Asianet Suvarna News Asianet Suvarna News

ಭಾರತ್‌ ಜೋಡೋ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮ: ಕಾಂಗ್ರೆಸ್

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಚಾಲನೆ ನೀಡಿದ ‘ಭಾರತ್‌ ಜೋಡೋ ಯಾತ್ರೆ’ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ಇದು ದೇಶವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಜಯಗಳಿಸುವವರೆಗೂ ನಡೆಯಲಿದೆ ಎಂದು ಕಾಂಗ್ರೆಸ್‌ ಹೇಳಿದೆ.

Bharat Jodo Yatra India's 2nd Independence struggle, Congress akb
Author
First Published Sep 8, 2022, 7:17 AM IST

ಕನ್ಯಾಕುಮಾರಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಚಾಲನೆ ನೀಡಿದ ‘ಭಾರತ್‌ ಜೋಡೋ ಯಾತ್ರೆ’ ದೇಶದ 2ನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ಇದು ದೇಶವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಜಯಗಳಿಸುವವರೆಗೂ ನಡೆಯಲಿದೆ ಎಂದು ಕಾಂಗ್ರೆಸ್‌ ಹೇಳಿದೆ. ಅಲ್ಲದೆ ಈ ಯಾತ್ರೆ ದೇಶದ ರಾಜಕೀಯ ಇತಿಹಾಸದಲ್ಲೊಂದು ಮಹತ್ವದ ತಿರುವಾಗಿದ್ದು, ಹೊಸ ಅಧ್ಯಾಯಕ್ಕೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ (former Union Minister P. Chidambaram)‘ನಮ್ಮ ಭಾರತ್‌ ಜೋಡೋ ಯಾತ್ರೆಯನ್ನು (Bharat Jodo Yatra)ಟೀಕಿಸುತ್ತಿರುವವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ (India's freedom struggle)ಯಾವುದೇ ಪಾತ್ರ ವಹಿಸಿರಲಿಲ್ಲ. ಈಗ ನಡೆಯುತ್ತಿರುವ 2ನೇ ಸ್ವಾತಂತ್ರ್ಯ ಹೋರಾಟದಲ್ಲೂ ನಿಮ್ಮ (ಬಿಜೆಪಿ) ಪಾತ್ರ ಇಲ್ಲ. ದೇಶವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಗೆಲ್ಲುವವರೆಗೂ ಈ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿದ್ದಾರೆ.

ಪಕ್ಷದ ಇನ್ನೊಬ್ಬ ಇರಿಯ ನಾಯಕ ಜೈರಾಂ ರಮೇಶ್‌ (Jairam Ramesh)ಮಾತನಾಡಿ , ‘2022ರ ಸೆ.7ರಂದು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ, ಅತ್ಯಂತ ಸುದೀರ್ಘ ಪಾದಯಾತ್ರೆಗೆ ಚಾಲನೆ ನೀಡುತ್ತಿದೆ. ಇದು ಭಾರತದ ರಾಜಕೀಯಕ್ಕೆ ತಿರುವು ನೀಡುವ ಹಂತ. ಇದು ಹೊಸ ಅಧ್ಯಾಯದ ಆರಂಭ. ದೇಶ ಮತ್ತು ಪಕ್ಷ ಎರಡನ್ನೂ ಪುನರುಜ್ಜೀವನಗೊಳಿಸುವ ಮಹತ್ವದ ನಿರ್ಣಾಯಕ ಘಟ್ಟ. ಈ ಯಾತ್ರೆ ಬಗ್ಗೆ ದೇಶಾದ್ಯಂತ ಇರುವ ಪಕ್ಷದ ಕಾರ್ಯಕರ್ತರಲ್ಲಿ ಭಾರೀ ಉತ್ಸಾಹವಿದೆ. ಇದು ಸ್ವತಂತ್ರ್ಯ ಭಾರತದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಜನಸಮೂಹವನ್ನು ಒಗ್ಗೂಡಿಸುವ ಕಾರ್ಯಕ್ರಮ’ ಎಂದು ಹೇಳಿದ್ದಾರೆ.

ಜಿ23 ಬೆಂಬಲ: ಈ ನಡುವೆ ಪಕ್ಷ ಆಯೋಜಿಸಿರುವ ಯಾತ್ರೆಗೆ ಜಿ23 ನಾಯಕರು ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಆನಂದ್‌ ಶರ್ಮಾ (Anand Sharma), ಈ ಯಾತ್ರೆ ಪ್ರಜಾಪ್ರಭುತ್ವದ ಸಮಗ್ರ ಒಳಗೊಳ್ಳುವಿಕೆ ಮತ್ತು ಐಕ್ಯತೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಇದರ ನೇತೃತ್ವ ವಹಿಸಿರುವ ರಾಹುಲ್‌ ಗಾಂಧಿಗೆ (Rahul Gandhi) ಶುಭ ಹಾರೈಕೆಗಳು ಎಂದಿದ್ದಾರೆ.

ದ್ವೇಷ, ಪ್ರತ್ಯೇಕತೆಯಿಂದ ತಂದೆ ಕಳೆದುಕೊಂಡೆ: ರಾಹುಲ್‌

ದ್ವೇಷ ಮತ್ತು ಪ್ರತ್ಯೇಕತೆಯಿಂದಾಗಿ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ಆದರೆ ಭಾರತವನ್ನು ಎಂದಿಗೂ ಕಳೆದುಕೊಳ್ಳಲಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಭಾರತ್‌ ಜೋಡೋ ಯಾತ್ರೆಗೆ ಚಾಲನೆ ನೀಡುವ ಮೊದಲು ಶ್ರೀಪೆರಂಬದೂರಿನಲ್ಲಿರುವ ರಾಜೀವ್‌ ಗಾಂಧಿ ಸ್ಮಾರಕಕ್ಕೆ (Rajiv Gandhi Memorial) ಭೇಟಿ ನೀಡಿದ ರಾಹುಲ್‌ ಪುಷ್ಪ ನಮನ ಸಲ್ಲಿಸಿದರು. ಬಳಿಕ ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ‘ನಾನು ನನ್ನ ತಂದೆಯನ್ನು ದ್ವೇಷ ಮತ್ತು ಪ್ರತ್ಯೇಕ ರಾಜಕಾರಣದಿಂದಾಗಿ ಕಳೆದುಕೊಂಡೆ. ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ. ಭರವಸೆ ಭಯವನ್ನು ಗೆಲ್ಲುತ್ತದೆ. ಇವುಗಳ ಜೊತೆಗೆ ನಾವು ಗೆಲ್ಲುತ್ತೇವೆ’ ಎಂದು ಹೇಳಿದರು.ತಮ್ಮ ತಂದೆಯ ಸ್ಮಾರಕ ಸ್ಥಳಕ್ಕೆ ಇದು ರಾಹುಲ್‌ ಗಾಂಧಿ ಅವರ ಮೊದಲ ಭೇಟಿಯಾಗಿದೆ.

ಕೇಂದ್ರದ ವಿದ್ಯುತ್‌ ಕಾಯ್ದೆ ತಿರಸ್ಕರಿಸಿ: ರಾಜ್ಯಕ್ಕೆ ಸಿದ್ದು ಸವಾಲು

ಪರಿವಾರ್‌ ಜೋಡೋ ಯಾತ್ರೆ

ಕಾಂಗ್ರೆಸ್‌ ಪಕ್ಷ ಆರಂಭಿಸಿರುವ ‘ಭಾರತ್‌ ಜೋಡೋ’ ಯಾತ್ರೆ ಕುಟುಂಬ ಉಳಿಸಿಕೊಳ್ಳುವ ಯಾತ್ರೆಯಾಗಿದೆ. ಹೀಗಾಗಿ ಇದು ಪರಿವಾರ್‌ ಜೋಡೋ ಯಾತ್ರೆ. ಪಕ್ಷದ ಮೇಲೆ ಗಾಂಧಿ ಕುಟುಂಬದ ಹಿಡಿತ ಹೆಚ್ಚು ಮಾಡುವ ಯಾತ್ರೆ ಎಂದು ಬಿಜೆಪಿ ಟೀಕಿಸಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ (Kanyakumari) ಮುಖ್ಯಮಂತ್ರಿ ಸ್ಟಾಲಿನ್‌ ಹಾಗೂ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆಗೆ ಚಾಲನೆ ನೀಡಿದರು. ಕನ್ಯಾಕುಮಾರಿಯಲ್ಲಿ ಬೃಹತ್‌ ಸಭೆಗೂ ಮುನ್ನ ಯಾತ್ರೆಯ ಆರಂಭದ ಸಂಕೇತವಾಗಿ ರಾಹುಲ್‌ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹಾಗೂ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ (Bhupesh Baghel) ಅವರು ಖಾದಿ ರಾಷ್ಟ್ರಧ್ವಜ ನೀಡಿದರು. ಈ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿ ಅನೇಕರು ಹಾಜರಿದ್ದರು. ಬುಧವಾರ ಆರಂಭವಾದ ಈ ಯಾತ್ರೆ 3570 ಕಿ.ಮೀ. ನಡೆಯಲಿದ್ದು, 5 ತಿಂಗಳ ಬಳಿಕ ಕಾಶ್ಮೀರದಲ್ಲಿ ಅಂತ್ಯವಾಗಲಿದೆ.

 

Follow Us:
Download App:
  • android
  • ios