Asianet Suvarna News Asianet Suvarna News

ಕೊರೋನಾ ಚಿಕಿತ್ಸೆಗೆ ಬೆಂಗಳೂರಿನ ಔಷಧ: ಕೇಂದ್ರದಿಂದಲೂ ಅನುಮತಿ!

ಕೊರೋನಾ ಚಿಕಿತ್ಸೆಗೆ ಬೆಂಗಳೂರಿನ ಔಷಧ| ಬಯೋಕಾನ್‌ನ ‘ಇಟೋಲಿಜಮ್ಯಾಬ್‌’ ಬಳಕೆ| ಕೇಂದ್ರ ಸರ್ಕಾರದಿಂದ ಅನುಮತಿ| ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಔಷಧ| ತುರ್ತು ಸ್ಥಿತಿಯಲ್ಲಿ ನಿಯಂತ್ರಿತ ರೀತಿಯಲ್ಲಿ ಬಳಕೆ

Biocon Drug Receives DCGI Nod For Use In Moderate To Severe Coronavirus Patients
Author
Bangalore, First Published Jul 12, 2020, 8:15 AM IST

ನವದೆಹಲಿ(jಜು.12): ಸಾಧಾರಣದಿಂದ ಗಂಭೀರ ಪ್ರಮಾಣದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕೊರೋನಾ ಸೋಂಕಿತರಿಗೆ ಬೆಂಗಳೂರಿನ ಬಯೋಕಾನ್‌ ಸಂಸ್ಥೆಯ ಚರ್ಮರೋಗ ಔಷಧ ‘ಇಟೋಲಿಜುಮ್ಯಾಬ್‌’ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆದರೆ ಈ ಔಷಧವನ್ನು ಅತ್ಯಂತ ತುರ್ತು ಸ್ಥಿತಿಯಲ್ಲಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬ ಷರತ್ತು ವಿಧಿಸಿದೆ.

"

ಸಕ್ರಿಯ ಕೇಸು ಹೆಚ್ಚಳದಲ್ಲಿ ದೇಶದಲ್ಲಿ ಕರ್ನಾಟಕವೇ ನಂ.1!

ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಈ ಔಷಧವನ್ನು ಸೈಟೋಕಿನ್‌ ಬಿಡುಗಡೆಯಿಂದಾಗಿ ಉಂಟಾಗುವ ತೀವ್ರ ಉಸಿರಾಟದ ತೊಂದರೆಗೆ ಬಳಸುವ ಕುರಿತು ಬಯೋಕಾನ್‌ ಕಂಪನಿ 2ನೇ ಹಂತದ ಕ್ಲಿನಿಕಲ್‌ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತ್ತು. ಪ್ರಯೋಗದ ವರದಿಯನ್ನು ಸಂಸ್ಥೆಯು ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿತ್ತು. ಪ್ರಾಧಿಕಾರವು ಇದನ್ನು ತಜ್ಞರ ಸಮಿತಿಗೆ ಪರಿಶೀಲನೆಗೆ ಒಳಪಡಿಸಿ, ಅನುಮೋದನೆ ಪಡೆದುಕೊಂಡಿದೆ. ನಂತರ ಕೋವಿಡ್‌ ಸೋಂಕಿತರಿಗೂ ಈ ಔಷಧ ಬಳಸಲು ಶುಕ್ರವಾರ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಕಳ್ಳರನ್ನು ಕಂಡರೇ ಪೊಲೀಸರಿಗೆ ಭಯ, ಆರೋಪಿಗಳಿಂದ ಬರುತ್ತಿದೆ ಕೊರೋನಾ!

ಬಯೋಕಾನ್‌ ಕಂಪನಿಯು 2013ರಿಂದಲೂ ಭಾರತದಲ್ಲಿ ಈ ಔಷಧವನ್ನು ಅಲ್ಜುಮ್ಯಾಬ್‌ ಹೆಸರಿನಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದನ್ನು ಕೊರೋನಾ ರೋಗಿಗಳ ಸಮ್ಮತಿಯ ಮೇರೆಗೆ, ಅಪಾಯ ನಿರ್ವಹಣಾ ಯೋಜನೆಗೆ ಒಳಪಟ್ಟಂತೆ, ಆಸ್ಪತ್ರೆಯ ವ್ಯವಸ್ಥೆಯ ಇರುವ ಕಡೆ ಬಳಕೆ ಮಾಡಲು ಇದೀಗ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

Follow Us:
Download App:
  • android
  • ios