Asianet Suvarna News

ಕೊರೋನಾ 2ನೇ ಅಲೆ ಮಧ್ಯೆ ಬಿಹಾರದಲ್ಲಿ 75 ಸಾವಿರ ಸಾವು, ಕಾರಣ ಅಸ್ಪಷ್ಟ!

* ಕೊರೋನಾ ಮಧ್ಯೆ ಬಿಹಾರದಲ್ಲಿ ಮತ್ತೊಂದು ವಿವಾದ

* ಬಿಹಾರದಲ್ಲಿ 75 ಸಾವಿರ ಸಾವು, ಕೊರೋನಾದಿಂದಲ್ಲ ಎಂದ ಅಧಿಕಾರಿಗಳು, ಕಾರಣ ಅಸ್ಪಷ್ಟ

* ರಾಜ್ಯ ಕಡಿಮೆ ಸಂಖ್ಯೆ ವರದಿ ಮಾಡುತ್ತಿದೆಯೇ ಎಂಬ ಅನುಮಾನ

Bihar Saw Nearly 75000 Unaccounted Deaths Amid 2nd Covid Wave Data Shows pod
Author
Bangalore, First Published Jun 20, 2021, 2:31 PM IST
  • Facebook
  • Twitter
  • Whatsapp

ಪಾಟ್ನಾ(ಜೂ.20): ಬಿಹಾರದಲ್ಲಿ 2021ರ ಮೊದಲ ಐದು ತಿಂಗಳಲ್ಲಿ ಅಸ್ಪಷ್ಟ ಕಾರಣಗಳಿಂದ ಸುಮಾರು 75,000 ಮಂದಿ ಮೃತಪಟ್ಟಿದ್ದು, ಎಲ್ಲವೂ ಕೊರೋನಾ ಎರಡನೇ ಅಲೆಗೆ ಹೋಲಿಕೆಯಾಗುತ್ತಿವೆ ಎನ್ನಲಾಗಿದೆ. ನೂತನ ಅಂಕಿ ಅಂಶಗಳಿಂದ ಈ ವಿಚಾರ ಬಯಲಾಗಿದೆ. 

ಕೋವಿಡ್‌ ರೋಗಿಗೆ ವೆಂಟಿಲೇಟರ್‌ ಬೇಕಾಗುತ್ತಾ? ತಿಳಿಸುತ್ತೆ ಈ ಸಾಫ್ಟ್‌ವೇರ್‌!

ಇನ್ನು ಈ ಅಂಕಿ ಅಂಶ ರಾಜ್ಯದ ಅಧಿಕೃತ ಸಾಂಕ್ರಾಮಿಕ ಸಾವಿನ ಸಂಖ್ಯೆಗಿಂತ ಸುಮಾರು 10 ಪಟ್ಟು ಹೆಚ್ಚಿದೆ. ಹೀಗಾಗಿ ರಾಜ್ಯ ಕೋವಿಡ್ ಸಾವುಗಳ ಸಂಖ್ಯೆ ಕಡಿಮೆ ಮಾಡಿ ತೋರಿಸುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಇನ್ನು 2019 ರ ಜನವರಿ-ಮೇ ತಿಂಗಳಲ್ಲಿ ಬಿಹಾರದಲ್ಲಿ ಸುಮಾರು 1.3 ಲಕ್ಷ ಸಾವುಗಳು ಸಂಭವಿಸಿವೆ. ಆದರೆ ರಾಜ್ಯದ ನಾಗರಿಕ ನೋಂದಣಿ ವ್ಯವಸ್ಥೆಯ ಮಾಹಿತಿಯ ಅನ್ವಯ, 2021 ರಲ್ಲಿ, ಇದೇ ಅವಧಿಯಲ್ಲಿ ಈ ಅಂಕಿ-ಅಂಶ ಸುಮಾರು 2.2 ಲಕ್ಷಕ್ಕೇರಿದೆ. ಅಂದರೆ ಸುಮಾರು 82,500 ವ್ಯತ್ಯಾಸವಿದೆ. ಅದರಲ್ಲೂ ಇದರಲ್ಲಿ ಅರ್ಧಕ್ಕಿಂತ ಹೆಚ್ಚು, ಅಂದರೆ ಸುಮಾರು 62ರಷ್ಟು ಸಾವುಗಳು ಈ ವರ್ಷದ ಮೇ ತಿಂಗಳಲ್ಲಿ ದಾಖಲಾಗಿವೆ. 

ಕೊರೋನಾಗೆ ಬಲಿ, ಕುಟುಂಬಕ್ಕೆ 4 ಲಕ್ಷ ಕೊಡಲು ಸಾಧ್ಯವಿಲ್ಲ: ಕೇಂದ್ರ!

ಇನ್ನು 2021ರ ಜನವರಿಯಿಂದ ಮೇವರೆಗೆ ಬಿಹಾರದ ಅಧಿಕೃತ ಕೋವಿಡ್ ಸಾವಿನ ಸಂಖ್ಯೆ 7,717 ರಷ್ಟಿತ್ತು. ಇನ್ನು ಈ ತಿಂಗಳ ಆರಂಭದಲ್ಲಿ 3,951 ಪ್ರಕರಣಗಳು ಮತ್ತೆ ಸೇರ್ಪಡೆಗೊಂಡಿವೆ. ಪರಿಷ್ಕೃತ ಅಂಕಿ ಅಂಶದಲ್ಲಿ ದಾಖಲಾಗಿರುವಂತೆ ಈ ಸಾವುಗಳು ಯಾವಾಗ ಸಂಭವಿಸಿದವು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸದಿದ್ದರೂ, ಇವೆಲ್ಲವೂ 2021ರಲ್ಲೇ ಮೃತಪಟ್ಟವರೆನ್ನಲಾಗಿದೆ. ಇನ್ನು, ರಾಜ್ಯದ ಒಟ್ಟು ಅಧಿಕೃತ COVID ಸಾವುಗಳು ಅದರ ನಾಗರಿಕ ನೋಂದಣಿ ವ್ಯವಸ್ಥೆಯಿಂದ ದಾಖಲಾದ ಹೆಚ್ಚುವರಿ ಸಾವುಗಳ ಒಂದು ಭಾಗ ಮಾತ್ರ. ಸದ್ಯ, ಈ ಅಂತರ ಪರಿಷ್ಕೃತ ಸಂಖ್ಯೆಯ ಹೊರತಾಗಿಯೂ ಕೋವಿಡ್ ಸಾವಿನ ಸಂಖ್ಯೆಯನ್ನು ರಾಜ್ಯ ಇನ್ನೂ ಕಡಿಮೆ ತೋರಿಸುತ್ತಿದೆಯೇ ಎಂಬ ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios