೀಲ್ಸ್‌ಗಳು ವೈರಲ್ ಆಗುತ್ತಿವೆ. ಕ್ರಿಸ್ಮಸ್ ವರ್ಷದ ಕೊನೆಯ ಹಬ್ಬವಾಗಿದ್ದು, ಇದಾದ 5ನೇ ದಿನಕ್ಕೆ ನ್ಯೂ ಇಯರ್ ಸಂಭ್ರಮ ಬರುತ್ತದೆ. ವಿಶೇಷವಾಗಿ ಕಾರ್ಪೋರೇಟ್ ಉದ್ಯೋಗಿಗಳು ಲಾಂಗ್ ಲೀವ್ ಹಾಕಿ ಪ್ರವಾಸಕ್ಕೆ ತೆರಳುತ್ತಾರೆ. ಇದೀಗ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರವಾಸಕ್ಕೆ ಸಂಬಂಧಿಸಿದಂತೆ ಟಿಕ್‌ಟಾಕ್‌ನಲ್ಲಿ ಬೋಲ್ಡ್ ಟ್ರೆಂಡ್ ಕ್ರಿಯೇಟ್ ಆಗಿದೆ. ಬೋಲ್ಡ್ ಅಂದಾಕ್ಷಣ ಇದು ನೀವು ಅಂದುಕೊಂಡಂತೆ ಖಂಡಿತ ಅಲ್ಲ.
ಟಿಕ್‌ಟಾಕ್‌ನಲ್ಲಿ "ಫ್ಲೈಯಿಂಗ್ ನೇಕಡ್" ಎಂಬ ವಿಷಯ ಟ್ರೆಂಡ್ ಆಗುತ್ತಿದೆ. ವಿಮಾನ ಪ್ರಯಾಣಿಕರಿಗಾಗಿ ಈ ಟ್ರೆಂಡ್ ರಚನೆಯಾಗಿದೆ. ವಿಮಾನ ಪ್ರಯಾಣ ಅಂದ್ರೆ ಸುಲಭದ ಮಾತಲ್ಲ. ಹಣದ ಜೊತೆ ತಾಳ್ಮೆ ಬೇಕಾಗುತ್ತದೆ. ಪ್ರಯಾಣಕ್ಕೂ ಮುನ್ನ ಗಂಟೆಗೂ ಮೊದಲೇ ವಿಮಾನನಿಲ್ದಾಣಕ್ಕೆ ಬರಬೇಕು. ಭದ್ರತಾ ತಪಾಸಣೆ, ಲಗೇಜ್ ಕೌಂಟರ್‌ಗೆ ತೆರಳೋದು, ಹೆಚ್ಚುವರಿ ಬ್ಯಾಗ್‌ಗೆ ಹಣ ಪಾವತಿಸುವುದು, ಸರತಿ ಸಾಲಿನಲ್ಲಿ ನಿಂತು ತಪಾಸಣೆಗೆ ಒಳಗಾಗಾಗೋದು ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರವೇ ವಿಮಾನಯಾನ ಮಾಡಬಹುದು.
ವಿಮಾನದಿಂದ ಇಳಿದ ಬಳಿಕ ಬ್ಯಾಗ್ ಪಡೆಯಲು ವೇಟ್ ಮಾಡೋದು. ಒಂದು ವೇಳೆ ಬ್ಯಾಗ್ ಡ್ಯಾಮೇಜ್ ಆಗಿದ್ರೆ ಆ ಪ್ರಯಾಣಿಕರ ಸ್ಥಿತಿಯಂತೂ ಹೇಳಲಾಗದು. ವಿಮಾನಯಾನ ಮಾಡುವ ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ಮತ್ತು ನಂತರ ಮಾಡಬೇಕಾದ ಕೆಲಸಗಳು. ಇದನ್ನು ಗಮನಿಸಿಯೇ ಟಿಕ್‌ಟಾಕ್‌ನಲ್ಲಿ ಈ ವಿಷಯ ಟ್ರೆಂಡ್ ಆಗುತ್ತಿದೆ.
ಇದನ್ನೂ ಓದಿ: 6 ಸಾವಿರದ ಈ ಚಡ್ಡಿ ಮೇಲೆ ಹೆಚ್ಚಾದ ವ್ಯಾಮೋಹ; ಖರೀದಿಗೆ ಸರತಿ ಸಾಲಿನಲ್ಲಿ ನಿಂತ ಜನರು!
ಏನಿದು ಫ್ಲೈಯಿಂಗ್ ನೇಕಡ್?
ಇದರರ್ಥ ಬೆತ್ತಲಾಗಿ ಹಾರಾಟ ಮಾಡೋದು ಅಂತಲ್ಲ. ಒಂದು ಚಿಕ್ಕ ಬ್ಯಾಗ್‌ನಲ್ಲಿ ಪ್ರವಾಸಕ್ಕೆ ಬೇಕಾಗುವಂತಹ ಬಟ್ಟೆ, ವಸ್ತುಗಳ ಜೊತೆ ಪ್ರಯಾಣಿಸೋದು. ಕಡಿಮೆ ಲಗೇಜ್ ಜೊತೆಗಿನ ಪ್ರಯಾಣ ಆರಾಮದಾಯಕವಾಗಿರುತ್ತದೆ. ಈ ರೀತಿ ಕಡಿಮೆ ವಸ್ತು ಅಥವಾ ಬಟ್ಟೆಯೊಂದಿಗೆ ಪ್ರಯಾಣ ಮಾಡೋದು ಈ ಟ್ರೆಂಡ್. ಹೆಚ್ಚುವರಿ ಲಗೇಜ್‌ಗೆ ಪಾವತಿಸುವ ಹಣದಿಂದಲೇ ಮರುಬಳಕೆಯಂತಹ ವಸ್ತುಗಳನ್ನು ಖರೀದಿಸಬಹುದು. ಇದರಿಂದ ಲಗೇಜ್ ಎಂಬ ಒತ್ತಡ ಕಡಿಮೆಯಾಗುತ್ತದೆ.
ಕಡಿಮೆ ಲಗೇಜ್ ಇದ್ರೆ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಬಹುದು. ಹಾಗೆ ಅಷ್ಟೆ ಬೇಗ ಏರ್‌ಪೋರ್ಟ್‌ನಿಂದ ಹೊರ ಬರಬಹುದು. ಈ ಟ್ರೆಂಡ್ ಜರ್ನಿ ಪ್ರಯಾಣಿಕರ ಸಮಯವನ್ನು ಉಳಿತಾಯ ಮಾಡುತ್ತದೆ. ನಿಮ್ಮ ಪ್ರಯಾಣವನ್ನು ಸರಳೀಕರಿಸಲು ಈ ಟ್ರೆಂಡ್ ಸಹಾಯ ಮಾಡುತ್ತದೆ. ಹಾಗಾಗಿ ಕ್ರಿಸ್ಮಸ್ ಮತ್ತು ಹೊಸ
ವರ್ಷದ ಪ್ರವಾಸಕ್ಕೆ ಈ ಟ್ರೆಂಡ್ ರೀತಿಯಲ್ಲಿ ಪ್ರಯಾಣಿಸಿ ಎಂಬ ರೀಲ್ಸ್ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಸುಂದರ ಮಹಿಳೆಯನ್ನು ಕಂಡು ದಂಡ ಹಾಕೋದು ಮರೆತ ಪೊಲೀಸ್: ವಿಡಿಯೋ ವೈರಲ್