'ಬಿರಿಯಾನಿ ಮಸಾಲೆಯಲ್ಲಿ ಪುರುಷತ್ವ ಕುಂಠಿತವಾಗುವ ಅಂಶ' ಬಂಗಾಳದಲ್ಲಿ ಶಾಪ್‌ ಬಂದ್‌ ಮಾಡಿಸಿದ ಟಿಎಂಸಿ ನಾಯಕ!

ಬಿರಿಯಾನಿಯಲ್ಲಿ ಮಿಶ್ರಣ ಮಾಡಲಾಗುವ ಮಸಾಲೆಯಲ್ಲಿ, ಪುರುಷರ ಲೈಂಗಿಕ ಬಯಕೆ ಕುಂಠಿತವಾಗುವ ಅಂಶವಿದೆ ಎನ್ನುವ ಕಾರಣಕ್ಕೆ ಪಶ್ಚಿಮ ಬಂಗಾಳದ ಕೂಚ್‌ ಬೆಹರ್‌ನಲ್ಲಿ ಟಿಎಂಸಿ ನಾಯಕ ರಬೀಂದ್ರನಾಥ್‌ ಘೋಷ್‌ ಎರಡು ಬಿರಿಯಾನಿ ಅಂಗಡಿಗಳನ್ನು ಬಂದ್‌ ಮಾಡಿಸಿದ್ದಾರೆ.
 

Biryani spices reducing male sex drive TMC leader Rabindra Nath Ghosh forces shops to shut down in Bengal san

ಕೋಲ್ಕತ್ತಾ (ಅ. 24): ಬಿರಿಯಾನಿಗೂ ಪುರುಷರ ಲೈಂಗಿಕ ಬಯಕೆಗೂ ಏನು ಲಿಂಕ್‌ ಅಂತಾ ಕೇಳ್ಬೇಡಿ. ಲಿಂಕ್‌ ಇದೆ. ಬಿರಿಯಾನಿಯಲ್ಲಿ ಮಿಶ್ರಣ ಮಾಡುವ ಯಾವುದೇ ಒಂದು ಮಸಾಲೆ ಪದಾರ್ಥ, ಪುರುಷರಲ್ಲಿ ಲೈಂಗಿಕ  ಬಯಕೆ ಕಡಿಮೆ ಮಾಡುತ್ತದೆಯಂತೆ. ಅದೇ ಕಾರಣಕ್ಕಾಗಿ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷ ಪ್ರತಿಭಟನೆ ಆರಂಭಿಸಿದೆ. ಅದರಂತೆ ಕೂಚ್‌ ಬೆಹರ್‌ನಲ್ಲಿ ಟಿಎಂಸಿ ನಾಯಕ ರಬೀಂದ್ರನಾಥ್ ಘೋಷ್‌ ಎರಡು ಬಿರಿಯಾನಿ ಮಳಿಗೆಗಳು ಬಂದ್‌ ಮಾಡಿದ್ದಾರೆ. ಬಿರಿಯಾನಿ ಆಹಾರದಲ್ಲಿ ಮಿಶ್ರಣ ಮಾಡುವ ಮಸಾಲೆಗಳು ಪುರುಷತ್ವವನ್ನು ಕಡಿಮೆಗೊಳಿಸುತ್ತವೆ ಎಂದು ಆರೋಪ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಮಾಜಿ ಸಚಿವ ರವೀಂದ್ರ ನಾಥ್ ಘೋಷ್ ಈ ಕುರಿತಾಗಿ ಮಾತನಾಡಿದ್ದು, ಬಿರಿಯಾನಿ ತಯಾರಿಸಲು ಬಳಸುವ ಪದಾರ್ಥಗಳು ಮತ್ತು ಮಸಾಲೆಗಳು ಪುರುಷ ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಜನರಿಂದ ಆರೋಪಗಳು ಕೇಳಿಬಂದಿತ್ತು. ಆ ಕಾರಣಕ್ಕಾಗಿ ಈ ಮಳಿಗೆಗಳನ್ನು ಬಂದ್‌ ಮಾಡಿದ್ದೇವೆ ಎಂದಿದ್ದಾರೆ.

ಕಳೆದ ಕೆಲವೊಂದು ದಿನಗಳಿಂದ ಇಲ್ಲಿ ಸ್ಥಳೀಯ ಜನರು ಈ ಕುರಿತಾಗಿ ದೂರು ಹೇಳಯತ್ತಿದ್ದರು. ಬಿರಿಯಾನಿಯಲ್ಲಿ ಯಾವ ರೀತಿಯ ಮಸಾಲೆ ಮಿಕ್ಸ್‌ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ, ಬಿರಿಯಾನಿ ತಿಂದ ಬಳಿಕ ಲೈಂಗಿಕ ಆಸಕ್ತಿಯೇ ಇಲ್ಲದಂತಾಗುತ್ತದೆ ಎಂದು ಹೇಳುತ್ತಿದ್ದರು ಎಂದು ಘೋಷ್‌ ಹೇಳಿದ್ದಾರೆ. ಕೂಚ್ ಬೆಹಾರ್ ಪುರಸಭೆಯ ಪ್ರಸ್ತುತ ಅಧ್ಯಕ್ಷರೂ (Trinamool Congress-run Cooch Behar municipality) ಆಗಿರುವ ರಬೀಂದ್ರನಾಥ್‌ ಘೋಷ್‌ (Rabindra Nath Ghosh) ಹೇಳುವ ಪ್ರಕಾರ,  ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ ಜನರು ಈ ಪ್ರದೇಶದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ ಮತ್ತು ಅಂಗಡಿಗಳು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು. ಎಲ್ಲಾ ದೂರುಗಳ ನಂತರ ನಾವು ಇಲ್ಲಿಗೆ ಬಂದು ನೋಡಿದಾಗ ಅಂಗಡಿಗಳಿಗೆ ಟ್ರೇಡ್ ಲೈಸೆನ್ಸ್ (trade license ) ಇಲ್ಲದಿರುವುದು ಕಂಡು ಬಂದಿದ್ದು, ಹೀಗಾಗಿ ಅಂಗಡಿಗಳನ್ನು ಮುಚ್ಚಲಾಗಿದೆ ಎಂದರು.

ಪುರುಷತ್ವ ಕುಂಠಿತವಾಗುವ ಬಗ್ಗೆ ಹಲವಾರು ಸ್ಥಳೀಯರಿಂದ ದೂರುಗಳಿದ್ದರೂ, ಬಿಹಾರದ ಮೂಲ ನಿವಾಸಿ ಪಪ್ಪು ಖಾನ್ ಎಂಬುವರ ಮಾಲೀಕತ್ವದ ಎರಡು ಮಳಿಗೆಗಳನ್ನು ಮುಚ್ಚಲು ಇದು ಮುಖ್ಯ ಕಾರಣವಲ್ಲ ಎಂದು ಘೋಷ್ ಸ್ಪಷ್ಟಪಡಿಸಿದ್ದಾರೆ. “ಪುರಸಭೆಯು (biryani with spices reducing male sex drive ) ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ತನ್ನದೇ ಆದ ಮಾರ್ಗವನ್ನು ಹೊಂದಿದೆ. ಆದರೆ ನಾನು ಅಂಗಡಿಗೆ ಹೋದಾಗ, ಅವರ ಬಳಿಕ ಟ್ರೇಡ್‌ ಲೈಸನ್ಸ್‌ ಕೇಳಿದೆ. ಅದು ಅವರಲ್ಲಿ ಇದ್ದಿರಲಿಲ್ಲ. ಇದರ ಆಧಾರದ ಮೇಲೆ ಅಂಗಡಿಗಳನ್ನು ಮುಚ್ಚಲಾಗಿದೆ' ಎಂದು ಹೇಳಿದ್ದಾರೆ.

ಈ ಎರಡು ಅಂಗಡಿಗಳು ಕೂಚ್ ಬೆಹಾರ್ ಪಟ್ಟಣದ ಭವಾನಿಗಂಜ್ ಮಾರುಕಟ್ಟೆ ಪ್ರದೇಶದ ಶನಿದೇವರ ದೇವಸ್ಥಾನದ ಪಕ್ಕದಲ್ಲಿವೆ ಎಂದು ತಿಳಿದುಬಂದಿದೆ. ಈ ಎರಡು ಅಂಗಡಿಗಳು ಪುರುಷರ ಲೈಂಗಿಕ ಬಯಕೆ ಕಡಿಮೆ ಮಾಡುವ ಮಸಾಲೆಗಳನ್ನು ಬಳಸುತ್ತಿವೆ ಎಂದು ಸ್ಥಳೀಯರು ಸಾಕಷ್ಟು ಬಾರಿ ದೂರು ನೀಡಿದ್ದರು. ಹೀಗಾಗಿ, ಭಾನುವಾರ ಸಂಜೆ ಘೋಷ್ ತಮ್ಮ ಅಧಿಕಾರಿಗಳೊಂದಿಗೆ ಅಂಗಡಿಗೆ ತೆರಳಿ ಈ ವಿಚಾರವಾಗಿ ಅಂಗಡಿಗಳ ಮಾಲೀಕರು ಮತ್ತು ಉದ್ಯೋಗಿಗಳನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲಿ, ಮಳಿಗೆಯ ಮಾಲೀಕರು, ಉದ್ಯೋಗಿಗಳು ಮತ್ತು ಘೋಷ್ ಮತ್ತು ಅವರ ಅಧಿಕಾರಿಗಳ ಜೊತೆ ಬಿಸಿ ಬಿಸಿ ಚರ್ಚೆ ನಡೆದಿದೆ. ನಂತರ, ಸಚಿವರು ಅವರ ಟ್ರೇಡ್ ಲೈಸೆನ್ಸ್ ಕೇಳಿದರು ಮತ್ತು ಮಾಲೀಕರು ಅವುಗಳನ್ನು ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷರು ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದರು.

ಬಿಹಾರ ಮತ್ತು ಉತ್ತರ ಪ್ರದೇಶದ ಜನರು ಈ ಪ್ರದೇಶದಲ್ಲಿ ಸರಿಯಾದ ವ್ಯಾಪಾರ ಮತ್ತು ಆಹಾರ ಪರವಾನಗಿ ಇಲ್ಲದೆ ಆಹಾರ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ದೂರುಗಳಿವೆ ಎಂದು ಅವರು ಹೇಳಿದರು. "ಅವರು ತಮ್ಮ ಉದ್ಯೋಗಿಗಳನ್ನು ತಮ್ಮ ರಾಜ್ಯಗಳಿಂದ ಕರೆತರುತ್ತಾರೆ. ಈ ಮಳಿಗೆಗಳಲ್ಲಿ ಕೆಲಸ ಮಾಡುವವರ ಮುಖಗಳು ಆಗಾಗ್ಗೆ ಬದಲಾಗುತ್ತಲೇ ಇರುತ್ತವೆ' ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios