ಕಾನ್ಪುರ(ಜು.27)  ಮಾಸ್ಕ್ ಹಾಕದ ಮೇಕೆಯನ್ನು ಬಂಧಿಸಲಾಗಿದೆ! ಬೆಕೋನ್ ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಮೇಕೆಯನ್ನು ಜೀಪಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ವಿಷಯ ತಿಳಿದ ಮೇಕೆಯ ಮಾಲಿಕ ಸೈಫುದ್ದೀನ್ ಬೇಗ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಮನವಿ ಮಾಡಿಕೊಂಡ ನಂತರ ರಿಲೀಸ್ ಮಾಡಲಾಗಿದೆ.

ಮೇಕೆ ಮಾಲೀಕ ಮತ್ತು ಪೊಲೀಸರ ನಡುವೆ ಮಾತುಕತೆ ನಡೆದಿದೆ. ಇನ್ನು ಮುಂದೆ ಮೇಕೆ ಮಾಸ್ಕ್ ಇಲ್ಲದೆ ರಸ್ತೆಯಲ್ಲಿ ಕಾಣಿಸಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.

ಜೂಜಾಟದ ಕಿಂಗ್ ಪಿನ್ ಕತ್ತೆ ಬಂಧನ!

ಕೊರೋನಾ ಕಾರಣಕ್ಕೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ. ಆದರೆ ಪೊಲೀಸರು  ಪ್ರಾಣಿ ಮೇಲೆ ಯಾಕೆ ಕಾನೂನು ಪ್ರಯೋಗ ಮಾಡಿದರೋ ಗೊತ್ತಿಲ್ಲ.

ಕೆಲವರು ತಮ್ಮ ಸಾಕು ನಾಯಿಗೆ ಮಾಸ್ಕ್ ಹಾಕುತ್ತಿದ್ದಾರೆ, ಯಾಕೆ ಮೇಕೆಗೂ ಹಾಕಬಾರದು ಎಂಬ ಪ್ರಶ್ನೆ ಪೊಲೀಸರ ತಲೆಯಲ್ಲಿ ಬಂತೋ ಗೊತ್ತಿಲ್ಲ. ನಂತರ ಪೊಲೀಸರು ಪ್ಲೇಟ್ ತಿರುವಿಹಾಕಿದ್ದು ಯುವಕನೊಬ್ಬ ಮಾಸ್ಕ್ ಧರಿಸದೇ ಮೇಕೆಯನ್ನು ಕರೆದೊಯ್ಯುತ್ತಿದ್ದ, ಪೊಲೀಸರನ್ನು ಕಂಡೊಡನೆಯೇ ಆತ ಮೇಕೆಯನ್ನು ಬಿಟ್ಟು ಪರಾರಿಯಾದ, ಹಾಗಾಗಿ ಕೈಗೆ ಸಿಕ್ಕ ಮೇಕೆ ಕರೆದುಕೊಂಡು ಬಂದೆವು ಎಂದಿದ್ದಾರೆ.