ಬಿಹಾರದಲ್ಲಿ ಶಿಕ್ಷಕರಿಗೆ ಕುಡುಕರ ಹಿಡಿಯುವ ಕೆಲಸ: ರಾಜ್ಯ ಶಿಕ್ಷಣ ಇಲಾಖೆ ಆದೇಶ!

*ಕುಡುಕರು, ಸಾರಾಯಿ ವ್ಯಾಪಾರಿಗಳ ಮಾಹಿತಿ ನೀಡಲು ಸರ್ಕಾರ ಸೂಚನೆ
*ಬಿಹಾರದಲ್ಲಿ 2016ರಿಂದ ಸಂಪೂರ್ಣ ಪಾನನಿಷೇಧ ಜಾರಿ
*ರಾಜ್ಯ ಶಿಕ್ಷಣ ಇಲಾಖೆಯಿಂದ  ಶೈಕ್ಷಣಿಕ ಕ್ಷೇತ್ರದ ಸ್ವಯಂಸೇವಕರಿಗೆ ಆದೇಶ

Bihar Government asks Teachers to inform about people consuming or supplying liquor Alcohol mnj

ಪಟನಾ (ಜ. 26): ಗಣತಿ, ಚುನಾವಣೆ, ಬಿಸಿಯೂಟ ಹೀಗೆ ಮೊದಲೇ ನಾನಾ ಕಾರ್ಯಗಳಲ್ಲಿ ವ್ಯಸ್ತರಾಗಿರುವ ಶಾಲಾ ಶಿಕ್ಷಕರಿಗೆ ಬಿಹಾರದಲ್ಲಿ (Bihar School Teachers) ಹೊಸತೊಂದು ಜವಾಬ್ದಾರಿ ಹೆಗಲಿಗೆ ಬಿದ್ದಿದೆ. ಅದು - ಕುಡುಕರನ್ನು ಹಿಡಿಯುವುದು! ಬಿಹಾರದಲ್ಲಿ 2016ರಿಂದ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದೆ. ರಾಜ್ಯದಲ್ಲಿ ಎಲ್ಲೂ ಅಕ್ರಮ ಅಥವಾ ಸಕ್ರಮ ಮದ್ಯ ಸಿಗುವಂತಿಲ್ಲ. ಆದರೂ ಶಾಲೆಗಳ ಕಾಂಪೌಂಡ್‌ ಸೇರಿದಂತೆ ಅನೇಕ ಕಡೆ ಕುಡಿದು ಎಸೆದ ಸಾರಾಯಿ ಬಾಟಲಿಗಳು ಸಿಗುತ್ತಿವೆ. ಜನರು ಕುಡಿದು ತೂರಾಡುವುದು ಅಲ್ಲಲ್ಲಿ ಕಂಡುಬರುತ್ತಿದೆ. 

ಹೀಗಾಗಿ ಯಾರು ಕುಡಿಯುತ್ತಾರೆ ಮತ್ತು ಅವರಿಗೆ ಯಾರು ಮದ್ಯ ಮಾರಾಟ ಮಾಡುತ್ತಾರೆ ಎಂಬುದನ್ನು ಪತ್ತೆಹಚ್ಚುವಂತೆ ರಾಜ್ಯ ಶಿಕ್ಷಣ ಇಲಾಖೆಯು (education Department) ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಪ್ರಿನ್ಸಿಪಾಲ್‌ಗಳು, ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರದ ಸ್ವಯಂಸೇವಕರಿಗೆ ಆದೇಶ ನೀಡಿದೆ. ಅದರಂತೆ ಅವರು ಇನ್ನುಮುಂದೆ ಕುಡುಕರನ್ನೂ, ಮದ್ಯದ ವ್ಯಾಪಾರಿಗಳನ್ನೂ ಪತ್ತೆಹಚ್ಚಿ ಸರ್ಕಾರದ ಪಾನನಿರೋಧ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕಿದೆ.

ಇದನ್ನೂ ಓದಿ: ಚಾಲಕ ಮದ್ಯಪಾನ ಮಾಡಿದ್ರೆ ಅಮೆರಿಕ ಕಾರು ಚಲಿಸೋಲ್ಲ, ಹೊಸ ವ್ಯವಸ್ಥೆ!

ಶಿಕ್ಷಕರ ಸಂಘ ಪ್ರತಿಭಟನೆ: ಇನ್ನು ತಮ್ಮ ಪ್ರದೇಶಗಳಲ್ಲಿ ಮದ್ಯ ಸೇವನೆ ಮತ್ತು ಮಾರಾಟದ ಮೇಲೆ ನಿಗಾ ಇಡಲು ನಿತೀಶ್ ಕುಮಾರ್ (Nitish Kumar) ನೇತೃತ್ವದ ಸರ್ಕಾರದ ನಿರ್ದೇಶನವನ್ನು ವಿರೋಧಿಸಿ ಬಿಹಾರದ ಶಿಕ್ಷಕರ ಸಂಘಗಳು ಭಾನುವಾರ ಪ್ರತಿಭಟಿಸಲಿವೆ ಮತ್ತು ಟೋಲ್ ಫ್ರೀ ಸಂಖ್ಯೆಗಳಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಿವೆ.ಈ ನಿರ್ದೇಶನದ ವಿರುದ್ಧ ಬಿಹಾರ ಪರಿವರ್ತಕಾರಿ ಶಿಕ್ಷಕ ಸಂಘ (BPSS) ಭಾನುವಾರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಸರ್ಕಾರವು ಶಿಕ್ಷಕರ ಹೆಗಲ ಮೇಲಿರುವ ಶೈಕ್ಷಣಿಕೇತರ ಕೆಲಸಗಳ ಹೊರೆಯನ್ನು ತೆಗೆದುಹಾಕಬೇಕು. ಮದ್ಯದ ಕಾರ್ಯಾಚರಣೆಯ ಮೇಲೆ ಕಣ್ಣಿಡಲು ಹೊಸ ನಿರ್ದೇಶನವು ಶಿಕ್ಷಕರು ಮತ್ತು ಅವರ ಕುಟುಂಬಗಳಿಗೆ ನರಮೇಧವಾಗಬಹುದು ಎಂದು BPSSನ ವಕ್ತಾರರೋಬ್ಬರು ತಿಳಿಸಿದ್ದಾರೆ. “ಬಿಹಾರದಲ್ಲಿ, ಪೊಲೀಸ್ ಮತ್ತು ರಹಸ್ಯ ಸಂಸ್ಥೆಗಳು ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳು ರಾಜ್ಯದಲ್ಲಿ ಮದ್ಯದ ಮಾಫಿಯಾಗಳ ಕಾರ್ಯಾಚರಣೆಯನ್ನು ತಡೆಯಲು ವಿಫಲವಾದಾಗ,  ಶಿಕ್ಷಕರು ಅವರನ್ನು ಹೇಗೆ ಎದುರಿಸಬಹುದು. ಶಿಕ್ಷಣ ಇಲಾಖೆ ನಿರ್ದೇಶನವು ರಾಜ್ಯದಲ್ಲಿ ಶಿಕ್ಷಕರ ಭ್ರಾತೃತ್ವದ ಸಾಮೂಹಿಕ ಹತ್ಯೆಗೆ ಕಾರಣವಾಗಿದೆ. " ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rape on woman:ಬುದ್ಧಿಮಾಂದ್ಯ ಮಹಿಳೆಗೆ ಮದ್ಯ ಕುಡಿಸಿ ಹಾಡಹಗಲೇ ಎರಗಿದ ಕಿರಾತಕರು

ಸರ್ಕಾರದ ಈ ಆದೇಶಕ್ಕೆ ಶಿಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸರ್ಕಾರಕ್ಕೆ ಯಾವ ಕೆಲಸವಿದ್ದರೂ ಮೊದಲು ಕಾಣಿಸುವುದೇ ನಾವು. ಆದರೆ, ಕುಡುಕರನ್ನು ಹಿಡಿಯುವುದಕ್ಕಿಂತ ಅವಮಾನಕರ ಕೆಲಸ ನಮಗೆ ಇನ್ನಾವುದಿದೆ’ ಎಂದು ಶಿಕ್ಷಕರು ಅಲವತ್ತುಕೊಂಡಿದ್ದಾರೆ. ಶಿಕ್ಷಣ ಇಲಾಖೆಯು ಪ್ರಾದೇಶಿಕ ಉಪನಿರ್ದೇಶಕರಿಗೆ ಈ ಸಂಬಂಧ ಜ.28ರಂದು ಸುತ್ತೋಲೆ ರವಾನಿಸಿದ್ದು, ಎಲ್ಲಾ ಶಿಕ್ಷಕರು ಮತ್ತು ಶಿಕ್ಷಣಾಧಿಕಾರಿಗಳ ಸಭೆ ನಡೆಸಿ ಮದ್ಯಪಾನಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಅಧಿಕೃತ ಹೇಳಿಕೆಯಲ್ಲಿ, ಬಿಹಾರ ಸರ್ಕಾರವು ಶಿಕ್ಷಣತಜ್ಞರಿಗೆ ಕರೆ ಮಾಡಲು ಮತ್ತು ಅಂತಹ ಚಟುವಟಿಕೆಗಳ ಬಗ್ಗೆ ತಿಳಿಸಲು ಮೊಬೈಲ್ ಸಂಖ್ಯೆಗಳನ್ನು ಒದಗಿಸಿದೆ. ಸಂಖ್ಯೆಗಳು 9473400378 ಮತ್ತು 9473400606. ಜತೆಗೆ ರಾಜ್ಯವು ಟೋಲ್ ಫ್ರೀ ಸಂಖ್ಯೆಯನ್ನು ಸಹ ಒದಗಿಸಿದೆ- 18003456268/15545. ಮಾಹಿತಿದಾರರ ಗುರುತನ್ನು ಅನಾಮಧೇಯವಾಗಿ ಇರಿಸಲಾಗುವುದು ಎಂದು ರಾಜ್ಯವು ಭರವಸೆ ನೀಡಿದೆ. ಮದ್ಯವನ್ನು ಸೇವಿಸಲು ಅಥವಾ ಸರಬರಾಜು ಮಾಡಲು ಶಾಲೆಯ ಆವರಣ ಬಳಕೆಯಾಗದಂತೆ ನೋಡಿಕೊಳ್ಳುವಂತೆ ಶಿಕ್ಷಣ ತಜ್ಞರನ್ನುಕೇಳಿಕೊಂಡಿದೆ

Latest Videos
Follow Us:
Download App:
  • android
  • ios