ನವದೆಹಲಿ(ಸೆ.28) ಜೀವನವೆಂಬುವುದು ದೀರ್ಘವಾಗಿರಬೇಕಿಲ್ಲ, ಆದರೆ ದೊಡ್ಡದಾಗಿರಬೇಕು. ಇದನ್ಉ ಯಾರೆಲ್ಲಾ ಅಳವಡಿಸಿಕೊಂಡು ಬದುಕಿದರೋ ಅವರೆಲ್ಲರೂ ಇಂದು ಅಮರರಾಗಿದ್ದಾರೆ. ಇದೇ ರೀತಿ ಬದುಕಿದವರಲ್ಲಿ ಶಹೀದ್-ಎ-ಆಜಂ ಭಗತ್ ಸಿಂಗ್ ಕೂಡಾ ಒಬ್ಬರು. ಭಗತ್ ಸಿಂಗ್ 28 ಸೆಪ್ಟೆಂಬರ್ 1907 ದು ಜನಿಸಿದ ಭಾರತ ಮಾತೆಯ ಸುಪುತ್ರ 1931ರ ಮಾರ್ಚ್ 23 ರಂದು ನಗು ನಗುತ್ತಲೇ ಗಲ್ಲಿಗೇರಿದ್ದರು. ಅದಮ್ಯ ಸಾಹಸದಿಂದ ಬ್ರಿಟಿಷರನ್ನು ನಡುಗುವಂತೆ ಮಾಡಿದ್ದ ಭಗತ್ ಸಿಂಗ್ ರಕ್ತದ ಕಣ ಕಣದಲ್ಲೂ ದೇಶಭಕ್ತಿ ಹಾಗೂ ಕ್ರಾಂತಿಯ ಕಿಚ್ಚಿತ್ತು. ಹೀಗಾಗೇ ಅವರು 'ಬೂದಿಯ ಪ್ರತಿಯೊಂದು ಕಣವೂ ನನ್ನ ಶಾಖದಿಂದ ಚಲಿಸುತ್ತಿದೆ. ಹೀಗಾಗೇ ಜೈಲಿನಲ್ಲಿಯೂ ಸ್ವತಂತ್ರನಾಗಿರುವ ಒಬ್ಬ ಹುಚ್ಚ ನಾನು' ಎನ್ನುತ್ತಿದ್ದರು.

ಇಡೀ ಕುಟುಂಬದಲ್ಲೇ ದೇಶಭಕ್ತಿಯ ಕಿಚ್ಚು

ಭಗತ್ ಸಿಂಗ್ ಪಾಕಿಸ್ತಾನದ ಒಂದು ಸಿಖ್ ಕುಟುಂಬದಲ್ಲಿ ಜನಿಸಿದ್ದರು. ಭಗತ್ ಜನಿಸಿದ್ದಾಗ ಅವರ ತಂದೆ ಕಿಶನ್ ಸಿಂಗ್ ಜೈಲಿನಲ್ಲಿದ್ದರು. ಅವರ ಚಿಕ್ಕಪ್ಪ ಅಜೀತ್ ಸಿಂಗ್ ಕೂಡಾ ಬ್ರಿಟಿಷರ ವಿರುದ್ಧ ಹೋರಾಡಿಕೊಡಿದ್ದರು. ಹೀಗಾಗಿ ಬ್ರಿಟಿಷ್ ಸರ್ಕಾರ ಅಜೀತ್ ಸಿಂಗ್ ವಿರುದ್ಧ ಬರೋಬ್ಬರಿ 22 ಪ್ರಕರಣ ದಾಖಲಿಸಿತ್ತು. ಇದಾದ ಬಳಿಕ ಅವರು ಇರಾನ್‌ನಲ್ಲಿ ದಿನ ಕಳೆಯಬೇಕಾಯ್ತು. ಅಲ್ಲಿ ಅವರು ಆಜಾದ್ ಹಿಂದ್ ಸೈನ್ಯ ಸ್ಥಾಪಿಸಿ ಕ್ರಾಂತಿಯ ಕಿಚ್ಚು ಆರದಂತೆ ನೋಡಿಕೊಂಡರು.

ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ

ಅಜ್ಜ ಅಜ್ಜಿಯ ಮಡಿಲಲ್ಲಿ ಬೆಳೆದ ಭಗತ್ ಸಿಂಗ್

ಸರ್ದಾರ್ ಕಿಶನ್ ಸಿಂಗ್ ಹಾಗೂ ವಿದ್ಯಾವತಿ ದಂಪತಯ ಮಗನಾಗಿ ಜನಿಸಿದ ಭಗತ್ ಸಿಂಗ್ ಬೆಳೆದದ್ದು ಮಾತ್ರ ಅಜ್ಜಅರ್ಜುನ್ ಸಿಂಗ್ ಹಾಗೂ ಅಜ್ಜಿ ಜೈಕೌರ್ ಮಡಿಲಲ್ಲಿ. ತಮ್ಮ ಮುದ್ದಿನ ಮಗನನ್ನು ಭಾಗ್ಯಶಾಲಿಎಂದು ಅವರು ಭಗತ್ ಸಿಂಗ್ ಎಂದು ನಾಮಕರಣ ಮಾಡಿದರು. ಭಗತ್ ಜನಿಸಿದ ಕೆಲವೇ ಸಮಯದಲ್ಲಿ ಸ್ವಾತಂತ್ರ್ಯ ಸೇನಾನಿಯಾಗಿ ಲಾಹೋರ್ ಜೈಲಿನಲ್ಲಿ ಬಂಧಿಯಾಗಿದ್ದ ಅವರ ತಂದೆ ಕಿಶನ್‌ ಸಿಂಗ್‌ರನ್ನು ಬಿಡುಗಡೆಗೊಂಡಿದ್ದರು ಹಾಗೂ ಜನಿಸಿದ ಮೂರು ದಿನಗಳಲ್ಲೇ ಅವರ ಇಬ್ಬರು ಚಿಕ್ಕಪ್ಪಂದಿರನ್ನು ಜಾಮೀನಿನ ಮೇಲೆ ಬಿಟ್ಟಿದ್ದರು. ಹೀಗಾಗೇ ಭಗತ್ ಸಿಂಗ್‌ರನ್ನು ಭಾಗ್ಯಶಾಲಿ ಎಂದೇ ಕರೆಯಲಾಗುತ್ತಿತ್ತು.

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಪ್ರಭಾವ
 
1919ನ ಏಪ್ರಿಲ್ 13ರಂದು ಬೈಸಾಖಿಯ ದಿನದಂದು ರೌಲತ್ ಆಕ್ಟ್‌ ವಿರೋಧಿಸಿ ದೇಶದ ಅನೇಕ ಮಂದಿ ಜಲಿಯನ್‌ವಾಲಾ ಬಾಗ್‌ನಲ್ಲಿ ಸಭೆ ಸೇರಿದ್ದರು. ಆದರೆ ಬ್ರಿಟಿಷರಿಗೆ ಇದು ಇಷ್ಟವಿರಲಿಲ್ಲ. ಹೀಗಿರವಾಗ ಜನರಲ್ ಡಾಯರ್‌ರ ಕ್ರೂರ ಹಾಗೂ ನಿರ್ದಯಿ ಆದೇಶದನ್ವಯ ಆಯುಧಗಳಿಲ್ಲದೇ ಸೇರಿದ್ದ ಜನರ ಮೇಲೆ ಬ್ರಿಟಿಷ್ ಸೈನಿಕರು ಗುಂಡುಗಳ ಸುರಿಮಳೆಗೈದಿದ್ದರು. ಈ ಕ್ರೂರ ಕೃತ್ಯ ದೇಶಾದ್ಯಂತ ಕ್ರಾಂತಿ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿತು.

12 ವರ್ಷದ ಭಗತ್ ಸಿಂಗ್ ಮೇಲೂ ಈ ಸಾಮೂಹಿಕ ಹತ್ಯಾಕಾಂಡ ಭಾರೀ ಪ್ರಭಾವ ಬೀರಿತು. ಹೀಗಾಗೇ ಅವರು ಜಲಿಯನ್‌ವಾಲಾ ಬಾಗ್‌ನ ರಕ್ತರಂಜಿತ ನೆಲದಿಂದ ತಾನು ಬ್ರಿಟಿಷ್ ಸರ್ಕಾರದ ವಿರುದ್ಧ ಸ್ವಾತಂತ್ರ್ಯದ ಕಹಳೆ ಮೊಳಗಿಸುವುದಾಗಿ ಶಪಥ ಮಾಡಿದರು. ಲಾಹೋರ್ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ತೊರೆದ ಅವರು ಯುವಜನ ಭಾರತ ಸಭೆ ಎಂಬ ಸಂಘಟನೆ ಸ್ಥಾಪಿಸಿದರು.

ಸೋನಂ ಕಪೂರ್‌ಗೆ ಗಾಂಧಿಜೀ ಬಗ್ಗೆ ಗೊತ್ತೇ ಇಲ್ವಂತೆ! ನೆಟ್ಟಿಗರಿಂದ ಕಾಲೆಳೆಸಿಕೊಂಡ್ರು 'ರಾಂಜಾ' ಬೆಡಗಿ!

ಮದುವೆಗ ಒತ್ತಾಯಿಸಿದ ಕುಟುಂಬಸ್ಥರು, ಮನೆ ಬಿಟ್ಟ ಭಗತ್

ಒಂದು ಸಮಯದಲ್ಲಿ ಮನೆಮಂದಿಯೆಲ್ಲಾ ಭಗತ್ ಸಿಂಗ್ ಮೇಲೆ ಮದುವೆಯಾಗುವಂತೆ ಭಾರೀ ಒತ್ತಡ ಹಾಕರಾಮಭಿಸಿದ್ದರು. ಆಧರೆ ಭಗತ್ ಸಿಂಗ್ ಪಾಲಿಗೆ ಸ್ವಾತಂತ್ರ್ಯವೇ ಮದುಮಗಳಂತಿತ್ತು. ಹೀಗಾಗೇ ಮನೆಯವರ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಮನೆ ಬಿಟ್ಟು ಹೋಗಿದ್ದರು. ಈ ವೇಳೆ 'ನನ್ನ ಜೀವನ ಬಹುದೊಡ್ಡ ಉದ್ದೇಶ ಅಂದರೆ ಆಜಾದ್-ಎ- ಹಿಂದ್‌ಗಾಗಿ ಸಮರ್ಪಿಸಿದ್ದೇನೆ' ಎಂದಿದ್ದರು.

ಹೀಗಾಗಿ ನನ್ನ ಜೀವನದಲ್ಲಿ ವಿಶ್ರಾಂತಿ ಹಾಗೂ ಐಷಾರಾಮಿತನಕ್ಕೆ ಯಾವುದೇ ಜಾಗವಿಲ್ಲ ಎಂದೂ ಹೇಳಿದ್ದರು. ಇದಾದ ಬಳಿಕ ಮನೆಯವರು ಮದುವೆಗೆ ಒತ್ತಾಯಿಸುವುದಿಲ್ಲ ಎಂದು ಹೇಳಿದ ಬಳಿಕವಷ್ಟೇ ಮರಳಿದ್ದರು.

ದೆಹಲಿಯ ಸೆಂಟ್ರಲ್ ಅಸೆಂಬ್ಲಿ ಮೇಲೆ ಬಾಂಬ್ ಎಸೆದರು

ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಭರಿತ ನೀತಿಗಳ ವಿರುದ್ಧ ಪಂಜಾಬ್ ಕೇಸರಿ ಲಾಲಾ ಲಜಪತರಾಯ್ ಶಾಂತಿಪೂರ್ವಕ ಪ್ರತಿಭಟನೆ ನಡೆಸುತ್ತಿದ್ದರು. ಆಗಲೇ ಪೊಲೀಸ್ ಅಧೀಕ್ಷಕ ಸ್ಕಾಟ್ ಹಾಗೂ ಅವರ ಸಹೋದ್ಯೋಗಿಗಳು ಅವರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಲಾಲಾ ಲಜಪತರಾಯ್ ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ ನವೆಂಬರ್ 17 ರಂದು ಕೊನೆಯುಸಿರೆಳೆದರು. ಅವರ ನಿಧನದ ಬಳಿಕ ರೋಸಿ ಹೋಗಿದ್ದ, ಸ್ವಾತಂತ್ರ್ಯದ ಹಸಿವಿನಿಂದಿದ್ದ ಭಗತ್ ಸಿಂಗ್ ಲಾಹೋರ್‌ನಲ್ಲಿ ಮೊದಲು 'ಸಾಡರ್ಸ್‌ ವಧ್' ಮಾಡಿದರು. ಇದಾಧ ಬಳಿಕ ದೆಹಲಿಯ ಸೆಂಟ್ರಲ್ ಅಸೆಂಬ್ಲಿ ಮೇಲೆ ಚಂದ್ರಶೇಖರ್ ಆಜಾದ್ ಹಾಗೂ ಅವರ ಬೆಂಬಲಿಗರೊಂದಿಗೆ ಸೇರಿ ಬಾಂಬ್ ಸ್ಫೋಟಿಸಿ ಬ್ರಿಟಿಷರ ವಿರುದ್ಧ ಬಹಿರಂಗ ಸಮರ ಸಾರಿದರು.

ಭಗತ್ ಸಿಂಗ್ ಈ ಎಲ್ಲಾ ಚಟುವಟಿಕೆಗಳಿಗೆ ವೀರ್‌ ಸಾವರ್ಕರ್‌ರವರ ಕ್ರಾಂತಿದಳ ಅಭಿನವ ಭಾರತದ ಸಹಾಯವನ್ನೂ ಪಡೆದಿದ್ದರು, ಇದೇ ದಳದ ಮೂಲಕ ಬಾಂಬ್ ತಯಾರಿಸುವ ವಿಧಾನ ಕಲಿತಿದ್ದರು. ವೀರ ಸ್ವಾತಂತ್ರ್ಯ ಸೇನಾನಿ ತನ್ನ ಇಬ್ಬರು ಅನ್ಯ ಜೊತೆಗಾರರಾದ ಸುಖ್‌ದೇವ್ ಹಾಗೂ ರಾಜ್‌ಗುರು ಜೊತೆ ಸೇರಿ ಕಾಕೋರಿ ಹತ್ಯಾಕಾಂಡ ನಡೆಸಿದರು. ಇದಾದ ಬಳಿಕ ಬ್ರಿಟಿಷರು ಭಗತ್ ಸಿಂಗ್ ಹೆಸರು ಕೇಳುತ್ತಿದ್ದಂತೆಯೇ ಭಯದಿಂದ ನಡುಗಲಾರಂಭಿಸಿದರು.

ಭಗತ್ ಸಿಂಗ್ ಬಂಧನ

ಸೆಂಟ್ರಲ್ ಅಸೆಂಬ್ಲಿ ಮೇಲೆ ಬಾಂಬ್ ಸ್ಫೋಟಿಸಿದ ಬಳಿಕ ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಲಾರಂಭಿಸಿತು. ಭಗತ್ ಸಿಂಗ್ ಹಾಗೂ ಭಟುಕೇಶ್ವರ್ ಬಂಧನವಾಯಿತು. ಇಬ್ಬರ ಮೇಲೂ ಪ್ರಕರಣ ಸಂಬಂಧ ಕೇಸ್ ದಾಖಲಾಯ್ತು. ಸುಖ್‌ದೇವ್ ಹಾಗೂ ರಾಜ್‌ಗುರು ಬಂಧನವಾಯ್ತು. 1930 ರ ಅಕ್ಟೋಬರ್ 7 ರಂದು ಭಗತ್ ಸಿಂಗ್, ಸುಖ್‌ದೇವ್ ಹಾಗೂ ಗುರುದೇವ್‌ರನ್ನು ಗಲ್ಲಿಗೇರಿಸಲು ತೀರ್ಪು ನೀಡಲಾಯ್ತು. ಅತ್ತ ಬಟುಕೇಶ್ವರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಯ್ತು.

ಜೈಲಿನಲ್ಲಿ ಕೊನೆಯ ಕ್ಷಣಗಳು ಹೀಗೆ ಕಳೆದವು

ಭಗತ್ ಸಿಂಗ್‌ಗೆ ಪುಸ್ತಕ ಓದುವ ಹವ್ಯಾಸವಿತ್ತು. ತಮ್ಮ ಕೊನೆಯ ಕ್ಷಣದಲ್ಲಿ ಅವರು ರೆವೆಲ್ಯೂಶನರಿ ಲೆನಿನ್ ಎಬ ಪುಸ್ತಕ ತರಿಸಿಕೊಂಡಿದ್ದರು. ಅವರ ವಕೀಲ ಪ್ರಾಣನಾಥ ಮೆಹ್ತಾ ಅವರನ್ನು ಭೇಟಿಯಾಗಲು ತಲುಪಿದ್ದರು. ಭಗತ್ ಸಿಂಗ್ ಪುಸ್ತಕ ಕೇಳಿದ್ದು, ಅವರ ವಕೀಲ ನೀಡಿದ್ದರು. ಪುಸ್ತಕ ಕೈ ತಲುಪಿದ ಕ್ಷಣದಿಂದಲೇ ಅವರು ಓದಲು ಆರಂಭಸಿದ್ದರು. ಇದಾಧ ಬಳಿಕ ಮೆಹ್ತಾರವರು ದೇಶಕ್ಕೇನಾದರೂ ಸಂದೇಶ ನೀಡಲಿಚ್ಛಿಸುತ್ತೀರಾ? ಎಂದು ಪ್ರಶ್ನಿಸಿದರು. ಕೇವಲ ಎರಡು ಸಂದೇಶ ನೀಡಲಿಚ್ಛಿಸುತ್ತೇನೆ ಎಂದಿದ್ದ ಭಗತ್ ಸಿಂಗ್ ಸಾಮ್ರಾಜ್ಯಶಾಹಿ ಮುರ್ದಾಬಾದ್ ಮತ್ತು 'ಇಂಕ್ವಿಲಾಬ್ ಜಿಂದಾಬಾದ್' ಎಂದಿದ್ದರು.

ಕೆಲ ಕ್ಷಣಗಳಲ್ಲೇ ಭಗತ್ ಸಿಂಗ್  ಸೇರಿ ಸುಖ್‌ದೇವ್ ಹಾಗೂ ರಾಜ್‌ಗುರು ಮೂವರನ್ನೂ ಗಲ್ಲಿಗೇರಿಸಲು ಜೈಲು ಕೋಣೆಯಿಂದ ಹೊರ ತರಲಾಯ್ತು. ಸ್ವಾಂತಂತ್ರ್ಯ ವೀರರು ಭಾರತಾಂಬೆಗೆ ನಮಿಸಿದರು, ಸ್ವಾತಂತ್ರ್ಯದ ಹಾಡುಗಳನ್ನು ಹಾಡುತ್ತಲೇ ಗಲ್ಲಿಗೇರಿದರು.