ಭೋಪಾಲ್ (ನ.  17) ಭಯೋತ್ಪಾದನೆಯ ಇನ್ನೊಂದು ರೂಪ ಲವ್ ಜಿಹಾದ್ ನಿಯಂತ್ರಣಕ್ಕೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳು ಕಾನೂನು ತರಲು ಮುಂದಾಗಿವೆ.  ಈಗ ಮಧ್ಯಪ್ರದೇಶ ಒಂದು ಹೆಜ್ಜೆ ಮುಂದೆ ಇಟ್ಟಿದೆ.

ಲವ್ ಜಿಹಾದ್' ವಿರುದ್ಧ ಕಾನೂನು ಜಾರಿಗೊಳಿಸಲು ಕರ್ನಾಟಕ, ಹರ್ಯಾಣ ಮುಂತಾದ ರಾಜ್ಯಗಳಲ್ಲಿ ಚರ್ಚೆ ಜಾರಿಯಲ್ಲಿರುವಾಗಲೇ ಮಧ್ಯಪ್ರದೇಶ ರಾಜ್ಯದಲ್ಲಿ ಕಾನೂನು ರೂಪಿಸುತ್ತಿರುವುದಾಗಿ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಕುರಿತಂತೆ ಮಸೂದೆ ಮಂಡನೆ ಮಾಡಲಾಗುತ್ತದೆ. ಕಾನೂನು ಜಾರಿಯಾದ ಬಳಿಕ ತಪ್ಪಿತಸ್ಥರಿಗೆ 5 ವರ್ಷ ತನಕ ಕಠಿಣ ಸಜೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

'ಲವ್ ಜಿಹಾದ್ ನಡೆಸಿದರೆ ಅಂತಿಮ ಯಾತ್ರೆ'

'ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ ಎಂದು ಹೆಸರಿಡಲಾಗಿದ್ದು ಮಂಡನೆ ಮಾಡುತ್ತೇವೆ.  ಲವ್ ಜಿಹಾದ್ ಜಾಮೀನು ರಹಿತ ಅಪರಾಧವಾಗಲಿದೆ ಎಂದು ತಿಳಿಸಿದ್ದಾರೆ.

ಲವ್ ಜಿಹಾದ್ ಅಥವಾ ಬಲವಂತ ಮತಾಂತರ ಹಾಗೂ ಮದುವೆ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತರ ಕುಟುಂಬಸ್ಥರು ಅಂದರೆ ತಂದೆ, ತಾಯಿ, ಸೋದರ ಅಥವಾ ಸೋದರಿಯರು ಕಡ್ಡಾಯವಾಗಿ ದೂರು ದಾಖಲಿಸಿದ ನಂತರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಲವ್ ಜಿಹಾದ್  ವಿರುದ್ಧ ಕಾನೂನು ತರುವ ಬಗ್ಗೆ ಮೊದಲು ಮಾತನಾಡಿದ್ದರು. ಇದಾದ ಮೇಲೆ ಒಂದಾದ ಮೇಲೆ  ಒಂದು ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರುವ ಚರ್ಚೆ ಜಾರಿಯಲ್ಲಿದೆ.