ಪಾಡ್ನಾ[ಫೆ.02]: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೆಡಿಯುನ ಪ್ರಧಾನ ಕಾರ್ಯದರ್ಶಿ ಪವನ್ ವರ್ಮಾ ಹಾಗೂ ಉಪಾಧ್ಯಕ್ಷ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ರನ್ನು ಪಕ್ಷದಿಂದ ಹೊರ ಹಾಕಿದ್ದಾರೆ. ಇವರಿಬ್ಬರೂ ನಿತೀಶ್ ಕುಮಾರ್ ತ್ಯಂತ ಹೆಚ್ಚು ನಂಬಿಕಸ್ಥ ನಾಯಕರಾಗಿದ್ದರು. ಹೀಗಿರುವಾಗ ಈ ಇಬ್ಬರನ್ನು ಪಕ್ಷದಿಂದ ಹೊರ ಹಾಕಿರುವ ನಿತೀಶ್ ಕುಮಾರ್ ಚುನಾವಣೆಗೂ ಮುನ್ನ ಭಾರೀ ಸಂಕಷ್ಟದಲ್ಲಿ ಸಿಲುಕಿದ್ದು, ಪಕ್ಷದಲ್ಲಿ ಈ ಇಬ್ಬರು ನಾಯಕರ ಸ್ಥಾನ ಯಾರಿಗೆ ನೀಡುತ್ತಾರೆಂಬ ಕುತೂಹಲ ಮನೆ ಮಾಡಿದೆ.

ನಿತೀಶ್ ಅತ್ಯಾಪ್ತರಾಗಿದ್ದ ವರ್ಮಾ

ನಿತೀಶ್ ಕುಮಾರ್, ವರ್ಮಾರನ್ನು ಮೊದಲ ಬಾರಿ ಭೇಟಿಯಾಗಿದ್ದು, ಭೂತಾನ್ ನಲ್ಲಿ. ಅವರು ಅಲ್ಲಿ ಭಾರತರ ರಾಯಭಾರಿಯಾಗಿದ್ದರು. ನಿತೀಶ್ ಕುಮಾರ್ ಅಂದು ಲ್ಲಿ ಪ್ರತಿನಿಧಿ ತಂಡದೊಂದಿಗೆ ತೆರಳಿದ್ದರು. ಹೀಗಿರುವಾಗ ನಿತೀಶ್ ಕುಮಾರ್, ವರ್ಮಾರಿಂದ ಅದೆಷ್ಟು ಪ್ರಭಾವಿತರಾದರೆಂದರೆ ಕೂಡಲೇ ತಮ್ಮ ಪಕ್ಷದ ಸಲಹೆಗಾರರನ್ನಾಗಿಸುವ ಆಫರ್ ನಿಡಿದ್ದ್‌ದರು. ಬಳಿಕ ವರ್ಮಾ JDU ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ಮುಂದೆ ವರ್ಮಾ JDU ಪಕ್ಷದ ದೆಹಲಿ ನಾಯಕರಾಗಿ ಗುರುತಿಸಿಕೊಂಡಿದ್ದರು.

ಪ್ರಶಾಂತ್ ಕಿಶೋರ್, ಪವನ್ ವರ್ಮಾ ಔಟ್: ಥ್ಯಾಂಕ್ಯೂ ಎಂದ ಎಲೆಕ್ಷನ್ ವಿನ್ನರ್!

ಪ್ರಶಾಂತ್ ಕಿಶೋರ್ ಮತ್ತು ನಿತೀಶ್ ಜೋಡಿ

ಪ್ರಶಾಂತ್ ಕಿಶೋರ್ ಕತೆ ಮತ್ತಷ್ಟು ಕುತೂಹಲಕಾರಿಯಾಗಿದೆ. ಜೆಡಿಯು 2015ರಲ್ಲಿ ಕಿಶೋರ್ ಹಾಗೂ ಅವರ ತಂಡವನ್ನು ಚುನಾವಣಾ ಪ್ರಚಾರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಅವರು ಪ್ರಶಾಂತ್ ಕಿಶೋರ್, ನಿತೀಶ್ ಕುಮಾರ್ ರವರಿಗೆ ಅದೆಷ್ಟು ಆಪ್ತರಾದರೆಂದರೆ, ಅವರನ್ನೇ ತಮ್ಮ ಪಕ್ಷದ ಉಪಾಧ್ಯಕ್ಷರನ್ನಾಘಿ ನೇಮಿಸಿಕೊಂಡಡು. ಅಂದು ನೇಕರು ನಿತೀಶ್ ಕುಮಾರ್ ಈ ನಿರ್ಧಾರವ್ನನು ಅನೇಕರು ಖಂಡಿಸಿದರು. ಪ್ರಶಾಂತ್ ಕಿಶೋರ್ ಕಾರ್ಯ ವೈಖರಿ ಹಲವರ ಅಸಾಮಾಧಾನಕ್ಕೆ ಕಾರಣವಾಯ್ತು. ಅವರು ಪಕ್ಷದ ಕಿರಿಯರಿಂದ ಹಿರಿಯರವರೆಗೆ ಪ್ರತಿಯೊಬ್ಬರನ್ನೂ ತಮ್ಮಿಚ್ಛೆಯಂತೆ ಚುನಾವಣಾ ಪ್ರಚಾರ ನಡೆಸುವಂತೆ ಆದೇಶಿಸುತ್ತಿದ್ದರು. ಅದು ಯಾರೊಬ್ಬರಿಗೂ ಇಷ್ಟವಾಗುತ್ತಿರಲಿಲ್ಲ.

ಪ್ರಶಾಂತ್‌ ಕಿಶೋರ್‌ ಪಕ್ಷ ತೊರೆಯಲು ಸ್ವತಂತ್ರರು: ಪಕ್ಷ ಗೆಲ್ಲಿಸಿದ ನಾಯಕನಿಗೆ ಗೇಟ್‌ಪಾಸ್?

ಮುಂದೆ ಯಾರು?

ಸದ್ಯ ಈ ಇಬ್ಬರು ನಾಯಕರನ್ನು ಪಕ್ಷದಿಂದ ಹೊರ ಹಾಕಿದ ಬಳಿಕ ನಿತಿಶ್ ಕುಮಾರ್ ತಮ್ಮ ಆಪ್ತ ವಲಯದಲ್ಲಿ ಯಾವ ನಾಯಕರನ್ನು ಶಾಮೀಲುಗೊಳಿಸುತ್ತಾರೆಂಬ ಪ್ರಶ್ನೆ ಎದ್ದಿದೆ. ಪ್ರಶಾಂತ್ ಕಿಶೋರ್ ಹಾಗೂ ವರ್ಮಾರಂತೆ ನಂಬಬಿಕಸ್ಥ ನಾಯಕರ ಅಗತ್ಯ ಸದ್ಯ ಸಿಎಂ ನಿತೀಶ್ ಕುಮಾರ್ ಗಿದೆ. ಚುನಾವಣಾ ಹೊಸ್ತಿಲಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕರಲ್ಲಿ, ಎಪಿ ಸಿಂಗ್, ರಾಜೀವ್ ರಂಜನ್, ಸಂಜಯ್ ಝಾ, ಅಶೋಕ್ ಚೌಧರಿ ಹಾಗೂ ವಿಜಯ್ ಕುಮಾರ್ ಚೌಧರಿ ಇವರಲ್ಲಿ ಯಾರಾದರೂ ಇಬ್ಬರಿಗೆ ವರ್ಮಾ ಹಾಗೂ ಪ್ರಶಾಂತ್ ಕಿಶೋರ್ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅದೇನಿದ್ದರೂ ವರ್ಮಾ ಹಾಗೂ ಪ್ರಶಾಂತ್ ಕಿಶೋರ್ ಇಲ್ಲದೇ ಬಿಹಾರ ಚುನಾವಣಾ ಹೊಸ್ತಿಲಲ್ಲಿ ಸಿಎಂ ನಿತೀಶ್ ಕುಮಾರ್ ಸಂಕಷ್ಟಕ್ಕೀಡಾಗಿದ್ದಾರೆ ಎಂಬುವುದರಲ್ಲಿ ಅನುಮಾನವಿಲ್ಲ.

PK ಟ್ವೀಟ್ ಬೆನ್ನಲ್ಲೇ ಬಿಹಾರ ಸಿಎಂ ಮಹತ್ವದ ಘೋಷಣೆ: ಬಿಜೆಪಿಗೆ ಆಘಾತ!