ಪೋಷಕರು, ಹಿರಿಯ ನಾಗರಿಕರ ನಿಂದಿಸಿದರೆ ಜೈಲು ಶಿಕ್ಷೆ: ಮಸೂದೆ ಮಂಡನೆ!

ಪೋಷಕರು, ಹಿರಿಯ ನಾಗರಿಕರ ನಿಂದನೆಗೆ 6 ತಿಂಗಳು ಜೈಲು!| ಪೋಷಕರು, ಹಿರಿಯ ನಾಗರಿಕರ ಬೈದರೆ 6 ತಿಂಗಳು ಜೈಲು, 10,000 ದಂಡ| ಪೋಷಕರು, ಹಿರಿಯ ನಾಗರಿಕರ ರಕ್ಷಣೆಗೆ ಕೇಂದ್ರದ ಕಾನೂನು ಬಲ| ಹಿರಿಯರ ಸಮಸ್ಯೆ ಇತ್ಯರ್ಥಕ್ಕಾಗಿ ಪ್ರತ್ಯೇಕ ಪೊಲೀಸ್‌ ಠಾಣೆ, ನ್ಯಾಯಾಧೀಕರಣ

Bill To Sentence Those Who Abuse Senior Citizens Tabled In Lok Sabha

ನವದೆಹಲಿ[ಡಿ.12]: ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ತಿದ್ದುಪಡಿ ಮಸೂದೆ-2019 ಅನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್‌ ಗೆಹ್ಲೋಟ್‌ ಮಂಡಿಸಿದರು.

ಈ ನೂತನ ತಿದ್ದುಪಡಿ ಮಸೂದೆ ಪ್ರಕಾರ, ಹಿರಿಯ ನಾಗರಿಕರು ಅಥವಾ ತಮ್ಮ ಪೋಷಕರ ಮೇಲೆ ಉದ್ದೇಶಪೂರ್ವಕವಾಗಿ ನಿಂದನೆ ಮಾಡುವವರಿಗೆ 6 ತಿಂಗಳು ಜೈಲು ಅಥವಾ 10,000 ರು. ದಂಡ ಅಥವಾ ಈ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ. ಈ ಹೀಗಾಗಿ, ಈ ಮಸೂದೆ ಕಾನೂನಾಗಿ ಪರಿವರ್ತನೆಯಾದಲ್ಲಿ, ದೇಶದ ಹಿರಿಯ ನಾಗರಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಬಹುದೊಡ್ಡ ಕ್ರಮ ಕೈಗೊಂಡಂತಾಗಲಿದೆ.

ಆಸ್ತಿ ಸಿಕ್ಕ ಬಳಿಕ ಹೆತ್ತವರ ನಿರ್ಲಕ್ಷಿಸಿದರೆ ಆಸ್ತಿ ವಾಪಸ್‌!

ಈ ಪ್ರಕಾರ, ಹಿರಿಯ ನಾಗರಿಕರು ಅಥವಾ ಪೋಷಕರ ನಿಂದನೆ, ಮೌಖಿಕ, ಭಾವನಾತ್ಮಕ, ಅಲಕ್ಷ್ಯ, ಪರಿತ್ಯಾಗ, ದೈಹಿಕ ಹಲ್ಲೆ ಅಥವಾ ಮಾನಸಿಕ ಹಿಂಸೆಗಳನ್ನು ಸಹ ಕಾನೂನು ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೆ, ಪೋಷಕರ ಅಥವಾ ಹಿರಿಯ ನಾಗರಿಕರ ಮಗ ಅಥವಾ ಮಗಳು ಅಥವಾ ದತ್ತುಪುತ್ರ ಅಥವಾ ದತ್ತು ಪುತ್ರಿ, ಅಳಿಯ, ಸೋದರ ಸೊಸೆ, ಮೊಮ್ಮಗ, ಮೊಮ್ಮಗಳನ್ನು ಸಹ ಹಿರಿಯ ನಾಗರಿಕರ ಮಕ್ಕಳೆಂದೇ ಭಾವಿಸಲಾಗುತ್ತದೆ. ಅವರು, ತಮ್ಮ ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮರನ್ನು ತಂದೆ-ತಾಯಿಯಂತೆಯೇ ನೋಡಿಕೊಳ್ಳಬೇಕಿದೆ.

ಪೋಷಕರು ಅಥವಾ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳ ಇತ್ಯರ್ಥಕ್ಕಾಗಿ ಪ್ರತಿಯೊಂದು ಠಾಣೆಯಲ್ಲೂ ಸಬ್‌ ಇನ್‌ಸ್ಪೆಕ್ಟರ್‌ ರಾರ‍ಯಂಕ್‌ನ ನೋಡಲ್‌ ಅಧಿಕಾರಿ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ಪೊಲೀಸ್‌ ಘಟಕವಿರುತ್ತದೆ. ಇದರ ನೇತೃತ್ವವನ್ನು ಡಿಎಸ್‌ಪಿ ವಹಿಸಿಕೊಳ್ಳಲಿದ್ದಾರೆ. ಹಿರಿಯ ನಾಗರಿಕರ ನಿರ್ವಹಣೆ ಮತ್ತು ಸಲಹೆಗಳಿಗಾಗಿ ನ್ಯಾಯಾಧೀಕರಣಗಳನ್ನು ಸ್ಥಾಪನೆ ಮಾಡಲಾಗುತ್ತದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಲ್ಲಿಸಿದ ಅರ್ಜಿಗಳನ್ನು 60 ದಿನಗಳ ಒಳಗಾಗಿ ಇತ್ಯರ್ಥ ಮಾಡಬೇಕು ಎಂದು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ವಿವಾಹಿತರಿಗೆ 'ಗುಡ್ ನ್ಯೂಸ್' ಯಾವಾಗ ಎಂದು ಕೇಳೋ ಅಭ್ಯಾಸ ಬಿಟ್ಬಿಡಿ

Latest Videos
Follow Us:
Download App:
  • android
  • ios