Asianet Suvarna News Asianet Suvarna News

ತೆರಿಗೆಗಳ್ಳರ ಸ್ವರ್ಗದಲ್ಲಿ ನಿತ್ಯಾ ಹಣ ವ್ಯವಹಾರ?

ತೆರಿಗೆಗಳ್ಳರ ಸ್ವರ್ಗದಲ್ಲಿ ನಿತ್ಯಾ ಹಣ ವ್ಯವಹಾರ?| ಪೆಸಿಫಿಕ್‌ ದ್ವೀಪ ವಾನ್‌ವಾಟೂನಲ್ಲಿ ಬ್ಯಾಂಕ್‌ ಖಾತೆ| ಅಲ್ಲಿಗೇ ಹಣ ಜಮೆ ಮಾಡಲು ಭಕ್ತರಿಗೆ ಸೂಚನೆ

Bidadi Nithyananda Swami Having Bank Account In Income Tax Frauders Heaven Vanuatu bank
Author
Bangalore, First Published Jan 24, 2020, 8:26 AM IST
  • Facebook
  • Twitter
  • Whatsapp

ನವದೆಹಲಿ[ಜ.24]: ಅತ್ಯಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ಬಿಡದಿ ಧ್ಯಾನಪೀಠದ ವಿವಾದಿತ ಸ್ವಾಮಿ ನಿತ್ಯಾನಂದ ತೆರಿಗೆ ಕಳ್ಳರ ಸ್ವರ್ಗವೆಂದೇ ಕುಖ್ಯಾತವಾಗಿರುವ, ಯಾವುದೇ ರೀತಿಯನ್ನು ತೆರಿಗೆ ಹೇರದ ಪೆಸಿಫಿಕ್‌ ಸಾಗರದ ದ್ವೀಪರಾಷ್ಟ್ರ ವಾನ್‌ವಾಟೂನಲ್ಲಿ ಬ್ಯಾಂಕ್‌ ಖಾತೆ ಹೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗೆ ನಿತ್ಯಾನಂದನ ಶಿಷ್ಯರೊಬ್ಬರು ವ್ಯಕ್ತಿಯೊಬ್ಬರಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ವಾನ್‌ವಾಟೂ ದೇಶದ ಬ್ಯಾಂಕ್‌ಗೆ ಪೂಜೆಗೆ ಸಂಬಂಧಿಸಿದ ಹಣ ಜಮೆ ಮಾಡುವಂತೆ ಸೂಚಿಸಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.

ನಿತ್ಯಾನಂದನಿಂದ ಹೊಸ ದೇಶ ಸ್ಥಾಪನೆ! ಎಲ್ಲಿದೆ ದೇಶ?

ವಾನ್‌ವಾಟೂ ದೇಶದಲ್ಲಿ ಕಾರ್ಪೋರೆಟ್‌ ಅಥವಾ ಆದಾಯ ತೆರಿಗೆಯೇ ಇಲ್ಲ. ಫಿಜಿ, ಸೊಲೊಮನ್‌ ಐಲ್ಯಾಂಡ್‌ ಹಾಗೂ ನ್ಯೂಗಿನಿಯಾ ದೇಶಗಳ ಬಳಿ ಇರುವ ಈ ದೇಶದ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರ ವಿವರ ಗುಪ್ತವಾಗಿರುತ್ತವೆ. ಹೀಗಾಗಿ ಈ ದೇಶದ ಬ್ಯಾಂಕುಗಳು ತೆರಿಗೆ ಕಳ್ಳರಿಗೆ ಸ್ವರ್ಗವಾಗಿವೆ.

ನಿತ್ಯಾನಂದ ಬಂಟ ರವಾನಿಸಿರುವ ಇ-ಮೇಲ್‌ನಲ್ಲಿ ವಾನ್‌ವಾಟೂ ರಾಷ್ಟ್ರೀಯ ಬ್ಯಾಂಕ್‌ನ ಪೋರ್ಟ್‌ ವಿಲಾ ಬ್ರ್ಯಾಂಚ್‌ ಶಾಖೆಯಲ್ಲಿರುವ ಕೈಲಾಸ ಲಿಮಿಟೆಡ್‌ ಹೆಸರಿನ ಖಾತೆ ಹಾಗೂ ಖಾತೆ ಸಂಖ್ಯೆಯನ್ನು ಒದಗಿಸಲಾಗಿದೆ. ಪೋರ್ಟ್‌ ವಿಲಾ ಎಂಬುದು ವಾನ್‌ವಾಟೂವಿನ ರಾಜಧಾನಿಯಾಗಿದೆ. ಕೈಲಾಸ ಎಂಬುದು ನಿತ್ಯಾನಂದ ಸ್ಥಾಪಿಸಿದ ಹೊಸ ದೇಶವಾಗಿದೆ.

ನಿತ್ಯಾನಂದ ಆಶ್ರಮದ ‘ಹಿಂಸೆ’ ಬಿಚ್ಚಿಟ್ಟ ಬಾಲಕಿ!

ಬ್ಯಾಂಕ್‌ ಖಾತೆಯನ್ನು ನಿತ್ಯಾನಂದ ಇಲ್ಲಿ ಹೊಂದಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ವಿವಾದಿತ ಸ್ವಾಮೀಜಿ ವಾನ್‌ವಾಟೂವಿನಲ್ಲಿ ಆಶ್ರಯ ಪಡೆದಿದ್ದಾನಾ ಅಥವಾ ಬ್ಯಾಂಕ್‌ ಖಾತೆಯನ್ನಷ್ಟೇ ನಿರ್ವಹಿಸುತ್ತಿದ್ದಾನಾ ಎಂಬ ಸಂದೇಹವೂ ವ್ಯಕ್ತವಾಗಿದೆ.ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios