ಮುಂಬೈ( ಮೇ 23)  ಕೊರೋನಾ  ವೈರಸ್ ವಿರುದ್ಧ ಹೋರಾಟ ನಿರಂತರ. ಕೊರೋನಾ ಸುಲೀಗೆ ಸಿಕ್ಕಿ ಸಾವನ್ನಪ್ಪುವವರು ಕಡಿಮೆ ಏನಿಲ್ಲ.. ಎಲ್ಲವೂ ಘೋರಾತಿ ಘೋರ.  ಈ ಪೊಲೀಸ್ ಅಧಿಕಾರಿ ಕೊರೋನಾ ಸಂಕಷ್ಟದ ವೇಳೆ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಮಹತ್ಕಾರ್ಯ ಒಂದನ್ನು ಮಾಡಿಕೊಂಡು ಬಂದಿದ್ದಾರೆ. 

ಶಹು ನಗರ್ ಪೊಲೀಸ್  ಸ್ಟೇಶನ್ ಸಿಬ್ಬಂದಿ ಸಂಧ್ಯಾ ಶೀಲವಂತ್ ನಾಯ್ಕ್ ಆಕ್ಸಿಡೆಂಟ್ ಡೆತ್ ರಿಜಿಸ್ಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪಘಾತ ಪ್ರಕರಣ ತನಿಖೆ ಮಾಡಿ  ಶವಗಳ ಗುರುತು ಪತ್ತೆಹಚ್ಚುವುದು ಕೆಲಸ.

ಕೊರೋನಾ ವಾರಿಯರ್ಸ್ ಮೇಲೆ ಮತ್ತೆ ದಾಳಿ, ಮಸೀದಿ ಮುಂದೆ ಪೊಲೀಸರ ಅಟ್ಯಾಕ್

ಕೊರೋನಾ ವೈರಸ್ ಗೆ ಸಿಕ್ಕು ಸಾವನ್ನಪ್ಪಿ ಯಾರ ಕುಟುಂಬಕ್ಕೂ ಸೇರದ ಅನಾಥ ಶವಗಳನ್ನು ಈ ಅಧಿಕಾರಿಯೇ ಮುಂದಾಗಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಕೊರೋನಾದಿಂದ ಸಾವನ್ನಪ್ಪಿದ್ದ 4 ಶವಗಳಿಗೆ ಮುಕ್ತಿ ಕಾಣಿಸಿದ್ದಾರೆ. ಈ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಿಂದ ಮೆಚ್ಚುಗೆಗಳ ಮಹಾಪೂರ ಹರಿದುಬಂದಿದೆ.  ಉತ್ತಮ ಕೆಲಸಕ್ಕೆ ನಾವು ಒಂದು ಅಭಿನಂದನೆ ಹೇಳೋಣ.

ಕೊರೋನಾ ವಿರುದ್ಧ ಹೋರಾಟಕ್ಕೆ ಸಂಘ ಸಂಸ್ಥೆಗಳು ರಾಜಕೀಯ ನಾಯಕರು,  ರೈತರು ಎಲ್ಲರೂ ತಮ್ಮದೇ ಆದ ಕೊಡುಗೆ ನೀಡಿಕೊಂಡು ಬಂದಿದ್ದಾರೆ.  ಆದರೆ ಅನಾಥ ಶವಗಳನ್ನು ಮಣ್ಣು ಮಾಡುವ ಈ ಅಧಿಕಾರಿ ಎಲ್ಲಕ್ಕಿಂತ ಮಿಗಿಲಾಗಿ ನಿಲ್ಲುತ್ತಾರೆ.