ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ: 15ರ ಬಾಲಕ ಸಾವು!

ನಕಲಿ ವೈದ್ಯನೊಬ್ಬ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ 15 ವರ್ಷದ ಬಾಲಕ ಮೃತಪಟ್ಟ ಘಟನೆ ಬಿಹಾರದ ಸಾರಣ್‌ನಲ್ಲಿ ನಡೆದಿದೆ. ಕೃಷ್ಣಕುಮಾರ್‌ (15) ಮೃತಪಟ್ಟ ಬಾಲಕ.

bihar teenager dies after fake doctor performs youtube-guided surgery rav

ಪಟನಾ (ಸೆ.9): ನಕಲಿ ವೈದ್ಯನೊಬ್ಬ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ 15 ವರ್ಷದ ಬಾಲಕ ಮೃತಪಟ್ಟ ಘಟನೆ ಬಿಹಾರದ ಸಾರಣ್‌ನಲ್ಲಿ ನಡೆದಿದೆ. ಕೃಷ್ಣಕುಮಾರ್‌ (15) ಮೃತಪಟ್ಟ ಬಾಲಕ.

ಕೃಷ್ಣಕುಮಾರ್‌ ಹಲವು ಬಾರಿ ವಾಂತಿ ಮಾಡಿಕೊಂಡಿದ್ದರಿಂದ ಆತನ ಪೋಷಕರು ಸಾರಣ್‌ನ ಗಣಪತಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಅಜಿತ್‌ ಕುಮಾರ್‌ ಪುರಿ ನಕಲಿ ವೈದ್ಯನಾಗಿದ್ದು, ಇದರ ಅರಿವಿರದೇ ಅವರು ಈ ಆಸ್ಪತ್ರೆಗೆ ಬಂದಿದ್ದರು.

ನಾಡಿನ ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ ಸಂಪಾದ ವಸಂತ ನಾಡಿಗೇರ ಹೃದಯಾಘಾತದಿಂದ ನಿಧನ!

ಆರಂಭದಲ್ಲಿ ಅಜಿತ್‌, ಬಾಲಕನಿಗೆ ವಾಂತಿ ನಿಲ್ಲಲು ಚಿಕಿತ್ಸೆ ನೀಡಿದ್ದ ಹಾಗೂ ಪಿತ್ತಕೋಶದಲ್ಲಿ ಕಲ್ಲು ಆಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಬೇಕೆಂದು ನಿರ್ಧರಿಸಿದ್ದ. ಬಳಿಕ ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದುಕೊಂಡು ಹೋಗಿ ಯೂಟ್ಯೂಬಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ್ದ.  ಆಗ ಬಾಲಕನಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆ್ಯಂಬುಲೆನ್ಸ್‌ನಲ್ಲಿ ಪಟನಾದಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. 

ಆದರೆ ಬಾಲಕ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಹೆದರಿದ ಅಜಿತ್‌ ಕುಮಾರ್‌ ಹಾಗೂ ಆತನ ಸಿಬ್ಬಂದಿ ಪಟನಾ ಆಸ್ಪತ್ರೆಯಲ್ಲಿ ಬಾಲಕನ ಶವವನ್ನು ಬಿಟ್ಟು ಪರಾರಿಯಾಗಿದ್ದಾರೆ.ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ವೈದ್ಯ ಅಜಿತ್‌ ಕುಮಾರ್‌ ಹಾಗೂ ಆತನ ಸಿಬ್ಬಂದಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios